ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ದಂಡ ವಿಧಿಸುತ್ತಿರುವುದು ಭಾರೀ ಸುದ್ದಿಯಾಗಿದೆ. 2017ರ್ ಸಾಲಿನ ಏಪ್ರಿಲ್-ನವೆಂಬರ್ ತಿಂಗಳ ಅವಧಿಯಲ್ಲಿ ಬ್ಯಾಂಕುಗಳು ರೂ. 2320 ಕೋಟಿ ದಂಡ ವಿಧಿಸಿವೆ.
ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ದಂಡ ವಿಧಿಸುತ್ತಿರುವುದು ಭಾರೀ ಸುದ್ದಿಯಾಗಿದೆ.

2017ರ್ ಸಾಲಿನ ಏಪ್ರಿಲ್-ನವೆಂಬರ್ ತಿಂಗಳ ಅವಧಿಯಲ್ಲಿ ಬ್ಯಾಂಕುಗಳು ರೂ. 2320 ಕೋಟಿ ದಂಡ ವಿಧಿಸಿವೆ.
ಇದರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಮುಂಚೂಣಿಯಲ್ಲಿದ್ದು, ಎಸ್ಬಿಐ ನ ಉಳಿತಾಯ ಖಾತೆಗಳಲ್ಲಿ ಕನಿಷ್ಟ ಮೊತ್ತ ಕಾಯ್ದುಕೊಳ್ಳಲು ವಿಫಲವಾಗಿರುವ ಗ್ರಾಹಕರಿಗೆ ಬರೋಬ್ಬರಿ ರೂ. 1,771 ಕೋಟಿ ದಂಡ ವಿಧಿಸಿದೆ.
ಖಾತೆಗಳಲ್ಲಿ ಕನಿಷ್ಟ ಮೊತ್ತ ಕಾಯ್ದುಕೊಳ್ಳಲಾಗದ ಗ್ರಾಹಕರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ರೂ. 97.34 ಕೋಟಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ರೂ. 68.67 ಕೋಟಿ ಸಂಗ್ರಹಿಸಿದೆ.
ಜನ್ ಧನ್ ಖಾತೆ, ಬೇಸಿಕ್ ಸೇವಿಂಗ್ ಖಾತೆ, ಸಣ್ಣ ಖಾತೆ, ಪಿಂಚಣಿದಾರರು, ಮೈನರ್ ಮತ್ತು ಎಲ್ಲಾ ಸಾಮಾಜಿಕ ಭದ್ರತಾ ಖಾತೆಗಳಲ್ಲಿ ಗ್ರಾಹಕರು ಕನಿಷ್ಠ ಮೊತ್ತ ಕಾಯ್ದುಕೊಳ್ಳಬೇಕಾಗಿಲ್ಲ ಎಂದು ಎಸ್ಬಿಐ ಹೇಳಿದೆ.
ಎಸ್ಬಿಐ ಜುಲೈ- ಸಪ್ಟೆಂಬರ್ ತ್ರೈಮಾಸಿಕದ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಮೊತ್ತವನ್ನು ದಂಡ ವಸೂಲಿಯಿಂದ ಪಡೆದಿದೆ.


Click it and Unblock the Notifications