For Quick Alerts
ALLOW NOTIFICATIONS  
For Daily Alerts

ಬಿಜೆಪಿ ದೇಶದ ಶ್ರೀಮಂತ ಪಕ್ಷ..! ಆಸ್ತಿ ಎಷ್ಟು ಗೊತ್ತೆ?

ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಬಿಜೆಪಿಯ ಆದಾಯ ಶೇ. 44ರಷ್ಟು ವೃದ್ಧಿಯಾಗಿದೆ. 2015-16ನೇ ಸಾಲಿನಲ್ಲಿ ಪಕ್ಷಗಳ ಆಸ್ತಿಯ ಅಂಕಿ-ಅಂಶಗಳನ್ನು ಅಸೋಷಿಯೇಷನ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಎಆರ್) ಎಂಬ ಸಂಸ್ಥೆ ಬಹಿರಂಗಪಡಿಸಿದೆ.

By Siddu
|

ದೇಶದ ಶ್ರೀಮಂತ ಪಕ್ಷ ಯಾವುದು ಇರಬಹುದು ಎಂಬ ಪ್ರಶ್ನೆ ಇದಕ್ಕೂ ಮುನ್ನ ಅನೇಕರಲ್ಲಿ ಮೂಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.!

 

ಕೇಂದ್ರದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಒಟ್ಟು ರೂ. 894 ಕೋಟಿ ಆಸ್ತಿಯನ್ನು ಘೋಷಿಸಿಕೊಳ್ಳುವ ಮೂಲಕ ಭಾರತದ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ ಬಿಜೆಪಿಯ ಆದಾಯ ಶೇ. 44ರಷ್ಟು ವೃದ್ಧಿಯಾಗಿದೆ.

ಬಿಜೆಪಿ ದೇಶದ ಶ್ರೀಮಂತ ಪಕ್ಷ..! ಆಸ್ತಿ ಎಷ್ಟು ಗೊತ್ತೆ?

2015-16ನೇ ಸಾಲಿನಲ್ಲಿ ಪಕ್ಷಗಳ ಆಸ್ತಿಯ ಅಂಕಿ-ಅಂಶಗಳನ್ನು ಅಸೋಷಿಯೇಷನ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಎಆರ್) ಎಂಬ ಸಂಸ್ಥೆ ಬಹಿರಂಗಪಡಿಸಿದೆ.

'ಮುಖ್ಯಮಂತ್ರಿ ಅನಿಲ ಭಾಗ್ಯ' ಯೋಜನೆ ಅಡಿ ಉಚಿತ ಗ್ಯಾಸ್(LPG) ಪಡೆಯುವುದು ಹೇಗೆ?'ಮುಖ್ಯಮಂತ್ರಿ ಅನಿಲ ಭಾಗ್ಯ' ಯೋಜನೆ ಅಡಿ ಉಚಿತ ಗ್ಯಾಸ್(LPG) ಪಡೆಯುವುದು ಹೇಗೆ?

2ನೇ ಸ್ಥಾನದಲ್ಲಿ ಕಾಂಗ್ರೆಸ್

2ನೇ ಸ್ಥಾನದಲ್ಲಿ ಕಾಂಗ್ರೆಸ್

ಕೇಂದ್ರದಲ್ಲಿ ಅತಿಹೆಚ್ಚು ಅವಧಿವರೆಗೆ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ರೂ. 759 ಕೋಟಿ ಆಸ್ತಿ ಹೊಂದುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇವರು ಭಾರತದ ಅತ್ಯಂತ ಭ್ರಷ್ಟ ರಾಜಕಾರಣಿಗಳು

ಯಾವ ಪಕ್ಷದ ಆಸ್ತಿ ಎಷ್ಟು?

ಯಾವ ಪಕ್ಷದ ಆಸ್ತಿ ಎಷ್ಟು?

ಬಿಜೆಪಿ ರೂ. 894 ಕೋಟಿ, ಕಾಂಗ್ರೆಸ್ ರೂ. 758.79 ಕೋಟಿ, ಬಿಎಸ್‍ಪಿ ರೂ. 559 ಕೋಟಿ, ಸಿಪಿಎಂ ರೂ. 437.78 ಕೋಟಿ, ಎಐಟಿಸಿ ರೂ. 44.99 ಕೋಟಿ, ಎನ್‍ಸಿಪಿ ರೂ. 14.54 ಕೋಟಿ, ಸಿಪಿಐ ರೂ. 10.18 ಕೋಟಿಆ ಸ್ತಿಯನ್ನು ಹೊಂದಿದೆ ಎಂದು ಎಡಿಆರ್ ವರದಿ ಮಾಡಿದೆ.

ಯಾವ ಪಕ್ಷದ ಸಾಲ ಎಷ್ಟು?
 

ಯಾವ ಪಕ್ಷದ ಸಾಲ ಎಷ್ಟು?

ಅತಿಹೆಚ್ಚು ಸಾಲ ಕಾಂಗ್ರೆಸ್ ಪಕ್ಷ ಹೊಂದಿದ್ದು, ರೂ. 329.43 ಕೋಟಿ ಸಾಲವಿದೆ. ಬಿಜೆಪಿ ರೂ. 24.99 ಕೋಟಿ, ಎಐಟಿಸಿ ರೂ. 12.07 ಕೋಟಿ, ಸಿಪಿಐ ರೂ. 8.79 ಕೋಟಿ, ಸಿಪಿಐಎಂ ರೂ. 20.285 ಕೋಟಿ, ಬಿಎಸ್‍ಪಿ ರೂ. 1.63 ಕೋಟಿ, ಎನ್‍ಸಿಪಿಗೆ ರೂ. 95 ಲಕ್ಷ ಸಾಲವನ್ನು ಹೊಂದಿವೆ.

ಬಿಜೆಪಿ-ಕಾಂಗ್ರೆಸ್ ಆಸ್ತಿ ಹೋಲಿಕೆ

ಬಿಜೆಪಿ-ಕಾಂಗ್ರೆಸ್ ಆಸ್ತಿ ಹೋಲಿಕೆ

2004-05ರ ಅವಧಿಯಲ್ಲಿ ಬಿಜೆಪಿ ರೂ. 123.93 ಕೋಟಿ ಆಸ್ತಿ ಹೊಂದಿತ್ತು. 11 ವರ್ಷದಲ್ಲಿ ಬಿಜೆಪಿ ಆಸ್ತಿ ಪ್ರಮಾಣ ರೂ. 893.88 ಕೋಟಿಗೆ ಹೆಚ್ಚಾಗಿದೆ. 2004-05ರ ಅವಧಿಯಲ್ಲಿ ಕಾಂಗ್ರೆಸ್ ಆಸ್ತಿ ಪ್ರಮಾಣ ರೂ. 167.35 ಕೋಟಿಯಷ್ಟಿತ್ತು. ಆದರೆ ಈಗ ರೂ. 758.79 ಕೋಟಿ ಏರಿಕೆ ಕಂಡಿದೆ. ಎರಡು ಪಕ್ಷಗಳ ಆದಾಯ ಗಣನೀಯವಾಗಿ ಹೆಚ್ಚಳವಾಗಿದೆ.

ಬಿಜೆಪಿ-ಕಾಂಗ್ರೆಸ್ ಸಾಲದ ಹೋಲಿಕೆ

ಬಿಜೆಪಿ-ಕಾಂಗ್ರೆಸ್ ಸಾಲದ ಹೋಲಿಕೆ

2004-05 ರ ಅವಧಿಯಲ್ಲಿ ಬಿಜೆಪಿ ಪಕ್ಷ ರೂ. 14.29 ಕೋಟಿ ಸಾಲ ಹೊಂದಿತ್ತು. 2015-16ರ ಅವಧಿಯಲ್ಲಿ ವೇಳೆಗೆ ರೂ. 25 ಕೋಟಿ ಏರಿಕೆಯಾಗಿದೆ. 2004-05 ರ ಇದೇ ಅವಧಿಯಲ್ಲಿ ಕಾಂಗ್ರೆಸ್ ಸಾಲ ರೂ. 8 ಕೋಟಿಯಷ್ಟಿತ್ತು. ಈಗ ರೂ. 329.43 ಕೋಟಿಗೆ ಏರಿಕೆಯಾಗಿದೆ.

English summary

BJP richest party with Rs 894 cr, Congress second with Rs 759 cr: ADR report

The ruling BJP is the richest among India’s seven national parties, having declared assets worth nearly Rs 894 crore in 2015-16, said a report released by the Association of Democratic Reforms (ADR) on Monday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X