Englishहिन्दी മലയാളം தமிழ் తెలుగు

ಆದಾಯ ತೆರಿಗೆ ಇಲಾಖೆ: ರೂ. 3,500 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ

Written By: Siddu
Subscribe to GoodReturns Kannada

ಆದಾಯ ತೆರಿಗೆ ಇಲಾಖೆ ಬೇನಾಮಿ ಆಸ್ತಿಗಳ ವಹಿವಾಟು ನಿಷೇಧ ಕಾಯಿದೆಯಡಿಯಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.

ಆದಾಯ ತೆರಿಗೆ ಇಲಾಖೆ: ರೂ. 3,500 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಜಪ್ತಿ

ತೆರಿಗೆ ಇಲಾಖೆ 2016ರ ನವೆಂಬರ್ ನಿಂದ ಇಲ್ಲಿಯತನಕ ರೂ. 3,500 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಂಡಿದೆ. ಭೂಮಿ, ಫ್ಲಾಟ್, ಅಂಗಡಿಗಳು, ಆಭರಣಗಳು, ವಾಹನಗಳು ಮತ್ತು ಬ್ಯಾಂಕ್ ಠೇವಣಿಗಳು ಸೇರಿದಂತೆ 900 ಕ್ಕಿಂತಲೂ ಹೆಚ್ಚು ಬೆನಾಮಿ (ಹೆಸರಿಲ್ಲದ) ಆಸ್ತಿಗಳನ್ನು ಜಪ್ತಿ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ರೂ. 2,900 ಕೋಟಿ ಸ್ಥಿರ ಆಸ್ತಿಗಳು ಒಳಗೊಂಡಂತೆ ಒಟ್ಟು ರೂ. 3,500 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದೆ.

ಬೇನಾಮಿ ಕಾಯಿದೆಯಡಿ ಸ್ಥಿರಾಸ್ತಿ ಅಥವಾ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಭಾರತದಲ್ಲಿ ತೆರಿಗೆ ಇಲಾಖೆಯು ತನ್ನ ನಿರ್ದೇಶನಾಲಯದಡಿ 24 ಬೇನಾಮಿ ನಿಷೇಧ ಘಟಕಗಳನ್ನು ಹೊಂದಿದೆ.

English summary

Income Tax Department attaches benami properties worth Rs 3,500 crore

The Income Tax Department said on Thursday that it had attached more than 900 benami (nameless) properties, including plots of land, flats, shops, jewellery, vehicles and bank deposits.
Story first published: Friday, January 12, 2018, 16:40 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns