For Quick Alerts
ALLOW NOTIFICATIONS  
For Daily Alerts

ಸಿಲಿಂಡರ್ (ಎಲ್ಪಿಜಿ) ಬೆಲೆ ರೂ. 94 ಏರಿಕೆ: ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಗ್ರಾಹಕರಿಗೆ ಬರೆ!

ದಿನನಿತ್ಯದ ಸರಕುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಇನ್ನೊಂದು ಶಾಕಿಂಗ್ ಸುದ್ದಿ. ಕೇಂದ್ರ ಸರ್ಕಾರ ಹಂತ ಹಂತವಾಗಿ ಸಬ್ಸಿಡಿಯನ್ನು ಕಡಿತಗೊಳಿಸುತ್ತಿದೆ.

By Siddu
|

ನವೆಂಬರ್ ತಿಂಗಳು ಗ್ರಾಹಕರ ಪಾಲಿಗೆ ದುಬಾರಿಯಾಗಲಿದೆ ಎಂದು ಕಳೆದ ವಾರವಷ್ಟೇ ಲೇಖನ ಪ್ರಕಟಿಸಲಾಗಿತ್ತು. ಇದೀಗ ಅಡುಗೆ ಅನಿಲ, ತೈಲ ಬೆಲೆ, ವಿಮಾನ ಪ್ರಯಾಣ, ಗೃಹೋಪಯೋಗಿ ಸರಕುಗಳ ಬೆಲೆ ಏರುತ್ತಿದೆ ನೋಡಿ..

ಈಗಾಗಲೇ ದಿನನಿತ್ಯದ ಸರಕುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಇನ್ನೊಂದು ಶಾಕಿಂಗ್ ಸುದ್ದಿ ಇದ್ದು ಸಿಲಿಂಡರ್ (ಎಲ್ಪಿಜಿ) ಬೆಲೆ ಏರಿಕೆ ಕಂಡಿದೆ. ಕೇಂದ್ರ ಸರ್ಕಾರ ಹಂತ ಹಂತವಾಗಿ ಸಬ್ಸಿಡಿಯನ್ನು ಕಡಿತಗೊಳಿಸುತ್ತಿದೆ.

'ಮುಖ್ಯಮಂತ್ರಿ ಅನಿಲ ಭಾಗ್ಯ' ಯೋಜನೆ ಅಡಿ ಉಚಿತ ಗ್ಯಾಸ್(LPG) ಪಡೆಯುವುದು ಹೇಗೆ?'ಮುಖ್ಯಮಂತ್ರಿ ಅನಿಲ ಭಾಗ್ಯ' ಯೋಜನೆ ಅಡಿ ಉಚಿತ ಗ್ಯಾಸ್(LPG) ಪಡೆಯುವುದು ಹೇಗೆ?

ಸಿಲಿಂಡರ್ ಬೆಲೆ ಏರಿಕೆ

ಸಿಲಿಂಡರ್ ಬೆಲೆ ಏರಿಕೆ

ಈಗಾಗಲೇ ಅನೇಕ ಬಾರಿ ಗ್ಯಾಸ್ ಬೆಲೆ ಏರಿಸಲಾಗಿದೆ. ಇದೀಗ ಮತ್ತೆ ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.
ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ ರೂ. 4 ಏರಿಕೆಯಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ರೂ. 93.94 ಏರಿಕೆಯಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?

ಎಲ್ಲಿ ಎಷ್ಟೆಷ್ಟು ಹೆಚ್ಚಾಗಲಿದೆ?

ಎಲ್ಲಿ ಎಷ್ಟೆಷ್ಟು ಹೆಚ್ಚಾಗಲಿದೆ?

ದೆಹಲಿಯಲ್ಲಿ ಸಬ್ಸಿಡಿ ಇರುವ 14.2 ಕೆ.ಜಿ. ಸಿಲಿಂಡರ್ ಬೆಲೆ ರೂ. 495.69, ಕೋಲ್ಕತ್ತದಲ್ಲಿ ರೂ. 498.43, ಮುಂಬೈನಲ್ಲಿ ರೂ. 498.38, ಚೆನ್ನೈನಲ್ಲಿ ರೂ. 483.69 ಆಗಿದೆ.
ಮೆಟ್ರೋ ನಗರಗಳಲ್ಲಿ 14.2 ಕೆ.ಜಿ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ರೂ. 93 ರಿಂದ ರೂ. 94 ಏರಿಕೆಯಾಗಲಿದೆ.
ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ರೂ. 742, ಕೋಲ್ಕತ್ತದಲ್ಲಿ ರೂ. 759.5, ಮುಂಬೈನಲ್ಲಿ ರೂ. 718.5, ಚೆನ್ನೈನಲ್ಲಿ ರೂ. 750 ಆಗಲಿದೆ.

ಸಬ್ಸಿಡಿ ಸಿಲಿಂಡರ್ ಎಷ್ಟು?

ಸಬ್ಸಿಡಿ ಸಿಲಿಂಡರ್ ಎಷ್ಟು?

ಒಂದು ವರ್ಷದಲ್ಲಿ ಸಬ್ಸಿಡಿ ಇರುವ 14.2 ಕೆ.ಜಿ ತೂಕದ 12 ಸಿಲಿಂಡರ್ ಗಳು ಸಿಗಲಿವೆ. 12 ಸಬ್ಸಿಡಿ ಸಿಲಿಂಡರ್ ಖರೀದಿ ನಂತರ ಮಾರುಕಟ್ಟೆಯ ದರದಲ್ಲಿ ಖರೀದಿಸಬೇಕಾಗುತ್ತದೆ.

ಎಟಿಎಫ್ ಬೆಲೆ ಏರಿಕೆ

ಎಟಿಎಫ್ ಬೆಲೆ ಏರಿಕೆ

ಏವಿಯೇಷನ್ ​​ಟರ್ಬೈನ್ ಇಂಧನ (ಎಟಿಎಫ್) ಈಗ ದೆಹಲಿಯಲ್ಲಿ ಪ್ರತಿ ಕಿಲೋಲೀಟರ್ ಗೆ ರೂ. 54,143 ಏರಿಕೆ ಆಗಿದ್ದು, ಈ ಹಿಂದೆ ರೂ. 53,045 ಬೆಲೆಯಿತ್ತು. ಅಂದರೆ ರೂ. 1,098 ಏರಿಕೆಯಾಗಿದೆ. ಇದು ಎಟಿಎಫ್ ಬೆಲೆಯಲ್ಲಿ ನಾಲ್ಕನೇ ಸತತ ಮಾಸಿಕ ಏರಿಕೆಯಾಗಿದ್ದು, ಕೊನೆಯದಾಗಿ ಅಕ್ಟೋಬರ್ 1 ರಂದು ಶೇ. 6 ರಷ್ಟು (ರೂ. 3,025) ಇತ್ತು.

ತೈಲ ಬೆಲೆ ಪರಿಷ್ಕರಣೆ

ತೈಲ ಬೆಲೆ ಪರಿಷ್ಕರಣೆ

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಗೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲಿ ತೈಲ ಕಂಪನಿಗಳು ಬೆಲೆ ಪರಿಷ್ಕರಿಸುತ್ತವೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪ್ರತಿ ತಿಂಗಳ ಮೊದಲ ದಿನ ಎಲ್ಪಿಜಿ ಮತ್ತು ಎಟಿಎಫ್ ದರವನ್ನು ಸರಾಸರಿ ತೈಲ ಬೆಲೆ ಮತ್ತು ವಿದೇಶಿ ವಿನಿಮಯ ದರದ ಆಧಾರದ ಮೇಲೆ ಪರಿಷ್ಕರಿಸುತ್ತವೆ.

Read more about: lpg finance news income tax
English summary

LPG (Cylinder) Prices Hiked By Rs. 93-94; ATF prices raised by 2%

The price of a domestic LPG cylinder in Delhi was hiked by Rs. 93 per cylinder on Tuesday evening. After the hike, a 14 kg domestic LPG cylinder will cost Rs. 742 per cylinder in Delhi.
Story first published: Thursday, November 2, 2017, 14:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X