For Quick Alerts
ALLOW NOTIFICATIONS  
For Daily Alerts

ಏಳೆಂಟು ವರ್ಷಗಳಲ್ಲಿ 1 ಲಕ್ಷ ಸ್ಟಾರ್ಟ್ಅಪ್ ಗಳು ಅಸ್ತಿತ್ವ: ಮೋಹನದಾಸ್ ಪೈ

ಭಾರತದಲ್ಲಿ ಮುಂದಿನ ಏಳೆಂಟು ವರ್ಷಗಳಲ್ಲಿ ಒಂದುಲಕ್ಷ ಸ್ಟಾರ್ಟ್ಅಪ್ ಗಳು ಅಸ್ತಿತ್ವಕ್ಕೆ ಬರಲಿದ್ದು, 32.5 ಲಕ್ಷ ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಅಧ್ಯಕ್ಷ ಮೋಹನ್ ದಾಸ್ ಪೈ ಹೇಳಿದ್ದಾರೆ.

By Siddu
|

ಭಾರತದಲ್ಲಿ ಮುಂದಿನ ಏಳೆಂಟು ವರ್ಷಗಳಲ್ಲಿ ಒಂದುಲಕ್ಷ ಸ್ಟಾರ್ಟ್ಅಪ್ ಗಳು ಅಸ್ತಿತ್ವಕ್ಕೆ ಬರಲಿದ್ದು, 32.5 ಲಕ್ಷ ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಅಧ್ಯಕ್ಷ ಮೋಹನ್ ದಾಸ್ ಪೈ ಹೇಳಿದ್ದಾರೆ.

 
ಏಳೆಂಟು ವರ್ಷಗಳಲ್ಲಿ 1 ಲಕ್ಷ ಸ್ಟಾರ್ಟ್ಅಪ್ ಗಳು ಅಸ್ತಿತ್ವ: ಮೋಹನದಾಸ್

ಭವಿಷ್ಯತ್ತಿನಲ್ಲಿ ಈ ಸ್ಟಾರ್ಟ್ಅಪ್ ಗಳು (ನವೋದ್ಯಮ) ಭಾರತದ ಸಮಸ್ಯೆಗಳನ್ನು ಪರಿಹರಿಸಲಿವೆ ಎಂದು ರಾಜಸ್ಥಾನ ಡಿಜಿಫೆಸ್ಟ್‌ನಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

 

2025 ರ ವೇಳೆಗೆ ದೇಶದಾದ್ಯಂತ ಒಂದು ಲಕ್ಷ ಸ್ಟಾರ್ಟ್ಅಪ್ ಗಳು ಇರಲಿವೆ ಎಂಬುದು ನನ್ನ ನಂಬಿಕೆ. ಇದರಿಂದ 32.5 ಲಕ್ಷ ಜನರಿಗೆ ಉದ್ಯೋಗ ಸಿಗುವುದರ ಜತೆಗೆ ಹೂಡಿಕೆದಾರರು ಉತ್ತಮ ಲಾಭ ಮಾಡಿಕೊಳ್ಳಲಿದ್ದಾರೆ ಎಂದರು.

ಪ್ರಸ್ತುತ 32 ಸಾವಿರ ಸ್ಟಾರ್ಟ್ಅಪ್ ಗಳಿದ್ದು, ಪ್ರತಿವರ್ಷ 7 ಸಾವಿರ ಕಂಪನಿಗಳು ಬರುತ್ತಿವೆ. ತಂತ್ರಜ್ಞಾನದ ಬಳಕೆಯ ಮೂಲಕ ಯುವಕರು ಕಷ್ಟಕರ ಸವಾಲುಗಳನ್ನು ಪರಿಹರಿಸುತ್ತಿದ್ದಾರೆ. ಯುವಜನರ ಅವಿಷ್ಕಾರಗಳು ಭಾರತವನ್ನು ಬದಲಿಸಲಿದೆ. ಈಗಾಗಲೇ ಶಿಕ್ಷಣ, ಆರೋಗ್ಯ, ಇ-ಕಾಮರ್ಸ್‌ ಕ್ಷೇತ್ರಗಳಲ್ಲಿ ನವೋದ್ಯಮದ ಪರಿಣಾಮಗಳು ಕಂಡು ಬಂದಿದೆ.

ಭಾರತ ಸ್ಟಾರ್ಟ್ಅಪ್ ಗಳ ಸ್ಥಾಪನೆಯಲ್ಲಿ ಅಮೆರಿಕಾ ಮತ್ತು ಚೀನಾ ನಂತರದ ಮೂರನೇ ಸ್ಥಾನದಲ್ಲಿದೆ ಎಂದಿದ್ದಾರೆ.

English summary

India to have 1 lakh startups in 7-8 years, says Mohandas Pai

India will have one lakh startups in the next 7-8 years, employing 3.25 million people and creating USD 500 billion in value, Manipal Global Education Chairman T V Mohan Das Pai said today.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X