ವೊಡಾಫೋನ್ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ರೂ. 348 ರೂಪಾಯಿ ರೀಚಾರ್ಜ್ ಆಫರ್ ಬಿಡುಗಡೆ ಮಾಡಿದೆ. ಈ ಯೋಜನೆ ಮೂಲಕ ಹೆಚ್ಚು ಡೇಟಾ ಒದಗಿಸಲಿದ್ದು, ಹಿಂದಿನ್ 1gb ಗಿಂತ ಈಗ 2gb ಡೇಟಾ ನೀಡಲಿದೆ.
ವೊಡಾಫೋನ್ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ರೂ. 348 ರೂಪಾಯಿ ರೀಚಾರ್ಜ್ ಆಫರ್ ಬಿಡುಗಡೆ ಮಾಡಿದೆ. ಜಿಯೋ, ಏರ್ಟೆಲ್ ಕಂಪನಿಗಳು ಹೊಸ ಆಫರ್ ಗಳನ್ನು ಬಿಡುಗಡೆಗೊಳಿಸಿದ ನಂತರ ಇದೀಗ ವೊಡಾಫೋನ್ ಕೂಡ ಹೆಚ್ಚು ಡೇಟಾ ಬಯಸುವ ಗ್ರಾಹಕರಿಗೆ ಈ ಆಫರ್ ಪರಿಚಯಿಸಿದೆ. ಇದು ಟೆಲಿಕಾಂ ರಂಗದಲ್ಲಿನ ದರ ಸಮರಕ್ಕೆ ಇನ್ನೂ ವೇಗ ನೀಡಲಿದೆ.
ರೂ. 348 ರೀಚಾರ್ಜ್ ಪ್ಲಾನ್
ವೊಡಾಫೋನ್ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ಈ ಯೋಜನೆ ಪ್ರಸ್ತುತ ಪಡಿಸಿದೆ. ಈ ಯೋಜನೆ ಮೂಲಕ ಹೆಚ್ಚು ಡೇಟಾ ಒದಗಿಸಲಿದ್ದು, ಹಿಂದಿನ್ 1gb ಗಿಂತ ಈಗ 2gb ಡೇಟಾ ನೀಡಲಿದೆ.
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಎಸ್ಎಂಎಸ್:ಅನಿಯಮಿತ
4G ಡೇಟಾ: 2GB ಪ್ರತಿದಿನ
ನಿಯಮಗಳು ಅನ್ವಯ
ಆದರೆ ಈ ಆಫರ್ ದೆಹಲಿಯ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ದಿನಕ್ಕೆ ಉಚಿತ ಕರೆಯನ್ನು 250 ನಿಮಿಷಗಳಿಗ ನಿಗದಿಪಡಿಸಲಾಗಿದೆ. ಗ್ರಾಹಕರಿಗೆ ಒಟ್ಟು 56 ಜಿಬಿ ಡೇಟಾ ಸಿಗಲಿದೆ. 3 ಜಿ/4ಜಿ ಎರಡೂ ಹ್ಯಾಂಡ್ಸೆಟ್ ಗಳಲ್ಲೂ ಈ ಆಫರ್ ಬಳಸಬಹುದು. ಮೊದಲು ಈ ಆಫರ್ ಅನ್ನು ರಾಜಸ್ತಾನದ ಗ್ರಾಹಕರಿಗೆ ನೀಡಲಾಗಿತ್ತು. 28 ದಿನಗಳವರೆಗೆ ಪ್ರತಿದಿನ 1 ಜಿಬಿ ಡೇಟಾ ದೊರೆಯುತ್ತಿತ್ತು.
ಏರ್ಟೆಲ್ ರೂ. 349 ಪ್ಲಾನ್
ಏರ್ಟೆಲ್ ಕೂಡ ತಿಂಗಳ ಅವಧಿಗೆ ಹೆಚ್ಚು ಡೇಟಾ ಸೌಲಭ್ಯ ಬಯಸುವ ಗ್ರಾಹಕರಿಗಾಗಿ ರೂ. 349 ಪ್ಲಾನ್ ಪರಿಚಯಿಸಿದೆ. ವೊಡಾಫೋನ್ ಈ ಯೋಜ್ನೆಗೆ ವಿರುಧ್ಧವಾಗಿ ಮೇಲಿನ ಪ್ಲಾನ್ ಪರಿಚಯಿಸಿದೆ.
ವ್ಯಾಲಿಡಿಟಿ: 28 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್: ಅನಿಯಮಿತ
3G/4G ಡೇಟಾ: 2GB/ಪ್ರತಿದಿನ
ಜಿಯೋ ರೂ. 399 ಪ್ಲಾನ್
ಜಿಯೋ ಸಂಸ್ಥೆಯ ಅತಿಹೆಚ್ಚಿನ ಪ್ರಿಪೇಡ್ ಗ್ರಾಹಕರು ಈ ಯೋಜನೆಯನ್ನು ಬಳಸುತ್ತಿದ್ದಾರೆ. ಇದು ಜಿಯೋ ಧನ್ ಧನಾ ಧನ್ ಯೋಜನೆಯಾಗಿದೆ. ಎಲ್ಲಾ ಅಪರೇಟರ್ ಗಳ ನಡುವೆ ಕರೆ ಮತ್ತು ಎಸ್ಎಂಎಸ್ ಸೌಲಭ್ಯ ಅನಿಯಮಿತವಾಗಿರುತ್ತದೆ.
ವ್ಯಾಲಿಡಿಟಿ: 70 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಎಸ್ಎಂಎಸ್: ಅನಿಯಮಿತ
4G ಡೇಟಾ: 1GB ಪ್ರತಿದಿನ (ಒಟ್ಟು 70GB)


Click it and Unblock the Notifications