ವಿಶ್ವದ ಪ್ರಭಾವಿ ಮಹಿಳೆಯರಲ್ಲಿ ಭಾರತದ ಐವರು, ಪ್ರಿಯಾಂಕಾ ಚೋಪ್ರಾಗೆ ಸ್ಥಾನ

ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ 2017ರ ವಿಶ್ವದ ಅತ್ಯಂತ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಭಾರತದ ಐವರು ಸ್ಥಾನ ಪಡೆದಿದ್ದು, ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಈ ಪಟ್ಟಿಯಲ್ಲಿ 97ನೇ ಸ್ಥಾನದಲ್ಲಿದ್ದಾರೆ.

ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ 2017ರ ವಿಶ್ವದ ಅತ್ಯಂತ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಭಾರತದ ಐವರು ಸ್ಥಾನ ಪಡೆದಿದ್ದು, ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಈ ಪಟ್ಟಿಯಲ್ಲಿ 97ನೇ ಸ್ಥಾನದಲ್ಲಿದ್ದಾರೆ.

ಭಾರತದ ಪ್ರಭಾವಿ ಮಹಿಳೆಯರು

ಭಾರತದ ಪ್ರಭಾವಿ ಮಹಿಳೆಯರು

ಪ್ರಿಯಾಂಕಾ ಚೋಪ್ರಾ ಅಲ್ಲದೆ, ಭಾರತದ ಇತರ ನಾಲ್ವರು ಮಹಿಳೆಯರು ಈ ಪಟ್ಟಿಯಲ್ಲಿದ್ದಾರೆ. ಐಸಿಐಸಿಐ ಬ್ಯಾಂಕ್ ಸಿಇಒ ಮತ್ತು ಎಂ.ಡಿ. ಚಂದಾ ಕೋಚ್ಚರ್ ಅವರು 32 ನೇ ಸ್ಥಾನದಲ್ಲಿದ್ದಾರೆ. ಎಚ್ಸಿಎಲ್ ಕಾರ್ಪೊರೇಶನ್ ಸಿಇಒ ರೋಶನಿ ನಡಾರ್ 57 ನೇ ಸ್ಥಾನ ಪಡೆದಿದ್ದಾರೆ. ಬಯೋಕಾನ್ ಸಂಸ್ಥಾಪಕ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ 71 ನೇ ಸ್ಥಾನದಲ್ಲಿದ್ದರೆ, ಎಚ್ ಟಿ ಮಿಡೀಯಾ ಅಧ್ಯಕ್ಷೆ ಮತ್ತು ಸಂಪಾದಕೀಯ ನಿರ್ದೇಶಕಿ ಶೋಭಾನಾ ಭಾರ್ತಿಯಾ 92ನೇ ಸ್ಥಾನದಲ್ಲಿದ್ದಾರೆ.

ಸತತ 7ನೇ ಬಾರಿ ಏಂಜೆಲಾ ಮರ್ಕೆಲ್

ಸತತ 7ನೇ ಬಾರಿ ಏಂಜೆಲಾ ಮರ್ಕೆಲ್

ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರು ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯಾಗಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ಏಂಜಲಾ ಮರ್ಕೆಲ್ 12ನೇ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಸತತ ಏಳು ವರ್ಷಗಳಿಂದ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಇಂದ್ರ ನೂಯಿ ಮತ್ತು ನಿಕ್ಕಿ ಹಲೆ

ಇಂದ್ರ ನೂಯಿ ಮತ್ತು ನಿಕ್ಕಿ ಹಲೆ

ಭಾರತದ ಸಂಜಾತೆಯಾಗಿರುವ ಪೆಪ್ಸಿಕೋ ಸಿಇಒ ಇಂದ್ರ ನೂಯಿ 11 ನೇ ಸ್ಥಾನ ಮತ್ತು ಭಾರತೀಯ ಅಮೆರಿಕನ್ ನಿಕ್ಕಿ ಹಲೆ 43ನೇ ಸ್ಥಾನದಲ್ಲಿದ್ದಾರೆ.

ಅಗ್ರ 5 ಪ್ರಭಾವಿ ಮಹಿಳೆಯರು

ಅಗ್ರ 5 ಪ್ರಭಾವಿ ಮಹಿಳೆಯರು

ಮೊದಲ ಸ್ಥಾನದಲ್ಲಿ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಇದ್ದರೆ, 2ನೇ ಸ್ಥಾನದಲ್ಲಿ ಇಂಗ್ಲೆಂಡ್‌ನ ಪ್ರಧಾನಿ ತೆರೆಸಾ ಮೇ ಇದ್ದಾರೆ. 3ನೇ ಸ್ಥಾನದಲ್ಲಿ ಮೆಲಿಂಡಾ ಗೇಟ್ಸ್‌, ಫೇಸ್‌ಬುಕ್‌ನ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ (4) ಮತ್ತು ಜನರಲ್‌ ಮೋಟಾರ್ಸ್ ಸಿಇಒ ಮೇರಿ ಬರ್ರಾ 5ನೇ ಸ್ಥಾನದಲ್ಲಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+