ಬಿಎಸ್ಎನ್ಎಲ್ ಘರ್ ವಾಪಸಿ ಆಫರ್! ಪಡೆಯಿರಿ ಹೆಚ್ಚು ಡೇಟಾ ಸೌಲಭ್ಯ

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ರೂ. 399ರ ಹೊಸ ಯೋಜನೆಯನ್ನು ಪೊಸ್ಟ್ ಪೇಯ್ಡ್ ಗ್ರಾಹಕರಿಗಾಗಿ ಆರಂಭಿಸಿದೆ. ಈ ಯೋಜನೆಯಡಿ ಗ್ರಾಹಕರು ಹೆಚ್ಚು ಡೇಟಾ ಸೌಲಭ್ಯ ಪಡೆಯಲಿದ್ದು, ಘರ್ ವಾಪಸಿ ಈ ಯೋಜನೆಯ ಹೆಸರು!

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ರೂ. 399ರ ಹೊಸ ಯೋಜನೆಯನ್ನು ಪೊಸ್ಟ್ ಪೇಯ್ಡ್ ಗ್ರಾಹಕರಿಗಾಗಿ ಆರಂಭಿಸಿದೆ. ಈ ಯೋಜನೆಯಡಿ ಗ್ರಾಹಕರು ಹೆಚ್ಚು ಡೇಟಾ ಸೌಲಭ್ಯ ಪಡೆಯಲಿದ್ದು, ಘರ್ ವಾಪಸಿ ಈ ಯೋಜನೆಯ ಹೆಸರು!

ವಿಶೇಷವಾಗಿ ಬೇರೆ ಕಂಪನಿಗಳಿಗೆ ಹೋಲಿಸಿದರೆ ಡೇಟಾ ಪ್ರಯೋಜನ ಶೇ. 50ರಷ್ಟು ಉತ್ತಮವಾಗಿದೆ. ಸ್ವಂತಮನೆ ಕಟ್ಟುವುದು ಈಗ ಸುಲಭ! ಇಲ್ಲಿವೆ ವಿವಿಧ ಬಗೆಯ ಗೃಹಸಾಲ ಸೌಲಭ್ಯ

ರೂ. 399 ಘರ್ ವಾಪಸಿ

ರೂ. 399 ಘರ್ ವಾಪಸಿ

ಬಿಎಸ್ಎನ್ಎಲ್ ನ ಈ ಹೊಸ ರೂ. 399 ಪೋಸ್ಟ್ಪೇಯ್ಡ್ ಯೋಜನೆಯನ್ನು ಘರ್ ವಾಪ್ಸಿ ಎಂದು ಕರೆಯಲಾಗಿದ್ದು, ಮಾರ್ಚ್ 1, 2018 ರಿಂದ ಜಾರಿಗೆ ಬರಲಿದೆ. ಗ್ರಾಹಕರು ಈ ಯೋಜನೆಯಡಿ ಯಾವುದೇ ಮಿತಿಯಿಲ್ಲದೆ ಅನಿಯಮಿತ ಧ್ವನಿ ಕರೆ ಹಾಗೂ 30GB ಡೇಟಾ ಸಿಗಲಿದೆ. ಇದರಲ್ಲಿ ಎಸ್ಎಂಎಸ್ ಹಾಗೂ ರೋಮಿಂಗ್ ಸೌಲಭ್ಯ ಇಲ್ಲ.

ಹೆಚ್ಚು ಡೇಟಾ ಸೌಲಭ್ಯ

ಹೆಚ್ಚು ಡೇಟಾ ಸೌಲಭ್ಯ

ಬೇರೆ ಪ್ರಮುಖ ಟೆಲಿಕಾಂ ಸಂಸ್ಥೆಗಳಿಗೆ ಹೋಲಿಸಿದರೆ ಬಿಎಸ್ಎನ್ಎಲ್ ಈ ಯೋಜನೆಯಡಿ ಹೆಚ್ಚು ಡೇಟಾ ನೀಡುತ್ತಿದೆ. ಇದರ ಜತೆಯಲ್ಲಿ ಎಸ್ಎಂಎಸ್ ಹಾಗೂ ರೋಮಿಂಗ್ ಸೌಲಭ್ಯ ನೀಡಿದಲ್ಲಿ ಗ್ರಾಹರ ನೆಚ್ಚಿನ ಪ್ಲಾನ್ ಆಗುವುದರಲ್ಲಿ ಸಂಶಯವಿಲ್ಲ. ಬಿಎಸ್ಎನ್ಎಲ್ ಘರ್ ವಾಪಸಿ ಯೋಜನೆ ದೇಶದಾದ್ಯಂತ ಎಲ್ಲ ಗ್ರಾಹಕರಿಗೂ ಸಿಗಲಿದೆ.

ಏರ್ಟೆಲ್, ಐಡಿಯಾ, ವೋಡಾಫೋನ್ ಪ್ಲಾನ್

ಏರ್ಟೆಲ್, ಐಡಿಯಾ, ವೋಡಾಫೋನ್ ಪ್ಲಾನ್

ಬಿಎಸ್ಎನ್ಎಲ್ ನ ರೂ. 399 ಯೋಜನೆಯಂತೆ ಏರ್ಟೆಲ್, ಐಡಿಯಾ, ವೋಡಾಫೋನ್ ಕಂಪನಿಗಳ ಯೋಜನೆಗಳಿವೆ.
ಏರ್ಟೆಲ್ ತನ್ನ ರೂ. 399 ಯೋಜನೆಯಡಿ ಅನಿಯಮಿತ ಕರೆ, 100 ಎಸ್ಎಂಎಸ್ ಜೊತೆ 20GB ಡೇಟಾ ನೀಡುತ್ತಿದೆ.
ಐಡಿಯಾ ರೂ. 389 ಪ್ಲಾನ್ ನಲ್ಲಿ ಅನಿಯಮಿತ ರೋಮಿಂಗ್ ಕರೆ ಜೊತೆ 2GB ಡೇಟಾ ನೀಡುತ್ತಿದೆ.
ವೋಡಾಫೋನ್ ರೂ. 399 ಪ್ಲಾನ್ ನಲ್ಲಿ ಅನಿಯಮಿತ ಕರೆ, ರೋಮಿಂಗ್ ಕರೆ, 20GB ಡೇಟಾ ನೀಡುತ್ತಿದೆ. ಆದರೆ ಎಸ್ಎಂಎಸ್ ಸೌಲಭ್ಯ ಸಿಗುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+