Englishहिन्दी മലയാളം தமிழ் తెలుగు

ಜನ ಧನ ಯೋಜನೆ (PMJDY) ಅಡಿ 30 ಕೋಟಿ ಕುಟುಂಬಗಳಿಗೆ ಬ್ಯಾಂಕ್ ಖಾತೆ

Written By: Siddu
Subscribe to GoodReturns Kannada

ಪ್ರಧಾನಮಂತ್ರಿ ಜನ ಧನ ಯೋಜನೆ (ಪಿಎಂಜೆಡಿವೈ) ಜಾರಿ ಬಂದ ಕಳೆದ ಮೂರು ವರ್ಷಗಳಲ್ಲಿ ಸುಮಾರು 30 ಕೋಟಿ ಕುಟುಂಬಗಳು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಜನಧನ ಯೋಜನೆ ಅನುಷ್ಠಾನದ ಪೂರ್ವದಲ್ಲಿ ಶೇ. 42ರಷ್ಟು ಕುಟುಂಬಗಳು ಬ್ಯಾಂಕ್ ಸೌಲಭ್ಯ ಹೊಂದಿರಲಿಲ್ಲ. ದೇಶದ ಪ್ರತಿಯೊಬ್ಬರಿಗೂ ಶೂನ್ಯ ಬ್ಯಾಲೆನ್ಸ್ ಖಾತೆ ಮೂಲಕ ಬ್ಯಾಂಕಿಂಗ್ ಸೌಲಭ್ಯ ಒದಗಿಸುವುದು ಜನಧನ್ ಯೋಜನೆ ಉದ್ದೇಶವಾಗಿದೆ. 'ಪ್ರಧಾನ ಮಂತ್ರಿ ಜನ ಧನ ಖಾತೆ' ಯಾಕೆ ತೆರೆಯಬೇಕು?

ಬ್ಯಾಂಕಿಂಗ್ ಸೌಲಭ್ಯ

ಜನಧನ ಯೋಜನೆ ಅನುಷ್ಠಾನದ ಪರಿಣಾಮವಾಗಿ ಶೇ. 99 ಕುಟುಂಬಗಳು ಕನಿಷ್ಟ ಒಂದಾದರೂ ಬ್ಯಾಂಕ್ ಖಾತೆಯನ್ನು ಹೊಂದಿವೆ. ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲು ದೇಶದ ಎಲ್ಲಾ ವಾಣಿಜ್ಯಾತ್ಮಕ ಬ್ಯಾಂಕುಗಳ ಮೂಲಕ ಶೂನ್ಯ ಬ್ಯಾಲೆನ್ಸ್ ಖಾತೆ ಅವಕಾಶ ನೀಡಲಾಗುತ್ತಿದೆ.

ಶೂನ್ಯ ಬ್ಯಾಲೆನ್ಸ್ ಖಾತೆ

ಶೂನ್ಯ ಬ್ಯಾಲೆನ್ಸ್ ಖಾತೆಗಳ (zero balance accounts) ಸಂಖ್ಯೆ ಶೇ. 77 ರಿಂದ ಶೇ. 20ಕ್ಕೆ ಕಡಿಮೆಯಾಗಿದೆ. 2014ರಲ್ಲಿ ಯೋಜನೆ ಲಾಂಚ್ ಮಾಡಿದಾಗ ಶೇ. 76.81 ರಷ್ಟು ಖಾತೆಗಳು ಶೂನ್ಯ ಬ್ಯಾಲೆನ್ಸ್ ಹೊಂದಿದ್ದವು.

ಪಿಎಂಜೆಜಬಿವೈ, ಪಿಎಂಎಸ್ಬಿವೈ ಯೋಜನೆ

ಬಡವರಿಗೆ ಭದ್ರತೆ ಒದಗಿಸುವ ಉದ್ದೇಶಕ್ಕಾಗಿ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮ್ ಯೋಜನೆ (PMJJBY) ಪ್ರಾರಂಭಿಸಲಾಗಿದ್ದು, ಲೈಫ್ ಇನ್ಸೂರೆನ್ಸ್ ನೀಡಲಿದೆ. ಪ್ರಧಾನಮಂತ್ರಿ ಸುರಕ್ಷ ಬಿಮ್ ಯೋಜನೆ (PMSBY) ಮೂಲಕ ಅಪಘಾತ ವಿಮೆ ಸಿಗಲಿದೆ ಎಂದರು.

English summary

30 crore bank accounts opened under Jan Dhan (pmjdy)

30 crore families have got bank accounts since the launch of India’s biggest ever bank account opening drive, Jan Dhan Yojana.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns