ಅರುಣಾಚಲಪ್ರದೇಶದ ತವಾಂಗ್ ಜಿಲ್ಲೆಯ ಬೋಮ್ಜಾ ಗ್ರಾಮಸ್ಥರು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಭಾರತೀಯ ಸೇನೆ ಐದಾರು ವರ್ಷಗಳ ಹಿಂದೆ ಪ್ರಮುಖ ಘಟಕವನ್ನು ಪ್ರಾರಂಭಿಸಲು ಬೋಮ್ಜಾ ಗ್ರಾಮದ ಭೂಮಿ ಸ್ವಾಧೀನಪಡಿಸಿಕೊಂಡಿತ್ತು.
ಕೋಟ್ಯಾಧೀಪತಿಗಳಾಗುವ ಅದೃಷ್ಟ ಅಂದರೆ ಇದೆ ಇರಬಹುದು! ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಮಹಿಮೆ..!!
ಹೌದು, ಅರುಣಾಚಲ ಪ್ರದೇಶದ ಒಂದು ಹಳ್ಳಿ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಿದ್ದರೆ ಆ ಹಳ್ಳಿ ಯಾವುದು? ಅದು ಏಷಿಯಾದ ಅತ್ಯಂತ ಶ್ರೀಮಂತ ಗ್ರಾಮವಾಗಿರುವುದು ಹೇಗೆ? ಅಷ್ಟೊಂದು ದೊಡ್ಡ ಪ್ರಮಾಣದ ಹಣ ನೀಡಿರುವುದು ಯಾರು ಇತ್ಯಾದಿ ಪ್ರಶ್ನೆಗಳು ನಿಮ್ಮ ಕುತೂಹಲಕ್ಕೆ ಕಾರಣವಾಗಿರಬಹುದಲ್ಲವೆ..? ಮುಂದೆ ಓದಿ..
ತವಾಂಗ್ ಜಿಲ್ಲೆಯ ಬೋಮ್ಜಾ ಗ್ರಾಮ
ಅರುಣಾಚಲಪ್ರದೇಶದ ತವಾಂಗ್ ಜಿಲ್ಲೆಯ ಬೋಮ್ಜಾ ಗ್ರಾಮಸ್ಥರು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಭಾರತೀಯ ಸೇನೆ ಐದಾರು ವರ್ಷಗಳ ಹಿಂದೆ ಪ್ರಮುಖ ಘಟಕವನ್ನು ಪ್ರಾರಂಭಿಸಲು ಬೋಮ್ಜಾ ಗ್ರಾಮದ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಆಗ ಪರಿಹಾರ ನೀಡಿರಲಿಲ್ಲ. ಮೊನ್ನೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಪರಿಹಾರ ಧನ ವಿತರಿಸಿದ್ದಾರೆ. ಉದ್ಯೋಗಿಗಳಿಗೆ ಆಶ್ಚರ್ಯಕರ ಸೌಲಭ್ಯಗಳನ್ನು ನೀಡುವ 15 ಕಂಪನಿಗಳು
ರಕ್ಷಣಾ ಸಚಿವಾಲಯ 40.80 ಕೋಟಿ ಬಿಡುಗಡೆ
ಬೋಮ್ಜಾ ಗ್ರಾಮದ ಸುಮಾರು 200 ಎಕರೆ ಭೂಮಿಯನ್ನು ಭಾರತೀಯ ಸೇನೆಯ ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ರಕ್ಷಣಾ ಸಚಿವಾಲಯ ಸ್ವಾಧೀನಪಡಿಸಿಕೊಂಡು, ಇಲ್ಲಿನ 31 ಕುಟುಂಬಗಳಿಗೆ ರೂ. 40,80,38,400 ಮೊತ್ತವನ್ನು ವಿತರಣೆ ಮಾಡಿದೆ.
ಎಲ್ಲಾ ಕುಟುಂಬಗಳು ಕೋಟ್ಯಾಧಿಪತಿಗಳಿರುವ ಏಕೈಕ ಗ್ರಾಮ
ಏಷಿಯಾದಲ್ಲೇ ಹೆಚ್ಚು ಕೋಟ್ಯಾಧಿಪತಿಗಳಿರುವ ಶ್ರೀಮಂತ ಗ್ರಾಮ ಆಗಿದ್ದು, ಗ್ರಾಮದ ಒಟ್ಟು 31 ಕುಟುಂಬಗಳಲ್ಲಿ ಸಂತ್ರಸ್ತ 29 ಕುಟುಂಬಗಳಿಗೆ ತಲಾ ರೂ. 1.09 ಕೋಟಿ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಖಂಡು ವಿತರಿಸಿದ್ದಾರೆ. ಅವುಗಳಲ್ಲಿ ಒಂದು ಕುಟುಂಬ ರೂ. 6.73 ಕೋಟಿ ಪಡೆದಿದ್ದರೆ ಇನ್ನೊಂದು ಕುಟುಂಬ ರೂ. 2.45 ಕೋಟಿ ಪರಿಹಾರ ಧನ ಪಡೆದಿವೆ. ಒಟ್ಟಿನಲ್ಲಿ ಈ ಗ್ರಾಮದ ಏಷಿಯಾದಲ್ಲೇ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆ ಪಡೆದಿದ್ದು, ಎಲ್ಲಾ ಕುಟುಂಬಗಳು ಕೋಟ್ಯಾಧಿಪತಿಗಳಾಗಿರುವ ಏಕೈಕ ಗ್ರಾಮ.
ಕೀ ಲೋಕೆಷನ್ ಪ್ಲಾನ್ ಯುನಿಟ್ ಉದ್ದೇಶ
ತವಾಂಗ್ ನ ಬೋಮ್ಜಾ ಗ್ರಾಮವನ್ನು ಕೀ ಲೋಕೆಷನ್ ಪ್ಲ್ಯಾನ್ ಯುನಿಟ್ ಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತೀಯ ಸೇನೆಯು ಸ್ವಾಧೀನಪಡಿಸಿಕೊಂಡಿತು. ತವಾಂಗ್ ಸೇನಾ ಘಟಕ ಹಾಗು ಸೌಲಭ್ಯವನ್ನು ವಿಸ್ತರಿಸುವ ಉದ್ದೇಶದಿಂದ ಭೂಮಿಯನ್ನು ಭಾರತೀಯ ಸೇನೆ ಸ್ವಾಧೀನಪಡಿಸಿಕೊಂಡಿದೆ.
ಕೇಂದ್ರ ಸರ್ಕಾರಕ್ಕೆ ವಂದನೆಗಳು
ಮುಖ್ಯಮಂತ್ರಿ ಖಂಡು ಹಣ ಮಂಜೂರು ಮಾಡಿರುವುದಕ್ಕೆ ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸಿದರು. ಇದೇ ರೀತಿಯ ಇನ್ನು ಹಲವಾರು ಪರಿಹಾರ ಮೊತ್ತಗಳನ್ನು ವಿತರಿಸಲು ಭಾರತೀಯ ಸೇನೆ ಪ್ರಯತ್ನಿಸುತ್ತಿದೆ ಎಂದರು. ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಖಂಡು ಶ್ಲಾಘಿಸಿದ್ದಾರೆ.


Click it and Unblock the Notifications