2016 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಆಪ್ ಅನ್ನು ಬಿಡುಗಡೆಗೊಳಿಸಿದರು. ಯು.ಪಿ.ಐ. ನ ಮೇಲೆ ಆಧಾರಿತವಾಗಿರುವ ಈ ಆಪ್ ಅನ್ನು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ಼್ ಇಂಡಿಯಾ (ಎನ್.ಪಿ.ಸಿ.ಐ) ದವರು ಅಭಿವೃದ್ಧಿಗೊಳಿಸಿದರು.

ವಿಶಿಷ್ಟ ವ್ಯವಹಾರಗಳಿಗೆ ನೀವು 25 ರೂಪಾಯಿಗಳಷ್ಟು ಕ್ಯಾಶ್ ಬ್ಯಾಕ್ ಅನ್ನೂ ಕೂಡಾ ಪಡೆದುಕೊಳ್ಳಬಹುದು. ಈ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ, ಕನಿಷ್ಟ 100 ರೂಪಾಯಿಗಳ ವ್ಯವಹಾರವನ್ನಾದರೂ ಕೈಗೊಳ್ಳಬೇಕಾಗುತ್ತದೆ. ಜೊತೆಗೆ, ವಿಶಿಷ್ಟ ವ್ಯವಹಾರಗಳು ಗಳಿಸಿಕೊಡಬಹುದಾದ ಗರಿಷ್ಟ ಕ್ಯಾಶ್ ಬ್ಯಾಕ್ ನ ಮೊತ್ತವು ತಿಂಗಳೊಂದಕ್ಕೆ 500 ರೂಪಾಯಿಗಳಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ವ್ಯವಹಾರಗಳನ್ನು ಕೈಗೊಂಡಲ್ಲಿ, ಬಿ.ಹೆಚ್.ಐ.ಎಂ. ಆಪ್ ನ ಬಳಕೆದಾರರು ಹೆಚ್ಚಿನ ಕ್ಯಾಶ್ ಬ್ಯಾಕ್ ಪಾಯಿಂಟ್ ಗಳನ್ನು ಗಳಿಸಿಕೊಳ್ಳುವ ಸದವಕಾಶವನ್ನು ತಮ್ಮದಾಗಿಸಿಕೊಳ್ಳುವರು. ಉದಾಹರಣೆಗೆ, ನೀವು 25 ರಿಂದ 50 ವ್ಯವಹಾರಗಳನ್ನು ಕೈಗೊಂಡಲ್ಲಿ, ನೀವು 100 ರೂಪಾಯಿಗಳವರೆಗಿನ ಇನ್ಸೆಂಟೀವ್ ಅನ್ನು ಪಡೆದುಕೊಳ್ಳುವಿರಿ. ಅದೇ 50 ರಿಂದ 100 ವ್ಯವಹಾರಗಳು ನಿಮಗೆ 200 ರೂಪಾಯಿಗಳವರೆಗಿನ ಕ್ಯಾಶ್ ಬ್ಯಾಕ್ ಅನ್ನು ಗಳಿಸಿಕೊಡುತ್ತವೆ. ಬಿ.ಹೆಚ್.ಐ.ಎಂ. ಆಪ್ ಅನ್ನು ಬಳಸುವ ವ್ಯಾಪಾರಸ್ಥರು, 50 ರೂಪಾಯಿಗಳಿಗಿಂತಲೂ ಅಧಿಕ ಮೌಲ್ಯದ ವ್ಯವಹಾರವನ್ನು ಕೈಗೊಂಡಲ್ಲಿ, 10% ದಷ್ಟು ಕ್ಯಾಶ್ ಬ್ಯಾಕ್ ಅನ್ನು ಗಳಿಸಿಕೊಳ್ಳುವರು. ಕ್ರೆಡಿಟ್ ವ್ಯವಹಾರಗಳ ಸಂಖ್ಯೆಯು 10 ಕ್ಕಿಂತ ಹೆಚ್ಚಿರಬೇಕು ಹಾಗೂ ವ್ಯವಹಾರದ ಮೌಲ್ಯವು 250 ರೂಪಾಯಿಗಳಿಗಿಂತಲೂ ಹೆಚ್ಚಿನದ್ದಾಗಿರಬೇಕು.


Click it and Unblock the Notifications