ಭಾರತದಲ್ಲಿನ 15 ಕ್ರೌಡ್ ಫಂಡಿಂಗ್ ಸಂಸ್ಥೆಗಳು

ಭಾರತದಲ್ಲಿ ಕ್ರೌಢ್ ಫಂಡಿಂಗ್ ಉದ್ಯಮ ನಿಧಾನವಾಗಿ ಬೆಳೆಯುತ್ತಿದ್ದು, ನಿಧಿಸಂಗ್ರಹದಲ್ಲಿ ದೊಡ್ಡ ಪಾತ್ರವಹಿಸುತ್ತಿವೆ. ಕ್ರೌಡ್ ಫಂಡಿಂಗ್ ಅನೇಕ ರೀತಿಯದ್ದಾಗಿದೆ.

ಭಾರತದಲ್ಲಿ ಕ್ರೌಡ್ ಫಂಡಿಂಗ್ ಉದ್ಯಮ ನಿಧಾನವಾಗಿ ಬೆಳೆಯುತ್ತಿದ್ದು, ನಿಧಿಸಂಗ್ರಹದಲ್ಲಿ ದೊಡ್ಡ ಪಾತ್ರವಹಿಸುತ್ತಿವೆ. ಕ್ರೌಡ್ ಫಂಡಿಂಗ್ ಅನೇಕ ರೀತಿಯದ್ದಾಗಿದೆ.

ಹಣ ಸಂಗ್ರಹಿಸುವವರು ಉದ್ಯಮಶೀಲತೆ, ಸಾಂಸ್ಕೃತಿಕ-ಸಾಮಾಜಿಕ ಕಾರಣಗಳು, ವೈದ್ಯಕೀಯ ಕಾರಣಗಳು ಇತ್ಯಾದಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಯೋಜನೆಗಳಿಗಾಗಿ ಹಣವನ್ನು ಸಂಗ್ರಹಿಸಲು ಕ್ರೌಢ್ ಫಂಡಿಂಗ್ ಉದ್ಯಮ ಸಹಕಾರಿಯಾಗುತ್ತದೆ.
ಭಾರತದಲ್ಲಿನ ಟಾಪ್ 15 ಕ್ರೌಡ್ ಫೌಂಡಿಂಗ್ ವೇದಿಕೆಗಳನ್ನು ನೋಡೋಣ ಬನ್ನಿ...

1. ಬಿಟ್ ಗಿವಿಂಗ್ (Bitgiving)

1. ಬಿಟ್ ಗಿವಿಂಗ್ (Bitgiving)

ಸ್ಥಾಪಕಿ ಮತ್ತು ಸಿಇಓ: ಇಶಿತಾ ಆನಂದ್
ಕಮಿಷನ್ ಶುಲ್ಕ: 6 % - 10 %
ನವದೆಹಲಿಯ ಮೂಲ ಹೊಂದಿರುವ ಬಿಟ್ ಗಿವಿಂಗ್ ಸಂಸ್ಥೆಯು ವಿವಿಧ ಹಿನ್ನೆಲೆಗಳನ್ನು(ಕಲಾವಿದರು, ಎಂಜಿನಿಯರುಗಳು, ಇತ್ಯಾದಿ) ಹೊಂದಿರುವ ಜನರನ್ನು ಒಟ್ಟುಗೂಡಿಸಿ ತಮ್ಮ ಕತೆಯನ್ನು ಹಂಚಿಕೊಳ್ಳಲು ಮತ್ತು ಹಲವಾರು ಕಾರಣಗಳು - ಸಾಂಸ್ಥಿಕ, ಸಾಮಾಜಿಕ ಮತ್ತು ಸೃಜನಶೀಲ ಯೋಜನೆಗಳಿಗೆ ಹಣವನ್ನು ಸಂಗ್ರಹಿಸಲು ಜನರನ್ನು ಶಕ್ತಗೊಳಿಸುತ್ತದೆ. ಇದರಲ್ಲಿ ವೈದ್ಯಕೀಯ ಉದ್ದೇಶಗಳಿಗಾಗಿ ಹಣವನ್ನು ಸಂಗ್ರಹಿಸುವಲ್ಲಿ ಶೇ. 15ರಷ್ಟು ಗಮನವನ್ನು ಕೇಂದ್ರೀಕರಿಸುತ್ತಾರೆ.
ಬಿಟ್ ಗಿವಿಂಗ್ ಸಂಸ್ಥೆಯು ಇದುವರೆಗೂ 650ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿದೆ ಮತ್ತು ಅದರಲ್ಲಿ ಗಮನಾರ್ಹ ಯಶಸ್ಸಿನ ಕಥೆಗಳೆಂದರೆ ಭೂಕಂಪಗಳ ನಂತರ ನೇಪಾಳಕ್ಕೆ ಸಹಾಯ ಮಾಡುವ ಯೋಜನೆಗಳು, ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾರತೀಯ ಅಥ್ಲೀಟ್ ಗಳನ್ನು ಕಳುಹಿಸುವುದು. ಮರಾಠವಾಡದಲ್ಲಿ ವಿಧವೆಯರಿಗೆ ಸಹಾಯ ಮಾಡುವ ಯೋಜನೆ ಮತ್ತು ಅಪರೂಪದ ರೋಗವಿರುವ ಹದಿಹರೆಯದವರ ಎರಡು ತಿಂಗಳ ಆಸ್ಪತ್ರೆಯ ಚಿಕಿತ್ಸೆಗೆ ನಿಧಿ ಸಂಗ್ರಹಿಸುವುದು.

2. ಕ್ಯಾಟ ಪೂಲ್ಟ್(Catapooolt)

2. ಕ್ಯಾಟ ಪೂಲ್ಟ್(Catapooolt)

ಸ್ಥಾಪಕ: ಸತೀಶ್ ಕಟಾರಿಯಾ
ಕಮಿಷನ್ ಶುಲ್ಕ: ಪ್ರಾಜೆಕ್ಟ್ ಸಲ್ಲಿಕೆ ಶುಲ್ಕ: 32 ಡಾಲರ್ ಕ್ಕಿಂ ತ ಅಧಿಕ, ಒಟ್ಟು ನಿಧಿಯ ಶುಲ್ಕ ಶೇ. 10-15
ಜುಲೈ 2013ರಲ್ಲಿ ಸ್ಥಾಪನೆಯಾದ ಕ್ಯಾಟಪೂಲ್ಟ್ ಸಂಸ್ಥೆಯ ಯಶಸ್ಸಿನ ಕಥೆಗಳ ದೀರ್ಘ ಪಟ್ಟಿಯಿದೆ. ಸಂಸ್ಥೆಯು ಕೇವಲ ಸೃಜನಾತ್ಮಕ ಯೋಜನೆಗಳಲ್ಲದೆ ಕ್ರೀಡೆ, ರಾಜಕೀಯ, ಸಾಮಾಜಿಕ ಉದ್ಯಮಗಳು ಮತ್ತು ಆರಂಭಿಕ ಯೋಜನೆಗಳಲ್ಲೂ ಕೇಂದ್ರೀಕರಿಸುತ್ತದೆ. ಕ್ಯಾಟಪೂಲ್, 3 ಲಕ್ಷ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಎಲ್ಲಾ ಗ್ರಾಹಕರಿಗೆ ಮಾನ್ಯತೆ ನೀಡುವ ಮೂಲಕ ನಿಧಿ ಸಂಗ್ರಹಿದಾರರಿಗೆ ವಿತರಣೆಗೆ ಪ್ರವೇಶಾವಕಾಶ ನೀಡಿದ ಭಾರತದ ಏಕೈಕ ಕ್ರೌಡ್ ಕೋರ್ಸಿಂಗ್ ಪ್ಲಾಟ್ಫಾರ್ಮ್ ಎಂದು ಹೇಳಲಾಗಿದೆ.
2000ಕ್ಕೂ ಹೆಚ್ಚಿನ ಕೊಡುಗೆದಾರರಿಂದ ಸುಮಾರು 150,000 ಡಾಲರ್ ಮೊತ್ತದ ಹಣವನ್ನು ಸಂಗ್ರಹಿಸಲು 40 ಯೋಜನೆಗಳಿಗೆ ಈ ಕ್ರೌಡ್ ಕೋರ್ಸಿಂಗ್ ಪ್ಲಾಟ್ಫಾರ್ಮ್ ಸಹಾಯ ಮಾಡಿದೆ.

3. ಕ್ರೌಡ್ಎರ (Crowdera)

3. ಕ್ರೌಡ್ಎರ (Crowdera)

ಸಹ-ಸ್ಥಾಪಕರು: ಚೇತ್ ಜೈನ್, ಚೈತನ್ಯ ಆತ್ರೇಯ, ರಿಚ್ ಮಸ್ತೂರ
ಕ್ರೌಡಎರ ಸಂಸ್ಥೆಯು ಕ್ಯಾಲಿಫೊರ್ನಿಯಾದ ಪಾಲೋ ಆಲ್ಟೋದಲ್ಲಿ ಇಬ್ಬರು ಭಾರತೀಯರು ಮತ್ತು ಒಬ್ಬ ಅಮೇರಿಕನ್ ನಿಂದ ಸ್ಥಾಪಿಸಲ್ಪಟ್ಟಿತು. ಇದು ನಿಧಿಯನ್ನು ಸಂಗ್ರಹಿಸುವುದಕ್ಕಾಗಿ ಜಾಗತಿಕ ವೇದಿಕೆಯಾಗಿದ್ದು, ಕಳೆದ ವರ್ಷ ಏಪ್ರಿಲ್ ನಲ್ಲಿ ಭಾರತೀಯ ಶಾಖೆಯನ್ನು ಪ್ರಾರಂಭಿಸಿದೆ. ಇದು ಪ್ರತಿಷ್ಠಿತ ಲಾಭರಹಿತ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ 537,000 ಡಾಲರ್ ಗಳಷ್ಟು ಹಣವನ್ನು ಸಂಗ್ರಹಿಸಿ ಸಹಾಯ ಮಾಡಿದೆ. ಇವರು ಪ್ರಸ್ತುತ ಬೂಟ್ ಸ್ಟ್ರಾಪ್ ಹಂತದಲ್ಲಿದ್ದಾರೆ. ಇವರು ಯಾವುದೇ ಕಮಿಷನ್ ಅನ್ನು ವಿಧಿಸುವುದಿಲ್ಲ ಮತ್ತು "ಒಳ್ಳೆಯದನ್ನು ಮಾಡುವುದಕ್ಕೆ ದಂಡ ವಿಧಿಸಬಾರದು" ಎಂದು ನಂಬುತ್ತಾರೆ.

4. ಡ್ರೀಮ್ ವಾಲೆಟ್ಸ್ (DreamWallets)

4. ಡ್ರೀಮ್ ವಾಲೆಟ್ಸ್ (DreamWallets)

ಸಹ ಸ್ಥಾಪಕರು: ನಿಖಿಲ್ ಅಗರ್ವಾಲ್ ಮತ್ತು ಮನೀಶ್ ಹರೋಡಿಯ
ಜೈಪುರದಲ್ಲಿ ಪ್ರಧಾನ ಕಚೇರಿ ಮತ್ತು ಮುಂಬೈ, ಪುಣೆಯಲ್ಲಿ ಕಚೇರಿಗಳನ್ನು ಹೊಂದಿದೆ. ಈ ವೇದಿಕೆಯಲ್ಲಿ ಯಾವುದೇ ಯೋಜನೆಯನ್ನು ಹಿಂತಿರುಗಿಸುವ ಜನರಿಗೆ ವಿತ್ತೀಯವಲ್ಲದ ಮಾರ್ಗದಲ್ಲಿ ಬಹುಮಾನ ನೀಡಲಾಗುತ್ತದೆ.
ಚಲನಚಿತ್ರಗಳು, ರಂಗಕಲೆ, ಘಟನೆಗಳು, ಕಲೆ ಮತ್ತು ಕರಕುಶಲ, ಸಂಗೀತ, ಸಾಹಿತ್ಯ, ಛಾಯಾಗ್ರಹಣ, ಪ್ರಯಾಣ, ಟೆಕ್ ಉತ್ಪನ್ನ/ಸೇವೆ, ಸಾಮಾಜಿಕ ಕಾರಣಗಳು ಇತ್ಯಾದಿಗಳನ್ನು ಒಳಗೊಂಡಿರುವ 16 ವಿಭಾಗಗಳಲ್ಲಿ ನಿಧಿಸಂಗ್ರಹಕರು ನಿಧಿಯನ್ನು ಸಂಗ್ರಹಿಸಲು ಸಹಾಯ ಮಾಡುತ್ತಾರೆ. ಇದು 100ಕ್ಕೂ ಹೆಚ್ಚಿನ ಪ್ರಚಾರಗಳನ್ನು ನಡೆಸುತ್ತಿದೆ ಮತ್ತು 200ಕ್ಕೂ ಹೆಚ್ಚು ನಗರಗಳಿಂದ ಕೊಡುಗೆದಾರರು ಒಳಗೊಂಡಿದ್ದಾರೆ.

5. ಫೇರ್ಸೆಂಟ್ (Faircent)

5. ಫೇರ್ಸೆಂಟ್ (Faircent)

ಸಹ ಸ್ಥಾಪಕರು: ರಜತ್ ಗಾಂಧಿ, ವಿನಯ್ ಮ್ಯಾಥ್ಯುಸ್, ನಿತಿನ್ ಗುಪ್ತ
ಕಮಿಷನ್ ಶುಲ್ಕ: ಒಂದು ಬಾರಿಯ ಲಿಸ್ಟಿಂಗ್ ಶುಲ್ಕ ಸುಮಾರು USD 23 + ಸಾಲದ ಮತ್ತು ಬಡ್ಡಿದರದ ಗಾತ್ರವನ್ನು ಅವಲಂಬಿಸಿರುವ ಆಡಳಿತ ಶುಲ್ಕ. ಇದು ಬಡ್ಡಿಯಿಂದ ಯಾವುದೇ ಲಾಭವನ್ನು ಗಳಿಸುವುದಿಲ್ಲ.
ಗುರ್ ಗಾಂವ್ ನಲ್ಲಿರುವ ಫೇರ್ಸೆಂಟ್ ಒಂದು ವಾಸ್ತವ ಮಾರುಕಟ್ಟೆ ಮತ್ತು ಪೀರ್-ಟು-ಪೀರ್ ಸಾಲ ವೇದಿಕೆಯಾಗಿದ್ದು, ಅಲ್ಲಿ ಸಾಲಗಾರರು ಮತ್ತು ಸಾಲದಾತರು ನೇರವಾಗಿ ಬ್ಯಾಂಕುಗಳ ಪಾಲ್ಗೊಳ್ಳುವಿಕೆ ಇಲ್ಲದೆಯೇ ಸಾಲಗಳ ನಿಯಮಗಳನ್ನು ಸಂವಹಿಸುತ್ತಾ ಮಾತುಕತೆ ನಡೆಸಬಹುದು. ಸಂಸ್ಥೆಯು ಸಾಲಗಳ ಮೇಲಿನ ಉನ್ನತ ಅಂಚುಗಳನ್ನು ತೆಗೆದು ಹಾಕಿ ಕಡಿಮೆ ಸಾಂಸ್ಥಿಕ ಶುಲ್ಕಗಳನ್ನು ವಧಿಸುವಲ್ಲಿ ಯಶಸ್ವಿಯಾಗಿದೆ.

6. ಫ್ಯುಯೆಲ್ಎಡ್ರೀಮ್

6. ಫ್ಯುಯೆಲ್ಎಡ್ರೀಮ್

ಸ್ಥಾಪಕ: ರಂಗನಾಥ್ ತೋಟ
ಕಮಿಷನ್ ಶುಲ್ಕ: ಯಾವುದೇ ಕಾರ್ಯಾಚರಣೆಯಲ್ಲಿ ಸಂಗ್ರಹಿಸಿದ ಒಟ್ಟು ಮೊತ್ತದ 9% (2% ಗೇಟ್ ವೇ + 7% ಕರಾರಿನ ಶುಲ್ಕಗಳು) ಶುಲ್ಕ ವಿಧಿಸುತ್ತಾರೆ. 9% ಮೇಲೆ ಹೆಚ್ಚುವರಿ 14.5% ಸೇವಾ ತೆರಿಗೆ ವಿಧಿಸುತ್ತಾರೆ. ಒಟ್ಟಾರೆ ಶುಲ್ಕ 10.3%ರಷ್ಟಾಗುತ್ತದೆ .
ಏಪ್ರಿಲ್ 2016ರಲ್ಲಿ 14 ಯೋಜನೆಗಳನ್ನು ಬೆಂಗಳೂರಿನಲ್ಲಿ ಫ್ಯುಯೆಲ್ಎಡ್ರೀಮ್ ನಿಂದ ಪ್ರಾರಂಭಿಸಲ್ಪಟ್ಟಿತು. ಇದು ಸಾಮಾಜಿಕ ಕಾರಣಗಳು, ಸೃಜನಾತ್ಮಕ ಕಲೆ ಮತ್ತು ದತ್ತಿ ಸಂಸ್ಥೆಗಳು ಸೇರಿದಂತೆ ಹಲವಾರು ಕಾರ್ಯಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ ಪ್ರತಿಫಲಿತ ಆಧಾರಿತ ಜನಸಂದಣಿಯನ್ನು ಹೊಂದಿದೆ. ಇವರ ವೇದಿಕೆಯಲ್ಲಿ, ನಿಧಿಸಂಗ್ರಹಕರು ಎರಡು ಆಯ್ಕೆಗಳನ್ನು ಪಡೆಯುತ್ತಾರೆ: AON (ಆಲ್ ಆರ್ ನಥಿಂಗ್ ಅಂದರೆ ಎಲ್ಲ ಅಥವಾ ಏನೂ ಇಲ್ಲ) ಅಥವಾ KWYG (ಕೀಪ್ ವಾಟ್ ಯು ಗೆಟ್ ಅಂದರೆ ನೀವು ಪಡೆಯುವದನ್ನು ಉಳಿಸಿಕೊಳ್ಳಿ) ಮತ್ತು ಈ ವೇದಿಕೆಯಲ್ಲಿ ಯಾವುದೇ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು. ಯಾವುದೇ AON ಕಾರ್ಯಾಚರಣೆಗಳು ಅದರ ಗುರಿಗಳನ್ನು ಸಾಧಿಸುವಲ್ಲಿ ವಿಫಲವಾದಲ್ಲಿ, ಸಂಗ್ರಹಿಸಿದ ಎಲ್ಲಾ ಹಣವನ್ನು ನಿಧಿಸಂಗ್ರಹಗಳಿಗೆ ಹಿಂತಿರುಗಿಸಲಾಗುತ್ತದೆ.

7. ಫಂಡ್ ಡ್ರೀಮ್ಸ್ಇಂಡಿಯಾ (FundDreamsIndia)

7. ಫಂಡ್ ಡ್ರೀಮ್ಸ್ಇಂಡಿಯಾ (FundDreamsIndia)

ಕಮಿಷನ್ ಶುಲ್ಕ: ಸಂಗ್ರಹಿಸಿದ ಮೊತ್ತದ 5% ಮತ್ತು ಹೆಚ್ಚುವರಿ 3.95% ರಷ್ಟು ಪ್ರಕ್ರಿಯೆ ಶುಲ್ಕವಾಗಿರುತ್ತದೆ.
ಫಂಡ್ ಡ್ರೀಮ್ಸ್ಇಂಡಿಯಾವು ಬ್ಲೂಬಿಜ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಉಪಕ್ರಮವಾಗಿದೆ. ವೈಯಕ್ತಿಕ ಕಾರಣಗಳು, ಜೀವ ಘಟನೆಗಳು ಮತ್ತು ಸಾಮಾಜಿಕ ಕಾರಣಗಳಿಗಾಗಿ ಹಣವನ್ನು ಸಂಗ್ರಹಿಸಲು ಜನರಿಗೆ ನೆರವಾಗುತ್ತದೆ.

8. ಇಗ್ನೈಟ್ ಇಂಟೆಂಟ್ (Ignite Intent)

8. ಇಗ್ನೈಟ್ ಇಂಟೆಂಟ್ (Ignite Intent)

ಸಹ ಸ್ಥಾಪಕ: ರಿನಿಕೇಶ್ ಶಾ
ಮುಂಬೈ ಮೂಲದ, ಇಗ್ನೈಟ್ ಇಂಟೆಂಟ್ ಎಂಬುದು ಉದ್ಯಮಿಗಳು, ಸ್ಟಾರ್ಟ್ಅಪ್ ಗಳು ಮತ್ತು ಕಾಲೇಜು ಯೋಜನೆಗಳಿಗೆ ಕ್ರೌಡ್ ಫಂಡಿಂಗ್ ಒದಗಿಸುತ್ತದೆ. ಇಗ್ನೈಟ್ ಇಂಟೆಂಟ್ ಪ್ರೋತ್ಸಾಹಕ ಧನ ಆಧಾರಿತ ಕ್ರೌಡ್ ಫಂಡಿಂಗ್ ಮಾದರಿಯನ್ನು ಅನುಸರಿಸುತ್ತದೆ. ಇದರಲ್ಲಿ ಅನೇಕ ವ್ಯಕ್ತಿಗಳು ವ್ಯವಹಾರಗಳಾಗಿ ಮೈಕ್ರೋ-ಹೂಡಿಕೆಗಳನ್ನು ಮಾಡುತ್ತಾರೆ. ಹಣಹೂಡಿಕೆದಾರರಿಗೆ ಅವರು ಬಯಸುವ ಮಟ್ಟಿಗೆ ವಿವರಗಳನ್ನು ಒದಗಿಸುವ ಸ್ವಾತಂತ್ರ್ಯವಿದೆ ಎಂದು ಈ ವೇದಿಕೆ ಹೇಳುತ್ತದೆ.

9. ಇಂಪ್ಯಾಕ್ಟ್ ಗುರು(Impact Guru)

9. ಇಂಪ್ಯಾಕ್ಟ್ ಗುರು(Impact Guru)

ಸಹ ಸ್ಥಾಪಕರು: ಖುಷಬು ಜೈನ್ ಮತ್ತು ಪಿಯೂಷ್ ಜೈನ್
ಕಮಿಷನ್ ಶುಲ್ಕ: ಬಳಕೆದಾರರು ಡೀಫಾಲ್ಟ್ ಅನ್ನು ಆರಿಸಿದರೆ ಶೇ. 5
2014 ರಲ್ಲಿ ಮುಂಬೈ ಮೂಲದ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಇಂಪ್ಯಾಕ್ಟ್ ಗುರು ಒಂದು ಲಾಭೋದ್ದೇಶವಿಲ್ಲದ ಸಾಮಾಜಿಕ ಯೋಜನೆಗಳಿಗೆ ನಿಧಿ ಸಹಾಯ ಮಾಡುವ ಒಂದು ಕ್ರೌಡ್ ಫಂಡಿಂಗ್ ವೇದಿಕೆ. ಇಲ್ಲಿಯವರೆಗೆ ಇದು ಆರಂಭಿಕ ಉದ್ಯಮಗಳು, ಸಾಮಾಜಿಕ ಉದ್ಯಮಗಳು ಮತ್ತು ಲಾಭೋದ್ದೇಶವಿಲ್ಲದ ಸಂಸ್ಥೆಗಳಿಗೆ ದೇಣಿಗೆ, ಕ್ರೌಡ್ ಫಂಡಿಂಗ್ ಮತ್ತು ಬಂಡವಾಳ ಹೂಡಿಕೆಗೆ ಸಹಾಯ ಮಾಡಿದೆ. 100ಕ್ಕೂ ಹೆಚ್ಚಿನ ಯೋಜನೆಗಳಿಗೆ ಜಾಗತಿಕವಾಗಿ ಹಣ ಪಡೆಯಲು ಸಹಾಯ ಮಾಡಿದೆ.
2016ರಲ್ಲಿ ಸಿಂಗಪುರ್ ಮೂಲದ ವೆಂಚರ್ ಕ್ಯಾಪಿಟಲ್ ಫಂಡ್ ಆರ್ ಬಿ ಇನ್ವೆಸ್ಟ್ಮೆಂಟ್ಸ್ ಮತ್ತು ಖಾಸಗಿ ಹೂಡಿಕೆ ವೇದಿಕೆ ಫಂಡ್ನೆಲ್(Fundnel) ಸಂಸ್ಥೆಗಳಿಂದ ದೊಡ್ಡ ಮೊತ್ತವಾದ 5 ಲಕ್ಷ ಯೂಸ್ ಡಾಲರ್ಸ್ ಸಂಗ್ರಹಿಸಿದೆ.

10. ಕೆಟ್ಟೊ (Ketto)

10. ಕೆಟ್ಟೊ (Ketto)

ಸಹ-ಸಂಸ್ಥಾಪಕರು: ಕುನಾಲ್ ಕಪೂರ್, ವರುಣ್ ಶೆತ್ ಮತ್ತು ಜಹೀರ್ ಅಡೆನ್ವಾಲಾ
ಕಮಿಷನ್ ಶುಲ್ಕ: ಗೇಟ್ ವೇ ಶುಲ್ಕದೊಂದಿಗೆ ಸಂಗ್ರಹಿಸಿದ ನಿಧಿಯ ಮೇಲೆ ಶೇ.5-8
ಕೆಟ್ಟೊ 2012ರಲ್ಲಿ ಸ್ಥಾಪನೆಯಾಗಿದ್ದು, ಮುಖ್ಯವಾಗಿ ಮೂರು ವರ್ಗಗಳಲ್ಲಿ ಹಣವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ:
ವೈಯಕ್ತಿಕ ಅಭಿವೃದ್ಧಿ (ಆರೋಗ್ಯ / ಶಿಕ್ಷಣ / ಪ್ರಯಾಣ)
ಸೃಜನಶೀಲ ಕಲೆಗಳು (ಚಲನಚಿತ್ರಗಳು/ಸಂಗೀತ/ರಂಗಕಲೆ/ಫ್ಯಾಷನ್/ತಂತ್ರಜ್ಞಾ)
ಸಮುದಾಯ/ಸಾಮಾಜಿಕ ಯೋಜನೆಗಳು (ಎನ್ಜಿಒಗಳು / ಲಾಭರಹಿತ/ಚಾರಿಟಿಗಳು)

11. ಮಿಲಾಪ್

11. ಮಿಲಾಪ್

ಸಹ-ಸಂಸ್ಥಾಪಕರು: ಮಯುಕ್ ಚೌಧರಿ ಮತ್ತು ಅನೋಜ್ ವಿಶ್ವನಾಥನ್
ಕಮಿಷನ್ ಶುಲ್ಕ: 5-8%
ಬೆಂಗಳೂರು ಮೂಲದ ಮಿಲಾಪ್, ದೇಶದ ಗ್ರಾಮೀಣ ಜನರಿಗೆ ಸೂಕ್ಷ್ಮ ವೆಚ್ಚದ ಸಾಲವನ್ನು ಒದಗಿಸುತ್ತದೆ ಮತ್ತು ಶಿಕ್ಷಣ, ಶಕ್ತಿ ಮತ್ತು ನೀರು ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಹಲವಾರು ಯೋಜನೆಗಳೊಂದಿಗೆ ಕಡಿಮೆ ಆದಾಯದ ಜನರಿಗೆ ಸಹಾಯ ಮಾಡುತ್ತದೆ. ಇದು 2011 ರಲ್ಲಿ ಸ್ಥಾಪಿಸಲ್ಪಟ್ಟಿತು ಮತ್ತು ತುರ್ತು ಸಂದರ್ಭಗಳಲ್ಲಿ, ನೆರೆಹೊರೆಯ ಯೋಜನೆಗಳು, ವೈದ್ಯಕೀಯ ಪರಿಸ್ಥಿತಿಗಳು, ನೈಸರ್ಗಿಕ ವಿಕೋಪಗಳು ಮತ್ತು ಸೂಕ್ಷ್ಮ ವ್ಯವಹಾರ ಯೋಜನೆಗಳಿಗೆ ದೇಣಿಗೆಗಳ ಮತ್ತು ಸೂಕ್ಷ್ಮ ಸಾಲ ನೀಡುವಿಕೆಯೊಂದಿಗೆ 2014ರಲ್ಲಿ ಯೋಜನೆಗಳನ್ನು ವಿಸ್ತರಿಸಿತು.
ಈ ವೇದಿಕೆಯು ಪ್ರಪಂಚದಾದ್ಯಂತದ ದಾನಿಗಳನ್ನು ಹೊಂದಿದೆ, ಇದು ಯೂಸ್ ಡಾಲರ್ಸ್ $12.7 ಮಿಲಿಯನ್ ಗಿಂತ ಹೆಚ್ಚು ಹಣವನ್ನು ಸಂಗ್ರಹಿಸಿದೆ ಮತ್ತು 50,000ಕ್ಕೂ ಹೆಚ್ಚು ಯೋಜನೆಗಳಿಗೆ ಹಣವನ್ನು ನೀಡಿದೆ.

12. ರಂಗ್ ದೆ

12. ರಂಗ್ ದೆ

ಸಹ-ಸಂಸ್ಥಾಪಕರು: ಸ್ಮಿತಾ ರಾಮ್ ಮತ್ತು ರಾಮ್ ಎನ್. ಕೆ
ಕಮಿಷನ್ ಶುಲ್ಕ: ಬಡ್ಡಿ ದರಗಳು - 4.5% - ವರ್ಷಕ್ಕೆ 10%. ಸಾಲಗಾರರಿಂದ ಮರುಪಾವತಿಸಿದ ಎಲ್ಲಾ ಸಾಲಗಳ ಮೇಲೆ ರಂಗ್ ದೆ 2% ನಷ್ಟು ಕಡಿತವನ್ನು ಪಡೆಯುತ್ತದೆ.
ಬೆಂಗಳೂರು ಮೂಲದ, ರಂಗ್ ದೆ ಪೀರ್-ಟು-ಪೀರ್ ಸಾಲ ವೇದಿಕೆಯಾಗಿದ್ದು, ದೇಶಾದ್ಯಂತ ಸೂಕ್ಷ್ಮ ಅಥವಾ ಕಡಿಮೆ ದರದ ಸಾಲಗಳೊಂದಿಗೆ ಗ್ರಾಮೀಣ ಉದ್ಯಮಿಗಳಿಗೆ ಸಹಾಯ ಮಾಡುತ್ತದೆ. ಇದು 2008ರಲ್ಲಿ ಸ್ಥಾಪಿತವಾಯಿತು ಮತ್ತು ಇದರಲ್ಲಿ ಗಣನೀಯ ಪ್ರಮಾಣದಲ್ಲಿ ಸಾಲಗಾರರು ಮಹಿಳೆಯರಾಗಿದ್ದಾರೆ. ಕ್ರೌಡ್ ಫಂಡಿಂಗ್ ಅನ್ನು ಒದಗಿಸುವ ಈ ವೇದಿಕೆ 50,008 ಸಾಲಗಳನ್ನು ನೀಡಿದೆ ಮತ್ತು 9699 ಸಾಮಾಜಿಕ ಹೂಡಿಕೆದಾರರನ್ನು ಆಕರ್ಷಿಸಿದೆ.

13. ಸ್ಟಾರ್ಟ್ 51 (Start 51)

13. ಸ್ಟಾರ್ಟ್ 51 (Start 51)

ಸಹಭಾಗಿಗಳು: ಅತೀತ್ ಬಜಾಜ್
ಕಮಿಷನ್ ಶುಲ್ಕ: 5%
ಅಹಮದಾಬಾದಿನ ಸ್ಟಾರ್ಟ್ 51.ಕಾಮ್, ಕ್ರೌಡ್ ಫಂಡಿಂಗ್ ನ ಕನಸುಗಳ ಒಂದು ಏರುನೆಲೆಯ ಕಾರ್ಯನಿರ್ವಹಿಸುತ್ತದೆ. ಕೊಡುಗೆದಾರರಿಂದ ಚಳುವಳಿಗಾರರಿಗೆ ನೇರ ಹಣಕಾಸಿನ ನೆರವು ನೀಡುವ ಗುರಿ ಹೊಂದಿದೆ. ಇದು ಆಲ್ ಆರ್ ನಥಿಂಗ್ ಅಂದರೆ ಎಲ್ಲಾ -ಅಥವಾ-ಏನೂ ಇಲ್ಲ ಎಂಬ ಹಣದ ಪಾಲಿಸಿಯನ್ನು ಅನುಸರಿಸುತ್ತದೆ. ಒಟ್ಟಾರೆ ಹಣವನ್ನು ನಿರ್ವಹಿಸಲು ಮುಂದಾದರೆ, ನೀವು ಅದನ್ನು ಇರಿಸಿಕೊಳ್ಳಬಹುದು. ಇಲ್ಲದಿದ್ದರೆ ಹಣವನ್ನೂ ಪಡೆಯುವಂತಿಲ್ಲ. ಇದು ಚಲನಚಿತ್ರ ತಯಾರಿಕೆ, ಸಂಗೀತ, ವಿನ್ಯಾಸ ಮತ್ತು ಇನ್ನಿತರರಿಂದ ಪ್ರಾರಂಭವಾಗುವ ಎಲ್ಲಾ ಜನರನ್ನು ಬೆಂಬಲಿಸುತ್ತದೆ.
ಈ ಕ್ರೌಡ್ ಫಂಡಿಂಗ್ ವೇದಿಕೆ ಮುಖ್ಯವಾಗಿ ವಿದ್ಯಾರ್ಥಿಗಳು ಕಡೆಗೆ ಮೀಸಲಾಗಿದೆ ಮತ್ತು ಅವರನ್ನು ಉದ್ಯಮಿಗಳನ್ನಾಗಿ ಮಾಡಲು ಸಹಾಯ ಮಾಡುತ್ತದೆ. ವೇದಿಕೆಯು ವೀಡಿಯೊಗಳನ್ನು ರಚಿಸಲು ಮತ್ತು ಅದರ ಪ್ರಚಾರದುದ್ದಕ್ಕೂ ಸಹಾಯ ಮಾಡುತ್ತದೆ.

14. ದಿ ಹಾಟ್ ಸ್ಟಾರ್ಟ್ (TheHotStart)

14. ದಿ ಹಾಟ್ ಸ್ಟಾರ್ಟ್ (TheHotStart)

ಕಮಿಷನ್ ಶುಲ್ಕ: ವೇದಿಕೆಯ ಒಟ್ಟು ಶುಲ್ಕ- 16 .75%
ಜನವರಿ 2014 ರಲ್ಲಿ ಪ್ರಾರಂಭವಾದ ದಿ ಹಾಟ್ ಸ್ಟಾರ್ಟ್ ಅನ್ನು ಬ್ಲೂಬೆರಿ ಬೇ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತದೆ. ಸಮುದಾಯದ ಸದಸ್ಯರು ಮತ್ತು ಯೋಜನಾ ಸೃಷ್ಟಿಕರ್ತರು ಇದರ ಬೆಂಬಲಿಗರಾಗಿರುತ್ತಾರೆ. ಈ ಬೆಂಬಲಕ್ಕೆ ವಿನಿಮಯವಾಗಿ ಅನನ್ಯ ಪ್ರತಿಫಲವನ್ನು ನೀಡುತ್ತಾರೆ.
ಅವರಲ್ಲಿ 2 ಮಾದರಿಗಳಿವೆ: 'ಫ್ಲೆಕ್ಸಿಬಲ್ ಫಂಡಿಂಗ್' ಮಾದರಿ ಮತ್ತು 'ಆಲ್ ಅಥವಾ ನಥಿಂಗ್' ಮಾದರಿ. ಫ್ಲೆಕ್ಸಿಬಲ್ ಫಂಡಿಂಗ್ ಮಾದರಿಯಲ್ಲಿ, ನಿಧಿ ಸಂಗ್ರಹಕರು ಸಂಗ್ರಹಿಸಿದ ಮೊತ್ತವನ್ನು ಉಳಿಸಿಕೊಳ್ಳಬಹುದು. ಎರಡನೆಯ ಮಾದರಿಯಲ್ಲಿ, ನಿಧಿ ಸಂಗ್ರಹಕರು ಕೊಟ್ಟ ಗುರಿಯನ್ನು ತಲುಪಿದರೆ ಮಾತ್ರ ನಿಧಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಬಹುದು.

15 .ವಿಶ್ ಬೆರಿ (WishBerry)

15 .ವಿಶ್ ಬೆರಿ (WishBerry)

ಸಹ-ಸಂಸ್ಥಾಪಕರು: ಪ್ರಿಯಾಂಕಾ ಅಗರ್ವಾಲ್, ಅಂಶುಲೀಕ ದುಬೆ
2010ರಲ್ಲಿ ಸ್ಥಾಪಿತವಾದ ಮತ್ತು ಮುಂಬೈ ಮೂಲದ ವಿಶ್ಬೆರಿ ಸಂಸ್ಥೆಯು ಡೊನೇಷನ್ಸ್-ಫಾರ್-ರಿವಾರ್ಡ್ಸ್
ಮಾದರಿಯ ಕ್ರೌಡ್ ಫಂಡಿಂಗ್ ವೇದಿಕೆ ಮತ್ತು ಸೃಜನಾತ್ಮಕ ಯೋಜನೆಗಳಾದ ನಿಂತಾಡುವ ಹಾಸ್ಯ, ಚಲನಚಿತ್ರ ನಿರ್ಮಾಣ, ವಿನ್ಯಾಸ, ಛಾಯಾಗ್ರಹಣ, ಸಂಗೀತ, ನೃತ್ಯ, ಕಲೆ ಇತ್ಯಾದಿಗಳಿಗೆ ಮಾತ್ರ ನಿಧಿಯನ್ನು ನೀಡುತ್ತದೆ.
ನಿಧಿ ಸಂಗ್ರಾಹಕರಿಗೆ ಪರಿಣಾಮಕಾರಿ ಪಿಚ್ ಮಾಡುವುದು ಹೇಗೆ, ವೀಡಿಯೊ ಅಭಿಯಾನವನ್ನು ಹೇಗೆ ರಚಿಸುವುದು ಎಂದು ಪ್ರಚಾರದುದ್ದಕ್ಕೂ ಹೇಳಿಕೊಡುವಲ್ಲಿ ಸಹಾಯ ಮಾಡುವುದರಿಂದ ಶೇ. 70% ರಷ್ಟು ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಹೊಂದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+