ಏರ್ಟೆಲ್ VS ಜಿಯೋ! ಏರ್ಟೆಲ್ 4G ಸ್ಮಾರ್ಟ್ಫೋನ್ ಬಿಡುಗಡೆಗೆ ವೇದಿಕೆ ಸಿದ್ದತೆ

Written By: Siddu
Subscribe to GoodReturns Kannada

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ತನ್ನ 4G ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ವೇದಿಕೆ ಸಿದ್ದತೆ ಮಾಡುತ್ತಿದೆ. ಜಿಯೋಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಏರ್ಟೆಲ್ ಕೂಡ ಜಿಯೋಗೆ ಪೈಪೋಟಿ ನೀಡಲು ಮುಂದಾಗಿದೆ!

ಜಿಯೋ ಫೋನ್ ಆನ್ಲೈನ್ ಮೂಲಕ ಬುಕಿಂಗ್ ಮಾಡಿ ಪಡೆಯೋದು ಹೇಗೆ?

ದೀಪಾವಳಿಗೆ ಬಿಡುಗಡೆ!

ಏರ್ಟೆಲ್ ದೀಪಾವಳಿಗೆ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಧಮಾಕಾ ನೀಡಲಿದೆ! ಸ್ಮಾರ್ಟ್ಫೋನ್ ಗಾಗಿ ಏರ್ಟೆಲ್ ಹ್ಯಾಂಡ್ ಸೆಟ್ ತಯಾರಕ ಸಂಸ್ಥೆಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದೆ. ದೀಪಾವಳಿ ವೇಳೆಗೆ ಏರ್ ಟೆಲ್ ಸ್ಮಾರ್ಟ್ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ.

ಸ್ಮಾರ್ಟ್ಫೋನ್ ಬೆಲೆ

ಏರ್ಟೆಲ್ ಸ್ಮಾರ್ಟ್ಫೋನ್ ನ ಬೆಲೆ ರೂ. 2,500 ರಿಂದ 2,700 ನಡುವೆ ಇರಲಿದ್ದು, ಜಿಯೋಫೋನ್ಗೆ ಪೈಪೋಟಿ ನೀಡುವುದು ಖಚಿತ! ಏರ್ಟೆಲ್ 4G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ನಂತರ ಆಕರ್ಷಕ 4G ಡೇಟಾ ಯೋಜನೆ ಘೋಷಿಸಲಿದೆ ಎನ್ನಲಾಗಿದೆ. ಏರ್ಟೆಲ್ ಫೋನ್ ದೊಡ್ಡ ಸ್ಕ್ರೀನ್ ಮತ್ತು ಉತ್ತಮ ಗುಣಮಟ್ಟದ ಕ್ಯಾಮೆರಾ ಹಾಗೂ ಉತ್ತಮ ಕಾರ್ಯಕ್ಷಮತೆಯ ಬ್ಯಾಟರಿ ವೈಶಿಷ್ಟ್ಯತೆ ಹೊಂದಿರಲಿದೆ.

ಜಿಯೋ ಫೋನ್ ಬೆಲೆ

ಜಿಯೋಫೋನ್ ಖರೀದಿಸಿದ ಮೂರು ವರ್ಷಗಳ ನಂತರ ಗ್ರಾಹಕರು ಫೋನ್‌ ಹಿಂದಿರುಗಿಸಿದರೆ ರೂ. 1,500 ಮರಳಿಸಲಾಗುವುದು ಎಂದು ಸಂಸ್ಥೆ ಹೇಳಿದೆ. ಅಂದರೆ ಜಿಯೋಫೋನ್ ನಿಮಗೆ ಜಿರೋ ಬೆಲೆಯಲ್ಲಿ ಸಿಕ್ಕಿದಂತಾಗುತ್ತದೆ.

English summary

Airtel working on Rs 2,500 4G phone to beat JioPhone

India's largest telecom operator Bharti Airtel in talks with multiple handset makers to bring a 4G smartphone for a price as low as Rs 2,500-2,700 to take on Reliance Jio.
Story first published: Monday, September 11, 2017, 17:39 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns