For Quick Alerts
ALLOW NOTIFICATIONS  
For Daily Alerts

ಮೊಬೈಲ್ ಸಿಮ್ ಪಡೆಯಲು ಆಧಾರ್ ಕಡ್ಡಾಯವಲ್ಲ

ಕೇಂದ್ರ ಸರ್ಕಾರ ಮೊಬೈಲ್ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಆಧಾರ್ ಕಾರ್ಡ್ ಇಲ್ಲದೆ ಮೊಬೈಲ್ ಫೋನ್ ಸಿಮ್ ಪಡೆಯಲು ಗ್ರಾಹಕರು ಪರದಾಡುತ್ತಿದ್ದರು. ಆದರೆ ಈಗ ಮೊಬೈಲ್ ಸಿಮ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

By Siddu
|

ಕೇಂದ್ರ ಸರ್ಕಾರ ಮೊಬೈಲ್ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಆಧಾರ್ ಕಾರ್ಡ್ ಇಲ್ಲದೆ ಮೊಬೈಲ್ ಫೋನ್ ಸಿಮ್ ಪಡೆಯಲು ಗ್ರಾಹಕರು ಪರದಾಡುತ್ತಿದ್ದರು. ಆದರೆ ಈಗ ಮೊಬೈಲ್ ಸಿಮ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮೊಬೈಲ್ ಸಿಮ್ ಪಡೆಯಲು ಆಧಾರ್ ಕಡ್ಡಾಯವಲ್ಲ

ಆಧಾರ್ ಕಾರ್ಡ್ ಗೆ ಪರ್ಯಾಯವಾಗಿ ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಚುನಾವಣಾ ಚೀಟಿ ಇತ್ಯಾದಿ ಗುರುತಿನ ದಾಖಲಾತಿಗಳನ್ನು ಸ್ವೀಕರಿಸುವಂತೆ ಮೊಬೈಲ್ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ.

ಗ್ರಾಹಕರಿಗೆ ಅನುಕೂಲವಾಗುವಂತೆ ತಕ್ಷಣದಿಂದ ಸೂಚನೆಗಳನ್ನು ಪಾಲಿಸುವಂತೆ ಮೊಬೈಲ್ ಕಂಪನಿಗಳಿಗೆ ಸೂಚಿಸಲಾಗಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅರುಣ ಸುಂದರಾರಾಜನ್ ಹೇಳಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್ ಕೂಡ ಸಿಮ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಹೇಳಿದೆ. ಇದೀಗ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಮೊಬೈಲ್ ಸಿಮ್ ಪಡೆಯಲು ಆಧಾರ್ ಕಡ್ಡಾಯ ಅಲ್ಲ್ ಎಂದು ಹೇಳಿದೆ.

ಈ ಕ್ರಮವು ಎನ್ಆರ್ಐ ಗಳಿಗೆ ಮತ್ತು ದೇಶಕ್ಕೆ ಭೇಟಿ ನೀಡುವ ವಿದೇಶಿಯರಿಗೆ ಪರಿಹಾರವಾಗಿದೆ. ಬಹುಪಾಲು ಜನರು ಆಧಾರ್ ಕಾರ್ಡ್ ಹೊಂದಿಲ್ಲದ ಕಾರಣ ಮೊಬೈಲ್ ಕಂಪನಿಗಳ ಚಿಲ್ಲರೆ ವ್ಯಾಪಾರಿಗಳು ಸಿಮ್ ಕಾರ್ಡ್ ಗಳನ್ನು ನಿರಾಕರಿಸಿದ್ದರು.

English summary

Aadhaar not must for mobile SIM

You don't need an Aadhaar card to get a mobile SIM.
Story first published: Wednesday, May 2, 2018, 13:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X