ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಎರಡು ಆಫರ್ ಗಳನ್ನು ಘೋಷಣೆ ಮಾಡಿದೆ. ಈ ಆಫರ್ ಗಳ ಮೂಲಕ ಜಿಯೋಗೆ ಭರ್ಜರಿ ತಿರುಗೇಟು ನೀಡಿದೆ.
ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಎರಡು ಆಫರ್ ಗಳನ್ನು ಘೋಷಣೆ ಮಾಡಿದೆ. ಈ ಆಫರ್ ಗಳ ಮೂಲಕ ಜಿಯೋಗೆ ಭರ್ಜರಿ ತಿರುಗೇಟು ನೀಡಿದೆ.
ಹೆಚ್ಚು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಏರ್ಟೆಲ್ ಮತ್ತು ಜಿಯೋ ಡೇಟಾ ದರ ಸಮರದಲ್ಲಿ ತೊಡಗಿಕೊಂಡಿವೆ. ಕಳೆದ ವರ್ಷ ಜಿಯೋ ಪ್ರವೇಶದ ನಂತರ ಎಲ್ಲಾ ಟೆಲಿಕಾಂ ಕಂಪನಿಗಳು ಪರಸ್ಪರ ಜಿದ್ದಾಜಿದ್ದಿಯಲ್ಲಿ ತೊಡಗಿ, ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಪರದಾಡುತ್ತಿವೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಮತ್ತು ಉಳಿಸಲು ಹೊಸ ಹೊಸ ಸ್ಪರ್ಧಾತ್ಮಕ ಯೋಜನೆಗಳನ್ನು ಘೋಷಿಸುತ್ತಿವೆ..
ರೂ. 549 ಪ್ಲಾನ್
ಏರ್ಟೆಲ್ ಸಂಸ್ಥೆ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ರೂ. 549ರ ಈ ಯೋಜನೆಯನ್ನು ಘೋಷಿಸಿದೆ. ಇದರ ವಿವರ ಇಲ್ಲಿ ನೀಡಲಾಗಿದೆ.
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: ಅನಿಯಮಿತ
3G/4G ಡೇಟಾ: 3GB/ಪ್ರತಿದಿನ
ರೂ. 799 ಪ್ಲಾನ್
ಹೆಚ್ಚಿನ ಡೇಟಾ ಸೌಲಭ್ಯ ಬಯಸುವ ಪ್ರಿಪೇಡ್ ಗ್ರಾಹಕರಿಗಾಗಿ ಏರ್ಟೆಲ್ ಈ ಯೋಜನೆಯನ್ನು ಘೋಷಿಸಿದೆ. ಇದರ ವಿವರ ಇಲ್ಲಿ ನೀಡಲಾಗಿದೆ.
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: ಅನಿಯಮಿತ
3G/4G ಡೇಟಾ: 3.5GB/ಪ್ರತಿದಿನ
ರೂ. 448 ಪ್ಲಾನ್
ದೀರ್ಘ ಅವಧಿಗೆ ಸರಾಸರಿ ಡೇಟಾ ಮತ್ತು ಕರೆ ಸೌಲಭ್ಯ ಬಯಸುವ ಪ್ರಿಪೇಡ್ ಗ್ರಾಹಕರಿಗಾಗಿ ಏರ್ಟೆಲ್ ಈ ಯೋಜನೆಯನ್ನು ಘೋಷಿಸಿದೆ. ಹೆಚ್ಚಿನ ಗ್ರಾಹಕರು ಇಷ್ಟಪಡುವ ಯೋಜನೆ ಇದಾಗಿದೆ.
ವ್ಯಾಲಿಡಿಟಿ: 70 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: ಅನಿಯಮಿತ
3G/4G ಡೇಟಾ: 1GB/ಪ್ರತಿದಿನ
ರೂ. 349 ಪ್ಲಾನ್
ತಿಂಗಳ ಅವಧಿಗೆ ಹೆಚ್ಚು ಡೇಟಾ ಸೌಲಭ್ಯ ಬಯಸುವ ಗ್ರಾಹಕರು ಇದನ್ನು ಆಯ್ಕೆ ಮಾಡಬಹುದು.
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: ಅನಿಯಮಿತ
3G/4G ಡೇಟಾ: 2GB/ಪ್ರತಿದಿನ
ರೂ. 199 ಪ್ಲಾನ್
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: ಅನಿಯಮಿತ
3G/4G ಡೇಟಾ: 1GB/ಪ್ರತಿದಿನ
ವ್ಯಾಲಿಡಿಟಿ ಅವಧಿ ಕಡಿಮೆ ಆಗುತ್ತಿದೆ
ಗ್ರಾಹಕರು ಗಮನಿಸಬೇಕಾದ ಒಂದು ವಿಚಾರವೆಂದರೆ ಟೆಲಿಕಾಂ ಕಂಪನಿಗಳು ಹೊಸ ಆಫರ್ ಗಳನ್ನು ಘೋಷಿಸುವುದರ ಜತೆಗೆ ಆ ಯೋಜನೆಗಳ ವ್ಯಾಲಿಡಿಟಿಯನ್ನು ಕಡಿಮೆ ಮಾಡುತ್ತಿವೆ. ಈ ಹಿಂದೆ 70 ದಿನ ಅಥವಾ 90 ದಿನಗಳವರೆಗೆ ಇದ್ದ ವ್ಯಾಲಿಡಿಟಿ ಅವಧಿ ಒಂದು ತಿಂಗಳಿಗೆ ಕಡಿಮೆಯಾಗುತ್ತಿದೆ. ಅಂದರೆ ಹೆಚ್ಚು ಡೇಟಾ ಅಥವಾ ಅನಿಯಮಿತ ಕರೆ ಸೌಲಭ್ಯ ನೀಡಿದರೂ ಅವಧಿ ಮಾತ್ರ ಕಡಿಮೆಯಾಗುತ್ತಿದೆ. ಇಲ್ಲವೆ ಬೆಲೆ ಹೆಚ್ಚಿರುತ್ತದೆ.


Click it and Unblock the Notifications