ಎಸ್ಎಂಎಸ್ ಮೂಲಕ ಆಧಾರ್ ವಿವರ ಹಂಚಿಕೊಳ್ಳಬೇಡಿ: ಎಲ್ಐಸಿ ಎಚ್ಚರಿಕೆ

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಸಂಸ್ಥೆ ತನ್ನ ಪಾಲಿಸಿದಾರರಿಗೆ ಆಧಾರ್ ಸಂಖ್ಯೆಯನ್ನು ಎಸ್ಎಂಎಸ್ ಮೂಲಕ ಹಂಚಿಕೊಳ್ಳುವುದರ ಕುರಿತು ಎಚ್ಚರಿಕೆ ನೀಡಿದೆ.

  ಎಸ್ಎಂಎಸ್ ಮೂಲಕ ಆಧಾರ್ ಸಂಖ್ಯೆ ಕಳುಹಿಸಿ ಎಲ್ಐಸಿ ಪಾಲಿಸಿಗಳೊಂದಿಗೆ ಜೋಡಣೆ ಮಾಡುವುದು ಸುರಕ್ಷಿತ ಕ್ರಮವಲ್ಲವಾಗಿದ್ದು, ಇಂತಹ ಸೌಲಭ್ಯವನ್ನು ಕಾರ್ಯಗತಗೊಳಿಸಿಲ್ಲ ಎಂದು ಹೇಳಿದೆ.

  ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರ

  ಸಾಮಾಜಿಕ ಜಾಲತಾಣಗಳಲ್ಲಿ ಎಲ್ಐಸಿ ಸಂಸ್ಥೆಯ ಲಾಂಛನದೊಂದಿಗೆ ಹಲವು ಸಂದೇಶಗಳು ಹರಿದಾಡುತ್ತಿದ್ದು, ಆ ಮೂಲಕ ಪಾಲಿಸಿದಾರರು ಆಧಾರ್ ಸಂಖ್ಯೆಯನ್ನು ಎಸ್ಎಂಎಸ್ ಕಳುಹಿಸುವ ಮೂಲಕ ಸಂಪರ್ಕಿಸಬೇಕು ಎಂದು ಬಿತ್ತರಿಸಲಾಗುತ್ತಿದೆ ಎಂದು ಎಲ್ಐಸಿ ನಿಗಮ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ. ಏನಿದು ಎಲ್ಐಸಿ ಆಧಾರ ಸ್ತಂಭ್ ವಿಮೆ? ಇದರ ಪ್ರಯೋಜನಗಳೇನು?

  ಎಲ್ಐಸಿ ಸ್ಪಷ್ಟನೆ

  ದೇಶದ ಅತಿದೊಡ್ಡ ವಿಮಾ ಕಂಪನಿ ಇಂತಹ ಯಾವುದೇ ಸಂದೇಶಗಳನ್ನು ಎಲ್ಐಸಿ ಸಂಸ್ಥೆ ರವಾನಿಸಿಲ್ಲ. ಅಲ್ಲದೇ ಎಸ್ಎಂಎಸ್ ಮೂಲಕ ಪಾಲಿಸಿಗಳನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡುವ ಸೌಲಭ್ಯ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಒಂದು ವೇಳೆ ಎಸ್ಎಂಎಸ್ ಮುಖಾಂತರ ಆಧಾರ್ ಸಂಖ್ಯೆ ಜೋಡಿಸುವ ಕ್ರಮ ಪರಿಚಯಿಸಿದರೆ ಎಲ್ಐಸಿ ವೆಬ್ಸೈಟ್ ನಲ್ಲಿ ಸೌಲಭ್ಯ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಸಿಹಿಸುದ್ದಿ! ಜನ ಧನ ಖಾತೆದಾರರು ಈ ಪ್ರಯೋಜನಗಳನ್ನು ಪಡೆಯಬಹುದು

  ವಿಮಾ ಪಾಲಿಸಿಗಳಿಗೆ ಆಧಾರ್ ಜೋಡಣೆ ಕಡ್ಡಾಯ

  ಕಳೆದ ತಿಂಗಳು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDA) ವಿಮಾ ಪಾಲಿಸಿಗಳೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದು ಹೇಳಿದೆ. ಇದಕ್ಕಾಗಿ ಡಿಸೆಂಬರ್ 31, 2017ರವರೆಗೆ ಗಡುವು ನೀಡಲಾಗಿದೆ.

  English summary

  Don't Share Aadhaar Details Via SMS Says: LIC

  State-owned LIC has cautioned policyholders against sharing their Aadhaar number through SMS, saying it has not operationalized any such facility to link the unique identification number with policies.
  Company Search
  Enter the first few characters of the company's name or the NSE symbol or BSE code and click 'Go'
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more