For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಸಂಚಲನ..! ಮೂಡೀಸ್ ಎಫೆಕ್ಟ್ 414 ಪಾಯಿಂಟ್ ಏರಿಕೆ ಕಂಡಿತು

ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 414 ಪಾಯಿಂಟ್ ಏರಿಕೆ ಕಂಡು, 33,521 ಅಂಶಕ್ಕೆ ಜಿಗಿದಿತ್ತು. ನಿಫ್ಟಿ ಸೂಚ್ಯಂಕ 124.40 ಅಂಶಗಳಷ್ಟು ಏರಿ, 10,339.15 ಅಂಶಕ್ಕೆ ಏರಿತ್ತು.

By Siddu
|

ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿ ಮೂಡೀಸ್ ವರದಿಯ ಪರಿಣಾಮ ದೇಶೀಯ ಷೇರುಮಾರುಕಟ್ಟೆಯ ಮೇಲೆ ಧನಾತ್ಮಕ ಪ್ರಭಾವ ಬೀರಿದೆ.

 
ಸೆನ್ಸೆಕ್ಸ್ ಸಂಚಲನ..! ಮೂಡೀಸ್ ಎಫೆಕ್ಟ್ 414 ಪಾಯಿಂಟ್ ಏರಿಕೆ ಕಂಡಿತು

ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 414 ಪಾಯಿಂಟ್ ಏರಿಕೆ ಕಂಡು, 33,521 ಅಂಶಕ್ಕೆ ಜಿಗಿದಿತ್ತು. ನಿಫ್ಟಿ ಸೂಚ್ಯಂಕ 124.40 ಅಂಶಗಳಷ್ಟು ಏರಿ, 10,339.15 ಅಂಶಕ್ಕೆ ಏರಿತ್ತು.

 

ಜಾಗತಿಕ ಮಟ್ಟದ ರೇಟಿಂಗ್‌ ಏಜೆನ್ಸಿ 'ಮೂಡೀಸ್‌' ಭಾರತದ ದೇಶೀಯ ಮತ್ತು ಅಂತರರಾಷ್ಟ್ರೀಯ ಹಣಕಾಸು ಸ್ಥಿತಿಗತಿಯ ರೇಟಿಂಗ್ ಅನ್ನು ಉನ್ನತೀಕರಿಸಿದ್ದು ಭಾರತಕ್ಕೆ 'ಬಿಎಎ2' ರೇಟಿಂಗ್‌ ನೀಡಿದೆ. ಇದರ ಪರಿಣಾಮ ಷೇರುಮಾರುಕಟ್ಟೆಯ ಮೇಲಾಗಿದೆ. ಸಕಾರಾತ್ಮಕ ಜಾಗತಿಕ ಸೂಚ್ಯಂಕಗಳು ದೇಶಿ ಷೇರುಪೇಟೆ ಮೇಲೆ ಭಾವನಾತ್ಮಕ ಪರಿಣಾಮ ಬೀರಿವೆ.

ಮೂಡೀಸ್ ವರದಿ
ಮೂಡೀಸ್ ವರದಿ ಪ್ರಕಾರ ಭಾರತದ ಹಿಂದಿನ ರೇಟಿಂಗ್ ಬಿಎಎ3 ಯಿಂದ ಬಿಎಎ2 ಗೆ ಏರಿಕೆ ಕಂಡಿದೆ. ನೋಟು ನಿಷೇಧ, ಜಿಎಸ್ಟಿ ಜಾರಿ, ಬ್ಯಾಂಕು ಖಾತೆಗಳು ಒಳಗೊಂಡಂತೆ ಸರ್ಕಾರದ ಸೌಲಭ್ಯಗಳಿಗಾಗಿ ಆಧಾರ್ ಜೋಡಣೆ ಆರ್ಥಿಕ ಅಭಿವೃದ್ಧಿಯ ಮೇಲೆ ಧನಾತ್ಮಕ ಪರಿಣಾಮ ಬೀರಿವೆ ಎಂದು ಮೂಡೀಸ್ ವರದಿಯಲ್ಲಿ ತಿಳಿಸಿದೆ. ಇದರ ಪರಿಣಾಮ ಷೇರುಮಾರುಕಟ್ಟೆ ಮೇಲೆ ಬೀರಿದೆ.

ಸೆನ್ಸೆಕ್ಸ್ ಸಂಚಲನ..! ಮೂಡೀಸ್ ಎಫೆಕ್ಟ್ 414 ಪಾಯಿಂಟ್ ಏರಿಕೆ ಕಂಡಿತು

ಲಾಭ ನಷ್ಟ ಕಂಡ ಕಂಪನಿ
ಸಿಪ್ಲಾ(+2.62%), ಮಾರುತಿ(+2.25%), ಎಚ್ಡಿಎಫ್ಸಿ(+ 2.12%), ಟಾಟಾ ಮೋಟರ್ಸ್(+1.83%) ಮತ್ತು ಐಸಿಐಸಿಐ ಬ್ಯಾಂಕ್(+1.83%)ಇವು 5 ಪ್ರಮುಖವಾಗಿ ಸೆನ್ಸೆಕ್ಸ್ ಲಾಭ ಕಂಡ ಕಂಪನಿಗಳಾಗಿವೆ. ಇನ್ಫೋಸಿಸ್(-2.09%), ಟಿಸಿಎಸ್(-1.33%), ಏಷ್ಯನ್ ಪೇಯ್ಟ್ಸ್(-1.08%), ವಿಪ್ರೊ(-1.04%) ಮತ್ತು ಒಎನ್ಜಿಸಿ(-1.03%) ಇವು ನಷ್ಟ ಅನುಭವಿಸಿರುವ ಪ್ರಮುಖ ಕಂಪನಿಗಳಾಗಿವೆ.

English summary

Sensex surges 239 points on Moody's ratings upgrade

The Sensex soared over 400 points intraday and the Nifty raced past 10,300 as international rating agency Moody’s has upgraded India’s sovereign bond rating to Baa2 from Baa3 with a stable outlook and also noted continued progress on economic and institutional reform will enhance India's high growth.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X