ಉದ್ಯಮಿಗಳು ಪ್ರಾರಂಭದ ವರ್ಷಗಳಲ್ಲಿ ಈ ತಪ್ಪುಗಳನ್ನು ಮಾಡಲೇಬಾರದು

ಉದ್ಯಮಿಯಾಗುವುದು ಅಷ್ಟು ಸುಲಭದ ಮಾತಲ್ಲ. ಇದರಲ್ಲಿ ಹಣದ ಹೂಡುವಿಕೆ, ವ್ಯಾಪಾರದ ವಿನ್ಯಾಸ, ಹೊಸ ವಹಿವಾಟು ಪ್ರಾರಂಭದ ಮುನ್ನ ಅಗತ್ಯವಿರುವ ಎಲ್ಲಾ ಸಂಬಂಧಿತ ಸೌಕರ್ಯಗಳನ್ನು ಹೊಂದಿಸಿಕೊಳ್ಳುವುದು ಮೊದಲಾದ ಹಲವು ಕಾರ್ಯ ನಿರ್ವಹಿಸಬೇಕಾಗುತ್ತದೆ.

ಉದ್ಯಮಿಯಾಗುವುದು ಅಷ್ಟು ಸುಲಭದ ಮಾತಲ್ಲ. ಇದರಲ್ಲಿ ಹಣದ ಹೂಡುವಿಕೆ, ವ್ಯಾಪಾರದ ವಿನ್ಯಾಸ, ಹೊಸ ವಹಿವಾಟು ಪ್ರಾರಂಭ, ಉತ್ಪನ್ನ ಅಥವಾ ಸೇವೆಯನ್ನು ನೀಡುವ ಮುನ್ನ ಅಗತ್ಯವಿರುವ ಎಲ್ಲಾ ಸಂಬಂಧಿತ ಸೌಕರ್ಯಗಳನ್ನು ಹೊಂದಿಸಿಕೊಳ್ಳುವುದು ಮೊದಲಾದ ಹತ್ತು ಹಲವು ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

ಈ ಎಲ್ಲಾ ಸವಾಲುಗಳನ್ನು ಎದುರಿಸಿ ಮುನ್ನುಗ್ಗಬಲ್ಲವರು ಯಶಸ್ವಿ ಉದ್ಯಮಿ ಆಗಬಲ್ಲರು..

ಒಂದು ವೇಳೆ ನೀವು ಸಹ ಉದ್ಯಮಿಯಾಗ ಬಯಸಿದ್ದು, ಇದು ನಿಮ್ಮ ಪ್ರಾರಂಭದ ವರ್ಷವಾಗಿದ್ದರೆ ನಿಮಗೆ ಅರಿವೇ ಇಲ್ಲದೇ ಕೆಲವು ತಪ್ಪುಗಳನ್ನು ನೀವು ಮಾಡುತ್ತಿದ್ದಿರಬಹುದು. ಇದನ್ನು ಮೊದಲೇ ಅರಿತಿದ್ದರೆ ಈ ತಪ್ಪುಗಳನ್ನು ಮಾಡದಿರುವ ಮೂಲಕ ಮುಂದೆ ಎದುರಾಗಬಹುದಾದ ದೊಡ್ಡ ಗಂಡಾಂತರದಿಂದ ರಕ್ಷಣೆ ಪಡೆಯಬಹುದು. ಬನ್ನಿ, ಅವು ಯಾವುವು ಎಂದು ತಿಳಿಯೋಣ.. ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

ಪಲಾಯನವಾದ

ಪಲಾಯನವಾದ

ಅತಿ ಶೀಘ್ರದಲ್ಲಿ ಸಿಇಒ ಆಗ ಬಯಸುವುದು

ಅತಿ ಶೀಘ್ರದಲ್ಲಿ ಸಿಇಒ ಆಗ ಬಯಸುವುದು

ವಾಣಿಜ್ಯೋದ್ಯಮಿಯಾದ ಪ್ರಾರಂಭದ ದಿನಗಳಲ್ಲಿ ಸಂಸ್ಥೆಯ ಹೆಚ್ಚಿನ ಎಲ್ಲಾ ಕೆಲಸಗಳನ್ನು ಸ್ವತಃ ಮಾಡಬೇಕಾಗಿ ಬರಬಹುದು. ಮೈಕ್ರೋಸಾಫ್ಟ್ ಹೆಸರು ಬಂದಾಗ ಬಿಲ್ ಗೇಟ್ಸ್ ಅಥವಾ ಅಮೆಜಾನ್ ಸಂಸ್ಥೆಯ ಹೆಸರು ಬಂದಾಗ ಜೆಪ್ ಬೆಜೋಸ್, ಆಪಲ್ ಹೆಸರು ಬಂದಾದ ಸ್ಟೀವ್ ಜಾಬ್ಸ್ ಹೆಸರೇ ಮುಂಚೂಣಿಯಲ್ಲಿ ಬರುತ್ತದೆ. ಇವರೇಲ್ಲರೂ ಸೇವೆ ಅಥವಾ ಉತ್ಪನ್ನಗಳನ್ನು ಮಾರುತ್ತಾರೆ. ಒಂದು ವೇಳೆ ಅಷ್ಟೊಂದು ಗ್ರಾಹಕರು ಇವರಿಗೆ ಇಲ್ಲದಿದ್ದರೆ ಏನಾಗುತ್ತಿತ್ತು? ಮೊದಲಾಗಿ ಇವರು ತಮ್ಮ ಉತ್ಪನ್ನದ ಮಾರಾಟದ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದರು. ಯಾವುದೇ ಉದ್ಯಮದ ಯಶಸ್ಸು ಅದರ ಉತ್ಪನ್ನದ ಮಾರಾಟವನ್ನು ನೇರವಾಗಿ ಅವಲಂಬಿಸಿದೆ. ಆದ್ದರಿಂದ ಇವರೆಲ್ಲರೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗುವ ಮುನ್ನ ಮಾರಾಟಗಾರರೇ ಆಗಿದ್ದಾರೆ. ಆದ್ದರಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗುವ ಮುನ್ನ ಮೊದಲು ಮಾರಾಟಗಾರನಾಗಬೇಕು ಹಾಗೂ ಲಾಭದ ಬಗ್ಗೆ ಹೆಚ್ಚು ಗಮನಹರಿಸಿ ಯಶಸ್ಸು ಸಾಧಿಸಿದ ಬಳಿಕವೇ ಅರ್ಹ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಟ್ಟ ಪಡೆಯಬೇಕು.

ಅಗತ್ಯಕ್ಕಿಂತ ಹೆಚ್ಚು ಸಲಹೆಗಳನ್ನು ಪಡೆಯುವುದು

ಅಗತ್ಯಕ್ಕಿಂತ ಹೆಚ್ಚು ಸಲಹೆಗಳನ್ನು ಪಡೆಯುವುದು

ಸಲಹೆಗಳನ್ನು ನೀಡುವುದು ಪುಕ್ಕಟೆಯಾದುದರಿಂದ ಎಲ್ಲರೂ ತಮ್ಮ ಸಾಮರ್ಥ್ಯಕ್ಕನುಸಾರವಾದ ಸಲಹೆಗಳನ್ನು ನೀಡುತ್ತಾ ಬರುತ್ತಾರೆ. ತಾವು ಹೇಗೆ ಮೇಲೆ ಬಂದೆವು, ತಮಗೆ ಯಾವ ಕಷ್ಟಗಳು ಎದುರಾದವು ಇತ್ಯಾದಿ.. ಇದರಲ್ಲೇನೂ ತಪ್ಪಿಲ್ಲದೇ ಹೋದರೂ ಇವರಿಗೆ ಎದುರಾದ ಸಂದರ್ಭಗಳೇ ನಿಮಗೂ ಎದುರಾಗಬೇಕಾಗಿಲ್ಲ. ಈ ವಿಷಯಗಳನ್ನು ಕೇಳಿ ಗಮನದಲ್ಲಿರಿಸುವುದು ಮುಖ್ಯವೇ ಹೊರತು ನಿಮ್ಮ ಸಮಸ್ಯೆಗಳಿಗೆ ಯಾವ ಸಲಹೆ ಸೂಕ್ತವೋ ಅವನ್ನು ಮಾತ್ರವೇ ಅನುಸರಿಸಬೇಕು. ಇಲ್ಲದಿದ್ದರೆ ಎತ್ತು ಏರಿಗೆ ಕೋಣ ನೀರಿಗೆ ಎಂಬ ಗಾದೆ ಮಾತಿನಂತೆ ನಿಮ್ಮ ಪರಿಸ್ಥಿತಿಯಾಗಬಹುದು.

ಒತ್ತಡ ಹಾಗೂ ಪ್ರಭಾವದ ಅಂತರ ಅರಿಯದಿರುವುದು

ಒತ್ತಡ ಹಾಗೂ ಪ್ರಭಾವದ ಅಂತರ ಅರಿಯದಿರುವುದು

ಯಾವುದೇ ವ್ಯಾಪಾರ ಯಶಸ್ವಿಯಾಗಬೇಕಾದರೆ ಮಾರಾಟ ಹೆಚ್ಚಬೇಕಾಗಿರುವುದು ಅನಿವಾರ್ಯ. ಆದರೆ ಕೆಲವೊಮ್ಮೆ ನಮ್ಮ ಗ್ರಾಹಕರಿಗೆ ನಮ್ಮ ಉತ್ಪನ್ನಗಳನ್ನು ಕೊಳ್ಳುವಂತೆ ಒತ್ತಡ ಹೇರುತ್ತೇವೆ. ಆದರೆ ಗ್ರಾಹಕ ಇದನ್ನು ತಾನಾಗಿಯೇ ಕೊಳ್ಳುವಂತೆ ಪ್ರಭಾವ ಬೀರುವುದು ಯಶಸ್ವಿಯಾದ ಕ್ರಮವಾಗಿದೆ. ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಅಥವಾ ಸೇವೆಗಳ ಬಗ್ಗೆ ಪ್ರಭಾವ ಬೀರಲು ಇದರ ಗುಣಮಟ್ಟ, ಮಾರಾಟನಂತರದ ನೀಡುವ ಹೆಚ್ಚುವರಿ ಸೇವೆ, ಈ ಕ್ಷೇತ್ರದಲ್ಲಿ ನಿಮ್ಮ ಅನುಭವ ಹಾಗೂ ಅರ್ಹತೆ, ಸೇವಾಪರತೆ ಮೊದಲಾದ ವಿಷಯಗಳನ್ನು ಗ್ರಾಹಕರಿಗೆ ಮನದಟ್ಟು ಮಾಡುವ ಮೂಲಕ ಗ್ರಾಹಕ ತಾನಾಗಿಯೇ ಮುಂದಿನ ಆರ್ಡರ್ ನೀಡಲು ನೆರವಾಗುತ್ತದೆ.

ಸಲಹೆಗಳನ್ನು ಹೇಗೆ ಪಡೆಯಬೇಕು ಎಂದು ಅರಿಯದೇ ಇರುವುದು

ಸಲಹೆಗಳನ್ನು ಹೇಗೆ ಪಡೆಯಬೇಕು ಎಂದು ಅರಿಯದೇ ಇರುವುದು

ಹೆಚ್ಚಿನ ವಾಣಿಜ್ಯೋದ್ಯಮಿಗಳು ತಮಗೆ ಅಗತ್ಯವಿರುವ ಸಲಹೆಯನ್ನು ಸೂಕ್ತ ವ್ಯಕ್ತಿಯಿಂದ ಪಡೆಯುತ್ತಾರೆ. ಈ ಸೂಕ್ತ ವ್ಯಕ್ತಿ ಇವರ ಕೈ ಕೆಳಗೆ ಕೆಲಸ ಮಾಡುವ ಕನಿಷ್ಟ ಮಟ್ಟದಲ್ಲಿರುವ ಉದ್ಯೋಗಿಯೂ ಆಗಿರಬಹುದು. ಟಾಟಾ ಉಪ್ಪು ಈ ಹೆಸರು ಇಂದು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರಲು ಕಾರಣ ಇದರ ಮಾಲಿಕ ರತನ್ ಟಾಟಾ ರವರು ತಮ್ಮ ಉಪ್ಪಿನ ಗದ್ದೆಯಲ್ಲಿ ಉಪ್ಪನ್ನು ಹಲಗೆಯಿಂದ ಬಾಚುತ್ತಿದ್ದ ಉದ್ಯೋಗಿಯ ಮಾತು ಕೇಳಿದ್ದು. ಸಾಮಾನ್ಯವಾಗಿ ಮಾಲಿಕರು ತಮ್ಮ ಸ್ನೇಹಿತರು ಅಥವಾ ಸಹ ಉದ್ಯಮಿಗಳ ಮಾತನ್ನೇ ಕೇಳುತ್ತಾರೆಯೇ ವಿನಃ ತಮ್ಮ ಉದ್ಯೋಗಿಗಳೊಂದಿಗೆ ವಿಚಾರ ವಿಮರ್ಶೆ ನಡೆಸುವುದಿಲ್ಲ. ವಾಸ್ತವವಾಗಿ ಇಲ್ಲಿನ ಪರಿಸ್ಥಿತಿಯನ್ನು ನಿಮ್ಮ ಸಹೋದ್ಯೋಗಿ ಹಾಗೂ ಕೆಳಮಟ್ಟದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಹೆಚ್ಚು ಅರಿತಿದ್ದು ಇದರ ಪರಿಹಾರವನ್ನೂ ಅರಿತಿರಬಹುದು. ಆದರೆ ಈ ಪರಿಹಾರವನ್ನು ತಮ್ಮ ಮಾಲಿಕರು ಪರಿಗಣಿಸುತ್ತಾರೋ ಇಲ್ಲವೋ ಎಂಬ ಹೆದರಿಕೆಯಿಂದ ಹೆಚ್ಚಿನವರು ಹೇಳಲಿಕ್ಕೆ ಹೋಗುವುದಿಲ್ಲ. ಆದರೆ ಯಶಸ್ವಿ ವಾಣಿಜ್ಯೋದ್ಯಮಿ ಪ್ರತಿಯೊಬ್ಬರ ಸಲಹೆಗಳನ್ನು ಪಡೆದು ಒಂದು ವೇಳೆ ನಿಜವಾಗಿಯೂ ಸರಿ ಎನಿಸಿದರೆ ಮಾತ್ರ ಇದನ್ನು ಅನುಸರಿಸಬೇಕು. ಅಷ್ಟೇ ಅಲ್ಲ, ಸಮಸ್ಯೆ ಇದರಿಂದ ಪರಿಹಾರವಾದರೆ ಸಲಹೆ ನೀಡಿದ ವ್ಯಕ್ತಿಯನ್ನು ಮುಕ್ತಕಂಠದಿಂದ ಪ್ರಶಂಸಿಸಿ ಬಹುಮಾನ ನೀಡುವ ಮೂಲಕ ಪ್ರತಿಯೊಬ್ಬರೂ ತಮ್ಮ ಸಹಕಾರವನ್ನು ನಿಮಗೆ ನೀಡುತ್ತಾರೆ ಹಾಗೂ ಇದು ನಿಮ್ಮ ಏಳ್ಗೆಗೆ ಸಹಕಾರಿಯಾಗಿದೆ.

ಭ್ರಮೆಯಲಿ/ಕನಸಲಿ ತೇಲುವುದು

ಭ್ರಮೆಯಲಿ/ಕನಸಲಿ ತೇಲುವುದು

ಯಾವುದೇ ವಾಣಿಜ್ಯೋದ್ಯಮಿಗೆ ಪ್ರಥಮ ವರ್ಷ ಭವಿಷ್ಯದ ವರ್ಷವಾಗಿದೆ. ಈ ವರ್ಷ ನಿಮ್ಮ ಮುಂದಿನ ವರ್ಷವನ್ನು ನಿರ್ಧರಿಸುತ್ತದೆ. ಕೆಲವು ತಿಂಗಳು ನಿಮ್ಮ ಸಂಸ್ಥೆ ಮಾಡಿದ ಲಾಭದಿಂದ ಜೇಬು ಕೊಂಚ ಭಾರವಾಗುತ್ತಿದ್ದಂತೆಯೇ ಈ ಹಣದಿಂದ ಮಾಡಬಹುದಾದ ಮೋಜು ಮಜಾಗಳ ಅವಕಾಶಗಳೂ ತೆರೆದುಕೊಳ್ಳುತ್ತವೆ. ಪಾರ್ಟಿ, ಕ್ಲಬ್ಬು, ಕಾರು ಮೊದಲಾದ ಹತ್ತು ಹಲವು ಐಶಾರಾಮಗಳು ಕೈಬೀಸಿ ಕರೆಯುತ್ತವೆ. ಆದರೆ ವಾಣಿಜ್ಯೋದ್ಯಮಿಯಾಗಿ ಯಶಸ್ವಿಯಾಗಬೇಕಾದರೆ ಈ ಹಣವನ್ನು ಮೋಜಿಗಾಗಿ ಉಡಾಯಿಸುವುದು ಸರ್ವಥಾ ತರವಲ್ಲ. ಬದಲಿಗೆ ಈ ಹಣವನ್ನು ನಿಮ್ಮ ಉದ್ಯಮವನ್ನು ವಿಸ್ತರಿಸಲು ಬಂಡವಾಳವಾಗಿ ಉಪಯೋಗಿಸಬೇಕು. ಇದೇ ಯಶಸ್ಸಿನ ಮೂಲಮಂತ್ರ. ಪ್ರತಿಯೊಬ್ಬರಿಗೂ ಇರುವಂತೆ ಕನಸಿನ ಅರಮನೆಗೆ ತಕ್ಷಣವೇ ಜಾರುವುದು ಈಗಲೇ ತರವಲ್ಲ.

ಅಗತ್ಯಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಲು ಯತ್ನಿಸುವುದು

ಅಗತ್ಯಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಲು ಯತ್ನಿಸುವುದು

ವಾಣಿಜ್ಯೋದ್ಯಮಿಯಾಗಿ ಪ್ರಥಮ ವರ್ಷದಲ್ಲಿಯೇ ಅತಿ ಹೆಚ್ಚು ಲಾಭ ಬರದೇ ಹೋಗಬಹುದು. ಆದರೆ ನಿಮ್ಮ ಉದ್ಯಮದ ಪ್ರಮುಖ ಉತ್ಪನ್ನಗಳನ್ನು ಮಾರುವತ್ತ ನೀವು ಹೆಚ್ಚಿನ ಗಮನ ಹರಿಸಬೇಕು. ಏಕೆಂದರೆ ಪ್ರಾರಂಭಿಕ ವರ್ಷದಲ್ಲಿಯೇ ನಿಮ್ಮ ಉತ್ಪನ್ನಗಳ ವ್ಯಾಪ್ತಿ ಹೆಚ್ಚಿನ ವಸ್ತುಗಳಿಗೆ ಮೀಸಲಾದರೆ ನಿಮ್ಮ ಯಾವುದೇ ಉತ್ಪನ್ನ ನಿರೀಕ್ಷೆಯಂತೆ ಮಾರಾಟವಾಗಲಾರದು. ಜತೆಗೆ ಇದು ಅಮೂಲ್ಯ ಸಮಯ ಮತ್ತು ಹಣವನ್ನು ಕಬಳಿಸಬಹುದು.
ಆದ್ದರಿಂದ ಮೊದ ಮೊದಲು ನಿಮಗೆ ನಷ್ಟ ಅನುಭವಿಸಬೇಕಾಗಿ ಬರಬಹುದು. ಆದರೂ ನಿಮ್ಮ ಮುಖ್ಯ ಉತ್ಪನ್ನ ಅಥವಾ ಸೇವೆಗಳ ಬಗ್ಗೆಯೇ ಹೆಚ್ಚಿನ ಗಮನ ಹರಿಸುವ ಮೂಲಕ ಅನಗತ್ಯ ಉತ್ಪನ್ನಗಳನ್ನು ಸೂಕ್ತ ಸಮಯ ಬರದೇ ಮಾರಾಟಕ್ಕೆ ಮುಂದಾಗದಿರುವುದೇ ಜಾಣತನದ ಕ್ರಮವಾಗಿದೆ.

ತನಗೆಲ್ಲವೂ ಗೊತ್ತಿದೆ ಎಂದು ವಾದಿಸುವುದು

ತನಗೆಲ್ಲವೂ ಗೊತ್ತಿದೆ ಎಂದು ವಾದಿಸುವುದು

ಇದು ಯಾವುದೇ ವಾಣಿಜ್ಯೋದ್ಯಮಿಗೂ ಸಲ್ಲದ ಮಾತಾಗಿದೆ. ನೀವು ಏನು ಮಾಡಬಲ್ಲಿರಿ ಅಥವಾ ಮುಂದೇನು ಮಾಡಲಿದ್ದೀರಿ ಎಂಬ ಬಗ್ಗೆ ಅತಿ ಹೆಚ್ಚು ಭರವಸೆ ಇಟ್ಟುಕೊಳ್ಳಬಾರದು. ಬದಲಿಗೆ, ಈಗ ನೀವು ಏನು ಮಾಡುತ್ತಿದ್ದೀರಿ ಹಾಗೂ ಭವಿಷ್ಯದಲ್ಲಿ ಏನು ಮಾಡಬಹುದು ಎಂಬ ಬಗ್ಗೆ ನಿಮಗೆ ಆತ್ಮವಿಶ್ವಾಸವಿರಲಿ. ಇದೇ ಹೊತ್ತಿನಲ್ಲಿ ಈ ಕಾರ್ಯಕ್ಕೆ ಎದುರಾಗುವ ತೊಡಕುಗಳನ್ನು ಧೈರ್ಯವಾಗಿ ಎದುರಿಸುವ ವಿಶ್ವಾಸವೂ ಇರಲಿ. ಆದರೆ ವಿಶ್ವಾಸವಿರಬೇಕೇ ವಿನಃ ಅತಿವಿಶ್ವಾಸವಿರಬಾರದು. ನಿಮ್ಮ ಮುಂದಿನ ಯೋಜನೆಗಳು ಕಾರ್ಯಗತವಾಗುತ್ತವೆ, ಇದಕ್ಕಾಗಿ ನಾನು ಎಲ್ಲವನ್ನೂ ಸರಿಯಾಗಿಯೇ ಮಾಡುತ್ತಿದ್ದೇನೆ, ಚಿಕ್ಕ ಚಿಕ್ಕ ವಿಷಯವನ್ನೂ ಪರಿಗಣಿಸಿದ್ದೇನೆ ಹಾಗಾಗಿ ಈ ಯೋಜನೆ ಯಶಸ್ವಿಯಾಗಬೇಕು ಎಂದು ಬಯಸುವುದು ಆತ್ಮವಿಶ್ವಾಸವಾಗಿದೆ. ನನಗೆಲ್ಲಾ ಗೊತ್ತು, ನಾನು ಮಾಡಿದ್ದೆಲ್ಲವೂ ಯಶಸ್ಸೇ ಆಗುತ್ತದೆ, ಮಣ್ಣನ್ನು ಮಾರಿದರೂ ಚಿನ್ನದ ಬೆಲೆಗೇ ಮಾರಾಟವಾಗುತ್ತದೆ ಎಂಬ ಭಾವನೆ ಅತಿವಿಶ್ವಾಸವಾಗಿದೆ. ಅತಿವಿಶ್ವಾಸದಲ್ಲಿ ಕೈಗೊಂಡ ತೀರ್ಮಾನಗಳು ತಪ್ಪಾಗಿಯೂ ಭಾರೀ ನಷ್ಟಕ್ಕೂ ಕಾರಣವಾಗಿರುವುದನ್ನು ಹಲವು ಉದಾಹರಣೆಗಳಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+