For Quick Alerts
ALLOW NOTIFICATIONS  
For Daily Alerts

ಭಾರತದ ಟಾಪ್ 10 ರಿಟೇಲ್ (ಚಿಲ್ಲರೆ) ಕಂಪನಿಗಳು

ಭಾರತ ಚಿಲ್ಲರೆ ವಲಯದಲ್ಲಿ ವಿಶ್ವದಲ್ಲೇ ಐದನೇ ದೊಡ್ಡ ತಾಣವಾಗಿ ಮಾರ್ಪಟ್ಟಿದೆ. ನಮಗೆ ಇಂದು ಅಂಗಡಿಗಳಲ್ಲಿ ತರಹೇವಾರಿ ದಿನಬಳಕೆಯ ವಸ್ತುಗಳು ಲಭ್ಯವಿವೆ.

By Siddu
|

ಭಾರತ ಚಿಲ್ಲರೆ ವಲಯದಲ್ಲಿ ವಿಶ್ವದಲ್ಲೇ ಐದನೇ ದೊಡ್ಡ ತಾಣವಾಗಿ ಮಾರ್ಪಟ್ಟಿದೆ. ನಮಗೆ ಇಂದು ಅಂಗಡಿಗಳಲ್ಲಿ ತರಹೇವಾರಿ ದಿನಬಳಕೆಯ ವಸ್ತುಗಳು ಲಭ್ಯವಿವೆ. ಇವನ್ನು ಹಲವಾರು ಸಂಸ್ಥೆಗಳು ತಯಾರಿಸಿ ವಿತರಕರ ಮೂಲಕ ದೇಶದೆಲ್ಲೆಡೆ ಇರುವ ಅಂಗಡಿಗಳಿಗೆ ತಲುಪಿಸಲಾಗುತ್ತದೆ. ಕಾರ್ಖಾನೆಯಿಂದ ಗ್ರಾಹಕನವರೆಗೆ ಹಲವು ಕೈಗಳನ್ನು ದಾಟಿ ಬರುವ ಈ ಉತ್ಪನ್ನಗಳಲ್ಲಿ ತಕ್ಷಣವೇ ಕೆಡದ ವಸ್ತುಗಳಾದ ಫ್ಯಾಶನ್, ಆಹಾರ ವಸ್ತುಗಳು, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ಮೊದಲಾದ ವಸ್ತುಗಳು ಸೇರಿವೆ.

 

ಬನ್ನಿ, ಭಾರತದಲ್ಲಿರುವ ಇಂತಹ ಪ್ರಮುಖ ಹತ್ತು ರಿಟೇಲ್ ಕಂಪನಿಗಳ (ದಿನಬಳಕೆ ವಸ್ತುಗಳ ತಯಾರಿಕಾ ಸಂಸ್ಥೆ) ಬಗ್ಗೆ ಅರಿಯೋಣ...

10. ಕೇವೆಲ್ ಕಿರಣ್ ಕ್ಲಾಥಿಂಗ್ ಲಿಮಿಟೆಡ್

10. ಕೇವೆಲ್ ಕಿರಣ್ ಕ್ಲಾಥಿಂಗ್ ಲಿಮಿಟೆಡ್

1971 ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ತನ್ನ ಮುಖ್ಯ ಸಂಸ್ಥೆಯನ್ನು ಮಹಾರಾಷ್ಟ್ರದ ಮುಂಬೈಯಲ್ಲಿ ಹೊಂದಿದೆ. ಈ ಸಂಸ್ಥೆಯ ಪ್ರಮುಖ ಉತ್ಪನ್ನಗಳೆಂದರೆ ಫ್ಯಾಶನ್ ಹಾಗೂ ನವೀನ ವಿನ್ಯಾಸದ ಸಿದ್ಧ ಉಡುಪುಗಳು. ಇದರ ಉತ್ಪನ್ನಗಳಲ್ಲಿ ಖ್ಯಾತ ಬ್ರಾಂಡ್ ಗಳಾದ ಕಿಲ್ಲರ್, ಲಾಮನ್ PG3, ಇಂಟೆಗ್ರಿಟಿ ಹಾಗೂ ಈಸೀಸ್ ಸೇರಿವೆ. ಈ ಉತ್ಪನ್ನಗಳು ದೇಶದಾದ್ಯಂತ ತನ್ನ ಉತ್ತಮ ಗುಣಮಟ್ಟ ಹಾಗೂ ನವೀನ ವಿನ್ಯಾಸಗಳಿಗಾಗಿ ಖ್ಯಾತವಾಗಿವೆ. ದೇಶದಾದ್ಯಂತ ನೂರಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿದೆ. ಈ ಉತ್ಪನ್ನಗಳ ಗ್ರಾಹಕರು ಕೇವಲ ಭಾರತದಲ್ಲಿ ಮಾತ್ರವಲ್ಲ, ಏಶಿಯಾದ ಇತರ ದೇಶಗಳು, ಗಲ್ಫ್ ಹಾಗೂ ರಶ್ಯಾದಲ್ಲಿಯೂ ಇದ್ದಾರೆ. ಈ ಸಂಸ್ಥೆಯ ಉತ್ಪನ್ನಗಳು ಮಹಿಳೆಯರು ಹಾಗೂ ಪುರುಷರಿಗಾಗಿ ತಯಾರಾಗುತ್ತವೆ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟ ಸಂಸ್ಥೆಯಿಂದ ISO 9000 ಪ್ರಮಾಣ ಪತ್ರವನ್ನೂ ಪಡೆದುಕೊಂಡಿದೆ.

9. ಟೈಟನ್ ಇಂಡಸ್ಟ್ರೀಸ್
 

9. ಟೈಟನ್ ಇಂಡಸ್ಟ್ರೀಸ್

ಜಗತ್ತಿನ ಅತ್ಯುತ್ತಮ ಗುಣಮಟ್ಟದ ಕೈಗಡಿಯಾರವನ್ನು ತಯಾರಿಸುವ ಸಂಸ್ಥೆಯಾದ ಟೈಟನ್ ತನ್ನ ಮುಖ್ಯ ಕಛೇರಿಯನ್ನು ಕರ್ನಾಟಕದ ಬೆಂಗಳೂರಿನಲ್ಲಿ ಹೊಂದಿದ್ದು ಇದರ ಉತ್ಪನ್ನಗಳಲ್ಲಿ ಗಡಿಯಾರಗಳ ಸಹಿತ ಆಭರಣಗಳೂ ಸೇರಿವೆ. ಈ ಸಂಸ್ಥೆ ವಾಸ್ತವವಾಗಿ ಟಾಟಾ ಗ್ರೂಪ್ ಹಾಗೂ ತಮಿಳು ನಾಡು ಕೈಗಾರಿಕಾ ಅಭಿವೃದ್ದಿ ಪ್ರಾಧಿಕಾರ ಸಂಸ್ಥೆಗಳ ಜಂಟಿ ಹೂಡಿಕೆಯಾಗಿದೆ. ಈ ಸಂಸ್ಥೆ 1984ರಲ್ಲಿ ಪ್ರಾರಂಭವಾಗಿದೆ. ನಿಧಾನಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಭಾರತದ ಇತರ ಕೈಗಡಿಯಾರ ಸಂಸ್ಥೆಗಳನ್ನು ಹಿಂದಿಕ್ಕಿ ಈಗ ಭಾರತದ ಪ್ರಥಮ ಸ್ಥಾನದ ಸಂಸ್ಥೆಯಾಗಿದ್ದು, ಇಂದು ಹಲವಾರು ದೇಶಗಳಲ್ಲಿ ಇದರ ಉತ್ಪನ್ನಗಳು ಮಾರಾಟವಾಗುತ್ತಿವೆ. ಇದರ ಆಭರಣ ವಿಭಾಗವಾದ ತನಿಷ್ಕ್ ಜೂವೆಲ್ಲರಿ ಬೈ ಟೈಟನ್ ಎಂಬ ಸಂಸ್ಥೆ ಈಗ ಭಾರತರ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಆಭರಣಗಳ ಜೊತೆಗೆ ಸುಗಂದ ದ್ರವ್ಯ, ಬೆಲ್ಟ್, ಹೆಲ್ಮೆಟ್ ಹಾಗೂ ತಂಪು ಕನ್ನಡಕಗಳನ್ನೂ ತಯಾರಿಸಿ ಮಾರಾಟ ಮಾಡಲಾಗುತ್ತದೆ.

8. ಆದಿತ್ಯಾ ಬಿರ್ಲಾ ರಿಟೇಲ್

8. ಆದಿತ್ಯಾ ಬಿರ್ಲಾ ರಿಟೇಲ್

2006ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಈಗ $41 ಬಿಲಿಯನ್ ನಷ್ಟು ಭಾರೀ ಮೊತ್ತದ ಹೂಡಿಕೆಯನ್ನು ಮಾಡಿದೆ. ಇದರ ಮುಖ್ಯ ಕಛೇರಿ ಮುಂಬೈಯಲ್ಲಿದೆ. ಈ ಸಂಸ್ಥೆಯ ಒಡೆತನದಲ್ಲಿ ಐನೂರು ಸೂಪರ್ ಮಾರ್ಕೆಟ್ಟುಗಳು ಹಾಗೂ ಹದಿನೈದು ಹೈಪರ್ ಮಾರ್ಕೆಟ್ಟುಗಳಿವೆ. ತನ್ನ ಸೇವೆಯಿಂದ ಹಲವು ಪ್ರಶಸ್ತಿಗಳನ್ನು ಪಡೆದಿದ್ದು ಇದರಲ್ಲಿ ಈ ವಿಭಾಗದ ಮಹೋನ್ನತ ಪ್ರಶಸ್ತಿಯಾದ ಮಾಸ್ಟರ್ ಬ್ರಾಂಡ್ ಅವಾರ್ಡ್ ಬೈ ವರ್ಲ್ಡ್ ಬ್ರಾಂಡ್ ಕಾಂಗ್ರೆಸ್ ಪ್ರಶಸ್ತಿಯನ್ನೂ 2012ರಲ್ಲಿ ಪಡೆದುಕೊಂಡಿದೆ. ಇದರ ಆದಾಯದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಆದಾಯ ಇದರ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಪಡೆಯಲಾಗುತ್ತದೆ. ಇದರ ಉತ್ಪನ್ನಗಳು ಮೂವತ್ತಾರಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿವೆ.

7. ಮ್ಯಾಕ್ ಡೋನಾಲ್ಡ್ಸ್

7. ಮ್ಯಾಕ್ ಡೋನಾಲ್ಡ್ಸ್

ಯುವ ಜನತೆಯ ಅಚ್ಚುಮೆಚ್ಚಿನ ಸಿದ್ಧ ಆಹಾರ ತಯಾರಿಕಾ ಸಂಸ್ಥೆಯಾದ, ಮ್ಯಾಕ್ ಡೋನಾಲ್ಡ್ಸ್ 1940ರಲ್ಲಿ ಪ್ರಾರಂಭವಾಗಿದೆ. ಇದರ ಮುಖ್ಯ ಕಛೇರಿ ಅಮೇರಿಕಾದ ಇಲಿನಾಯ್ಸ್ ಪ್ರಾಂತದಲ್ಲಿರುವ ಓಕ್ ಬ್ರೂಕ್ ಎಂಬ ನಗರದಲ್ಲಿದೆ. ಇದರ ಉತ್ಪನ್ನಗಳು ವಿಶ್ವದ ನೂರಾಮೂವತ್ತು ರಾಷ್ಟ್ರಗಳಿಗೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದ್ದು ಭಾರತಕ್ಕೆ ಇದು 1996ರಲ್ಲಿ ಲಗ್ಗೆಯಿಟ್ಟಿದೆ. ಆ ಬಳಿಕ ಭಾರತದ ಯುವಜನತೆ ಇದರ ಉತ್ಪನ್ನಗಳನ್ನು ಹೆಚ್ಚು ಇಷ್ಟಪಡುವ ಮೂಲಕ ಭಾರತದಲ್ಲಿಯೂ ಭಾರೀ ಯಶಸ್ಸು ಗಳಿಸಿದೆ. ಈ ಯಶಸ್ಸಿನ ಪರಿಣಾಮವಾಗಿ ಇಂದು ಭಾರತವೊಂದರಲ್ಲಿಯೇ ಮುನ್ನೂರಕ್ಕೂ ಹೆಚ್ಚು ಮಳಿಗೆಗಳಿವೆ. ಭಾರತದಲ್ಲಿ ಈ ಸಂಸ್ಥೆ ನಾರ್ಥ್ ಅಂಡ್ ಈಸ್ಟ್ ಹಾಗೂ ಸೌಥ್ ಅಂಡ್ ವೆಸ್ಟರ್ಸ್ ರೀಜನ್ ಎಂಬ ಎರಡು ಸಂಸ್ಥೆಗಳ ಸಮೂಹ ಹೂಡಿಕೆಯಿಂದ ನಡೆಸಲ್ಪಡುತ್ತವೆ.

6. ಟ್ರೆಂಟ್ ಲಿಮಿಟೆಡ್

6. ಟ್ರೆಂಟ್ ಲಿಮಿಟೆಡ್

ಈ ಸಂಸ್ಥೆ ಟಾಟಾ ಸಮೂಹ ಸಂಸ್ಥೆಗಳಲ್ಲಿ ಒಂದಾಗಿದ್ದು 1998ರಲ್ಲಿ ಪ್ರಾರಂಭವಾಗಿದೆ. ಇದರ ಮುಖ್ಯ ಕಛೇರಿ ಮುಂಬೈಯಲ್ಲಿದ್ದು ಇದರ ಪ್ರಮುಖ ಬ್ರಾಂಡ್ ಗಳಲ್ಲಿ ವೆಸ್ಟ್ ಸೈಡ್ ಹಾಗೂ ಲ್ಯಾಂಡ್ ಮಾರ್ಕ್ ಬುಕ್ ಸ್ಟೋರ್ ಗಳು ಸೇರಿವೆ. ಇದರ ಇತರ ಬ್ರಾಂಡ್ ಗಳಲ್ಲಿ ಸ್ಟಾರ್ ಬಾಜಾರ್, ಫ್ಯಾಶನ್ ಯಾತ್ರಾ ಸಹ ಸೇರಿವೆ. ಇದರ ಉತ್ಪನ್ನಗಳಲ್ಲಿ ಪುರುಷರ ಹಾಗೂ ಮಹಿಳೆಯರ ಸಿದ್ಧ ಉಡುಪುಗಳು, ಬಿಡಿ ಭಾಗಗಳು, ಸೌಂದರ್ಯ ಪ್ರಸಾದನಗಳು ಸೇರಿವೆ. ಇದರ ಸಂಸ್ಥೆಗಳು ಭಾರತದ ಮೂವತ್ತಕ್ಕೂ ಹೆಚ್ಚು ನಗರಗಳಲ್ಲಿವೆ. ಲ್ಯಾಂಡ್ ಮಾರ್ಕ್ ಸ್ಟೋರ್ ನಲ್ಲಿ ಪುಸ್ತಕಗಳು ಹಾಗೂ ಸಂಗೀತದ ಮುದ್ರಿತ ಆವೃತ್ತಿಗಳು ಮಾರಾಟವಾಗುತ್ತವೆ.

5. ITC -LRBD

5. ITC -LRBD

ಭಾರತದ ಕೊಲ್ಕಾತ್ತಾ ನಗರದಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಈ ಸಂಸ್ಥೆ 1910 ರಲ್ಲಿ ಸ್ಥಾಪಿತವಾಗಿದ್ದು ಭಾರತದ ಅತ್ಯುತ್ತಮ ಸಂಸ್ಥೆಗಳಲ್ಲೊಂದಾಗಿದೆ. ಇದರ ಪ್ರಮುಖ ಶಾಖೆಯಾದ ಲೈಫ್ ಸ್ಟೈಲ್ ದೇಶದಲ್ಲಿಯೇ ಅತ್ಯುತ್ತಮ ಸಿದ್ಧ ಉಡುಪುಗಳನ್ನು ಮಾರಾಟ ಮಾಡುವ ಸಂಸ್ಥೆಯಾಗಿದೆ. ಇದರ ಎರಡು ಬ್ರಾಂಡ್ ಗಳಾದ ವಿಲ್ಸ್ ಲೈಫ್ ಸ್ಟೈಲ್ ಹಾಗೂ ಜಾನ್ ಪ್ಲೇಯರ್ಸ್ ಅತಿಹೆಚ್ಚು ಮಾರಾಟವಾಗುವ ಹೆಸರುಗಳಾಗಿವೆ. ಈ ಸಂಸ್ಥೆಯ ಇತರ ವಾಣಿಜ್ಯ ವಹಿವಾಟುಗಳಲ್ಲಿ ಶೀಘ್ರವಾಗಿ ಮಾರಾಟವಾಗುವ ಉತ್ಪನ್ನಗಳು, ಹೋಟೆಲುಗಳು, ಕಾಗದದ ರಟ್ಟುಗಳು, ಪ್ಯಾಕಿಂಗ್ ಹಾಗೂ ಕೃಷಿ ಉತ್ಪನ್ನಗಳಾಗಿವೆ. ಈ ಸಂಸ್ಥೆಯಲ್ಲಿ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ ಹಾಗೂ ಅರವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿವೆ. ಫೋರ್ಬ್ಸ್2000 ಪಟ್ಟಿಯಲ್ಲಿ ಈ ಸಂಸ್ಥೆಯೂ ಒಂದು ಭಾಗವಾಗಿತ್ತು. ಪ್ರಸ್ತುತ 2017 ನೇ ವರ್ಷದಲ್ಲಿಯೂ ಇದು ಭಾರತದ ಅತ್ಯುತ್ತಮ ಹತ್ತು ಸಂಸ್ಥೆಗಳಲ್ಲೊಂದಗಿದೆ.

4. ಶಾಪರ್ಸ್ ಸ್ಟಾಪ್

4. ಶಾಪರ್ಸ್ ಸ್ಟಾಪ್

1991ರಲ್ಲಿ ಮುಂಬೈಯ ಅಂಧೇರಿಯಲ್ಲಿ ಪ್ರಾರಂಭವಾದ ಈ ಮಳಿಗೆ ಇಂದು ತನ್ನ ಉತ್ತಮ ಉತ್ಪನ್ನ ಹಾಗೂ ಸೇವೆಗಾಗಿ ಖ್ಯಾತಿ ಪಡೆದಿದೆ. ಅಲ್ಲದೇ ಹಾಲ್ ಆಫ್ ಫೇಮ್ ಹಾಗೂ ಎಮರ್ಜಿಂಗ್ ಮಾರ್ಕೆಟ್ ರಿಟೇಲರ್ ಆಫ್ ದ ಇಯರ್ ಎಂಬ ಪ್ರಶಸ್ತಿಯನ್ನೂ ಪಡೆದಿದೆ. ಪ್ರಸ್ತುತ ದೇಶದ ಮೂವತ್ತೈದು ನಗರಗಳಲ್ಲಿ ಎಪ್ಪತ್ತನಾಲ್ಕು ಶಾಖೆಗಳನ್ನು ಹೊಂದಿದ್ದು ಕೆ. ರಹೇಜಾ ಕಾರ್ಪ್. ಗ್ರೂಪ್ ಸಂಸ್ಥೆಯ ಒಡೆತನವನ್ನು ಪಡೆದಿದೆ. ಈ ಸಂಸ್ಥೆಯ ಉತ್ಪನ್ನಗಳಲ್ಲಿ ಅಂತಾರಾಷ್ಟ್ರೀಯ ಬ್ರಾಂಡ್ ಗಳು, ಫ್ಯಾಶನ್ ಉತ್ಪನ್ನಗಳು ಹಾಗೂ ಸಿದ್ಧ ಉಡುಪುಗಳು ಸೇರಿವೆ.

3. ಪ್ರೋವೊಗ್ ಇಂಡಿಯಾ ಲಿಮಿಟೆಡ್

3. ಪ್ರೋವೊಗ್ ಇಂಡಿಯಾ ಲಿಮಿಟೆಡ್

1997ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಮುಂಬೈಯಲ್ಲಿ ತನ್ನ ಮುಖ್ಯ ಕಛೇರಿಯನ್ನು ಹೊಂದಿದ್ದು ಪ್ರಾರಂಭದಲ್ಲಿ ಕೇವಲ ಪುರುಷರ ಉಡುಪುಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿತ್ತು. ಕ್ರಮೇಣ ಮಹಿಳೆಯರ ಸಿದ್ಧ ಉಡುಪುಗಳನ್ನೂ ತಯಾರಿಸಿ ಮಾರಾಟ ಮಾಡುವ ಮೂಲಕ ಹೆಚ್ಚು ಪ್ರಸಿದ್ದಿ ಪಡೆದಿದ್ದು ಈಗ ನಾನೂರೈವತ್ತಕ್ಕೂಹೆಚ್ಚು ಉದ್ಯೋಗ ಪಡೆದಿದ್ದಾರೆ. ಪ್ರಸ್ತುತ ಇದು ದೇಶದ ಪ್ರಮುಖ ಸಂಸ್ಥೆಗಳಲ್ಲೊಂದಾಗಿದ್ದು ಪುರುಷರ ಹಾಗೂ ಮಹಿಳೆಯರ ಫ್ಯಾಶನ್ ವಸ್ತುಗಳು, ಉಡುಪುಗಳು ಹಾಗೂ ಇತರ ಉತ್ಪನ್ನಗಳನ್ನು ಉತ್ಪಾದಿಸಿ ವಿತರಿಸುತ್ತಿದೆ. ಇಂದು ದೇಶದಾದ್ಯಂತ ಇನ್ನೂರೈವತ್ತಕ್ಕೂ ಹೆಚ್ಚು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.

2. ಪ್ಯಾಂಟಾಲೂನ್ಸ್ ರಿಟೇಲ್ ಲಿಮಿಟೆಡ್

2. ಪ್ಯಾಂಟಾಲೂನ್ಸ್ ರಿಟೇಲ್ ಲಿಮಿಟೆಡ್

ಮುಂಬೈಯಲ್ಲಿ ತನ್ನ ಮುಖ್ಯ ಕಛೇರಿಯನ್ನುಹೊಂದಿರುವ ಈ ಸಂಸ್ಥೆ 1997ರಲ್ಲಿ ಪ್ರಾರಂಭವಾಯಿತು. ಅಚ್ಚರಿ ಎಂದರೆ ಇದರ ಮೊದಲ ಮಳಿಗೆ ಕೊಲ್ಕಾತ್ತಾದ ಗಾರಿಯಾಹಟ್ ಎಂಬಲ್ಲಿ ಪ್ರಾರಂಭವಾಯಿತು. ಈ ಸಂಸ್ಥೆ ಫ್ಯೂಚರ್ ಗ್ರೂಪ್ ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಹಾಗೂ ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ ಮೂವತ್ತೈದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಸಂಸ್ಥೆಯ ಪ್ರಮುಖ ಮಳಿಗೆಗಳಲ್ಲಿ ಬಿಗ್ ಬಾಜಾರ್, ಫುಡ್ ಬಾಜಾರ್, ಬ್ರಾಂಡ್ ಫ್ಯಾಕ್ಟರಿ, ಟಾಪ್ ಟೆನ್ ಹಾಗೂ ಸಿತಾರಾ ಸೇರಿವೆ.

1. ರಿಲಯನ್ಸ್ ರಿಟೇಲ್ ಲಿಮಿಟೆಡ್

1. ರಿಲಯನ್ಸ್ ರಿಟೇಲ್ ಲಿಮಿಟೆಡ್

ರಿಲಯೆನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಒಡೆತನದ ಈ ಸಂಸ್ಥೆ 2006ರಲ್ಲಿ ಪ್ರಾರಂಭವಾಗಿದೆ. ಇದರ ಚಿಲ್ಲರೆ ಮಳಿಗೆಗಳಲ್ಲಿ ಆಹಾರ ವಸ್ತುಗಳು, ದಿನಬಳಕೆಯ ವಸ್ತುಗಳು, ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ, ಗೃಹಬಳಕೆ, ಮನೆಯ ಅಲಂಕಾರಿಕಾ ವಸ್ತು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಕೃಷಿ ಉಪಕರಣಗಳು ಮೊದಲಾದವುಗಳನ್ನು ಮಾರಾಟ ಮಾಡುತ್ತದೆ. ಅಷ್ಟೇ ಅಲ್ಲ, ತಾಜಾ ತರಕಾರಿ, ಹಣ್ಣುಗಳು ಮತ್ತು ಹೂವುಗಳೂ ಈಗ ಇಲ್ಲಿ ದೊರಕುತ್ತವೆ. ಇದರ ಮುಖ್ಯ ಕಛೇರಿ ಮುಂಬೈಯಲ್ಲಿದ್ದು ದೇಶದಾದ್ಯಂತ ಸಾವಿರದೈನೂರಕ್ಕೂ ಹೆಚ್ಚು ಮಳಿಗೆಗಳಿವೆ. ಇದರ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಮುಕೇಶ್ ಅಂಬಾನಿಯವರು ಈ ಸಂಸ್ಥೆಯ ಒಡೆತನ ಹೊಂದಿದ್ದಾರೆ.

ಕೊನೆ ಮಾತು

ಕೊನೆ ಮಾತು

2017ರಲ್ಲಿ ಪ್ರಕಟವಾದ ಪಟ್ಟಿಯ ಪ್ರಕಾರ ಇವು ದೇಶದ ಪ್ರಮುಖ ಹತ್ತು ದಿನಬಳಕೆ ವಸ್ತುಗಳ ತಯಾರಿಕಾ ಸಂಸ್ಥೆಗಳಾಗಿವೆ. ಭಾರತದ ಜನತೆಗೆ ಈ ಸಂಸ್ಥೆಗಳ ಉತ್ಪನ್ನಗಳು ನಿತ್ಯದ ಅಗತ್ಯಗಳಾಗಿದ್ದು, ದೇಶದ ಆರ್ಥಿಕ ವ್ಯವಸ್ಥೆಗೆ ತಮ್ಮದೇ ಕೊಡುಗೆಯನ್ನು ನೀಡಿವೆ. ಆಹಾರ, ಫ್ಯಾಶನ್, ನಿತ್ಯಬಳಕೆ ವಸ್ತುಗಳು, ಗೃಹೋಪಕರಣಗಳನ್ನು ಸುಲಭ ಬೆಲೆಯಲ್ಲಿ ಒದಗಿಸುವ ಮೂಲಕ ಜೀವನವನ್ನು ಉತ್ತಮಗೊಳಿಸಲು ನೆರವಾಗಿವೆ.

Read more about: finance news money india gdp
English summary

Top 10 Best Retail Companies in India 2017

The Indian Retail industry accounts for over 10% of the country’s GDP and around 8% of employment. India has become the fifth largest destination in the world in terms of retail space.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X