ಜಿಯೋ ಫೈಬರ್ ಆಫರ್! ಇದು ನಿಜವಾದರೆ ನೆಟ್‌ವರ್ಕ್‌ ಕ್ಷೇತ್ರದಲ್ಲಿ ಆಗಲಿದೆ ಕ್ರಾಂತಿ!!

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆ ಜಿಯೋ ಅಗ್ಗದ ಯೋಜನೆಗಳ ಮೂಲಕ 2017ರಲ್ಲಿ ದೂರಸಂಪರ್ಕ ರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಅತಿಕಡಿಮೆ ವೆಚ್ಚದ ಫೈಬರ್ ಬ್ರಾಡ್ ಬ್ಯಾಂಡ್ ನೆಟ್ವರ್ಕ್ ಮೂಲಕ ಅಂತರ್ಜಾಲ ಕ್ಷೇತ್ರದಲ್ಲಿ ಕ್ರಾಂತಿಗೆ ಸಜ್ಜಾಗಿದೆ.

  ಜಿಯೋ ಫೈಬರ್ ಹೆಸರಿನ ಫೈಬರ್ ಬ್ರಾಡ್ ಬ್ಯಾಂಡ್ 2017ರ ಅಂತ್ಯಕ್ಕೆ ಬಿಡುಗಡೆಗೊಳಿಸುವ ಬಗ್ಗೆ ವದಂತಿಗಳು ಹರಡಿದ್ದವು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಮಾರ್ಚ ಅಂತ್ಯದೊಳಗಾಗಿ ಜಿಯೋಫೈಬರ್ ಬಿಡುಗಡೆಯಾಗುವ ಸಾಧ್ಯತೆ ಇದೆ.

  ಕಡಿಮೆ ಬೆಲೆ ಹೈ ಸ್ಪೀಡ್ ಸೇವೆ

  ಜಿಯೋ ಫೈಬರ್ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಹೈಸ್ಪೀಡ್ ಸೌಲಭ್ಯ ಸಿಗಲಿದೆ. ಇದರ ಡೇಟಾ ಸ್ಪೀಡ್ 1ಜಿಬಿಪಿಎಸ್ ಇರಲಿದೆ.

  10 ನಗರಗಳಲ್ಲಿ ಪರೀಕ್ಷಾರ್ಥ ಸೇವೆ

  ಜಿಯೋ ತನ್ನ ಜಿಯೋ ಫೈಬರ್ ಸೇವೆಯನ್ನು ದೇಶದ 10 ನಗರಗಳಿಗೆ ಪರೀಕ್ಷಾರ್ಥವಾಗಿ ನೀಡುತ್ತಿದೆ. ಮುಂಬೈ, ದೆಹಲಿ-ಎನ್ಸಿಆರ್, ಅಹಮದಾಬಾದ್, ಜಾಮ್ನಗರ್, ಸೂರತ್ ಮತ್ತು ವಡೋದರಾ ಸೇರಿದಂತೆ ಆರು ನಗರಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಟ್ವಿಟರ್ನಲ್ಲಿ ಜಿಯೋ ಕೇರ್ ದೃಢಪಡಿಸಿದೆ.

  ಜಿಯೋ ಫೈಬರ್ ಪ್ರಿವ್ಯೂ ಆಫರ್

  ಈ ಪರೀಕ್ಷಾರ್ಥ ಅವಧಿಯಲ್ಲಿ ಗ್ರಾಹಕರಿಗೆ ಜಿಯೋ ಫೈಬರ್ ಪ್ರಿವ್ಯೂ ಆಫರ್ ಹೆಸರಿನಲ್ಲಿ ತಿಂಗಳಿಗೆ 100 ಜಿಬಿಯಂತೆ ಮೂರು ತಿಂಗಳು ಉಚಿತ ಡೇಟಾ ಸಿಗಲಿದೆ. ಈ ಆಫರ್ ವಿಸ್ತರಣೆಯಾಗುವ ಸಾಧ್ಯತೆಯೂ ಇದೆ. ಇತ್ತೀಚಿಗೆ ರಿಲಯನ್ಸ್ ಜಿಯೋ ಮೊಬೈಲ್ ವಾಲೆಟ್ ಮೊಬಿಕ್ವಿಕ್ ಜೊತೆ ಜಿಯೋಫೋನ್ ಮಾರಾಟಕ್ಕಾಗಿ ಕೈಜೋಡಿಸಿದೆ.

  English summary

  Reliance Jio Fiber may finally launch in March; Here all Details

  Mukesh Ambani-owned Reliance Jio might finally introduce the low-cost fiber broadband network called JioFiber, by the end of March. The service was rumoured to launch end of 2017 but that did not happen. Now, a report by telecomtalk suggests that the company may officially roll out JioFiber next month.
  Story first published: Tuesday, February 13, 2018, 17:02 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more