ಫ್ರೈಮ್ ಮೆಂಬರ್ಶಿಪ್ ಮೂಲಕ ಹಲವು ಕೊಡುಗೆಗಳನ್ನು ಘೋಷಿಸಿದ್ದರು. ಬರುವ ಮಾರ್ಚ್ 31ರಿಂದ ಜಿಯೋ ಫ್ರೈಮ್ ಮೆಂಬರ್ಶಿಪ್ ರದ್ದಾಗಲಿದ್ದು, ಏಪ್ರಿಲ್ 1ರಿಂದ ಯಾವ ಕೊಡುಗೆಗಳನ್ನು ಘೋಷಿಸಲಿದ್ದಾರೆ.
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋ ಮೂಲಕ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಸಂಚಲನಕ್ಕೆ ಕಾರಣರಾಗಿದ್ದಾರೆ! ಕಳೆದ ಏಪ್ರಿಲ್ ನಲ್ಲಿ ಜಿಯೋ ಫ್ರೈಮ್ ಮೆಂಬರ್ಶಿಪ್ ಮೂಲಕ ಹಲವು ಕೊಡುಗೆಗಳನ್ನು ಘೋಷಿಸಿದ್ದರು. ಬರುವ ಮಾರ್ಚ್ 31ರಿಂದ ಜಿಯೋ ಫ್ರೈಮ್ ಮೆಂಬರ್ಶಿಪ್ ರದ್ದಾಗಲಿದ್ದು, ಏಪ್ರಿಲ್ 1ರಿಂದ ಯಾವ ಕೊಡುಗೆಗಳನ್ನು ಘೋಷಿಸಲಿದ್ದಾರೆ ನೋಡೋಣ..! ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!!
ಶೀಘ್ರದಲ್ಲಿ ಅಧಿಕೃತ ಪ್ರಕಟಣೆ
ಜಿಯೋ ಪ್ರೈಂ ಸದಸ್ಯತ್ವ
ಕಳೆದ ವರ್ಷದ ಏಪ್ರಿಲ್ ಪ್ರಾರಂಭದಲ್ಲಿ ಜಿಯೋ ಕೇವಲ ರೂ. 99ಕ್ಕೆ ಜಿಯೋ ಪ್ರೈಂ ಸದಸ್ಯತ್ವ ಸೌಲಭ್ಯ ಒದಗಿಸಿತ್ತು. ಒಂದು ವರ್ಷದ ಸದಸ್ಯತ್ವಕ್ಕೆ ಚಂದಾದಾರರು ರೂ. 99 ಜತೆ ರೂ. 309 ಅಥವಾ ಅದಕ್ಕಿಂತ ಹೆಚ್ಚು ರಿಚಾರ್ಜ್ ಮಾಡಬೇಕಾಗಿತ್ತು. ಜಿಯೋ ಆರಂಭದಲ್ಲಿ 3 ತಿಂಗಳು ಉಚಿತ ಸೇವೆ ನೀಡಿತ್ತು. ಅದಾದ ನಂತರ ಪ್ರೈಂ ಸದಸ್ಯತ್ವ ಯೋಜನೆಯನ್ನು ಪ್ರಾರಂಭಿಸಿತ್ತು.
ವಿಶೇಷ ಕೊಡುಗೆ
ಮುಕೇಶ್ ಅಂಬಾನಿ ಜಿಯೋ ಪ್ರೈಂ ಸದಸ್ಯತ್ವ ಪಡೆದ ಗ್ರಾಹಕರಿಗೆ ಸಾಮಾನ್ಯ ಗ್ರಾಹಕನಿಗಿಂತ ವಿಶೇಷ ಸೌಲಭ್ಯಗಳನ್ನು ನೀಡಿದ್ದರು. ಪ್ರೈಂ ಸದಸ್ಯತ್ವದಲ್ಲಿ ರೂ. 399 ರೀಚಾರ್ಜ್ ಮಾಡಿರುವ ಗ್ರಾಹಕರು ಮಾರ್ಚ್ 31ರವರೆಗೆ 4G ಡೇಟಾ, ಎಸ್ಎಂಎಸ್, ರೋಮಿಂಗ್, ಧ್ವನಿ ಕರೆಗಳು ಸೇರಿದಂತೆ ಅನೇಕ ಸೌಲಭ್ಯ ಪಡೆದಿದ್ದರು.
ಜಿಯೋ ಎಫೆಕ್ಟ್
2016 ರ ಕೊನೆಯಲ್ಲಿ ಭಾರತದ ದೂರಸಂಪರ್ಕ ಕ್ಷೇತ್ರವನ್ನು ಪ್ರವೇಶಿಸಿದ ಜಿಯೋ ಭಾರೀ ಸಂಚಲನವನ್ನು ಸೃಷ್ಟಿಸಿ, ದರ ಸಮರಕ್ಕೆ ಕಾರಣವಾಗಿದೆ. ಜಿಯೋ ನೀಡಿದ ಉಚಿತ ಹಾಗು ಕಡಿಮೆ ದರದ ಸೇವೆಗಳ ಪರಿಣಾಮದಿಂದ ಇತರೆ ಟೆಲಿಕಾಂ ಕಂಪನಿಗಳು ತಮ್ಮ ಸೇವೆಗಳ ಮೇಲಿನ ದರಗಳನ್ನು ಕಡಿಮೆ ಮಾಡಿ ತಮ್ಮ ಗ್ರಾಹಕರನ್ನು ಉಳಿಸಲು ಪ್ರಯತ್ನಿಸುತ್ತಿವೆ. ಜಿಯೊನ ಉಚಿತ ಕೊಡುಗೆಗಳು ಟೆಲಿಕಾಂ ಕ್ಷೇತ್ರದ ಆರ್ಥಿಕತೆ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.


Click it and Unblock the Notifications