5 ಲಕ್ಷ ವಿಮೆಯ ಆಯುಷ್ಮಾನ್ ಭಾರತ್ ಯೋಜನೆ ಆಗಸ್ಟ್ 15ರಿಂದ ಜಾರಿ: ನರೇಂದ್ರ ಮೋದಿ

Written By: Siddu
Subscribe to GoodReturns Kannada

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 15, 2018 ರಂದು ಸ್ವಾತಂತ್ರ್ಯ ದಿನಾಚರಣೆ ದಿನದಂದು ಆಯುಷ್ಮಾನ್ ಭಾರತ್ ಯೋಜನೆಯನ್ನು ಘೋಷಿಸಲಿದ್ದಾರೆ ಎಂದು ಝೀ ಬಿಸಿನೆಸ್ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯ ಭಾಗವಾದ ಆಯುಷ್ಮಾನ್ ಭಾರತ್ ಯೋಜನೆಯನ್ನು ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಸಂದರ್ಭದಲ್ಲಿ ಘೋಷಿಸುವ ಸಾಧ್ಯತೆಯಿದೆ.

ಹಿರಿಯ ವಿಮಾ ಅಧಿಕಾರಿಯ ಪ್ರಕಾರ, ಎಲ್ಲಾ ಸರ್ಕಾರಿ ವಿಮಾ ಕಂಪೆನಿಗಳು ಈ ಯೋಜನೆಯನ್ನು ಪ್ರಾರಂಭಿಸಲು ಪೂರ್ವ ತಯಾರಿ ನಡೆಸಲು ಕೇಳಲಾಗಿದೆ. ಯೋಜನೆಯಡಿಯಲ್ಲಿ ಪಾವತಿಸಬೇಕಾದ ಪ್ರೀಮಿಯಂಗೆ ಸಂಬಂಧಿಸಿದಂತೆ ಗೊಂದಲಗಳಿವೆ. ಮೋದಿ ಆರೋಗ್ಯ ವಿಮಾ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

ಪ್ರೀಮಿಯಂ ಮೊತ್ತ

ವಿಮಾ ಕಂಪನಿಗಳು ಈ ಯೋಜನೆಯ ಪ್ರಯೋಜನಗಳನ್ನು ತೆಗೆದುಕೊಳ್ಳುವವರಿಗೆ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸುವಂತೆ ಸರ್ಕಾರವನ್ನು ಕೋರಿವೆ. ಸುಮಾರು ರೂ. 1000 ವರೆಗಿನ ಪ್ರೀಮಿಯಂ ಮೊತ್ತವು ಕಡಿಮೆಯಾಗಿದ್ದು, ರೂ. 2000 ರಿಂದ 2500 ವರೆಗೆ ಮೊತ್ತವನ್ನು ಹೆಚ್ಚಿಸಲು ಕೋರಲಾಗಿದೆ ಎಂದು ಕಂಪೆನಿಗಳು ತಿಳಿಸಿವೆ.

ಅನೇಕ ರಾಜ್ಯಗಳಲ್ಲಿ ಯೋಜನೆಗಳಿವೆ

ಅನೇಕ ರಾಜ್ಯಗಳು ಈಗಾಗಲೇ ಹಲವು ಆರೋಗ್ಯ ವಿಮಾ ಯೋಜನೆಯನ್ನು ನಡೆಸುತ್ತಿವೆ. ಆಂದ್ರಪ್ರದೇಶದಲ್ಲಿ ಆರೋಗ್ಯ ಶ್ರೀ, ಜಾರ್ಖಂಡ್ ನಲ್ಲಿ ಮುಖ್ಯಮಂತ್ರಿ ಸ್ವಾಸ್ಥ್ಯ ವಿಮಾ ಯೋಜನೆ, ಓಡಿಸ್ಸಾದಲ್ಲಿ ಕೃಷಕ್ ಕಲ್ಯಾಣ ಯೋಜನೆ ಹಾಗು ಕೇರಳದಲ್ಲಿ ಸಮಗ್ರ ಆರೋಗ್ಯ ವಿಮಾ ಯೋಜನೆಗಳು ಚಾಲನೆಯಲ್ಲಿವೆ. ಹೀಗಾಗಿ ರಾಜ್ಯಗಳು ಆಯುಷ್ಮಾನ್ ಭಾರತ್ ಯೋಜನೆಯನ್ನು ಅಳವಡಿಸಿಕೊಳ್ಳಬಹುದೇ ಎಂಬೂದು ಇನ್ನೂ ಸ್ಪಷ್ಟವಾಗಿಲ್ಲ.

ರೂ. 5 ಲಕ್ಷ ವಿಮೆ, 10 ಕೋಟಿ ಕುಟುಂಬಗಳು

ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯಾಗಿದ್ದು, ಪ್ರತಿ ವರ್ಷಕ್ಕೆ 5 ಲಕ್ಷ ರೂ. ಕವರೇಜ್ ಒದಗಿಸಲಿದ್ದು, 10 ಕೋಟಿ ಬಡ ಮತ್ತು ದುರ್ಬಲ ಕುಟುಂಬಗಳು (ಸರಿಸುಮಾರು 50 ಕೋಟಿ ಫಲಾನುಭವಿಗಳು) ಇದು ಒಳಗೊಳ್ಳುವ ಗುರಿ ಹೊಂದಿದೆ. 2018 ರ ಯೂನಿಯನ್ ಬಜೆಟ್ ನಲ್ಲಿ, ಹಣಕಾಸು ಸಚಿವ ಅರುಣ್ ಜೇಟ್ಲಿ 2018 ರ ಆಗಸ್ಟ್ 15 ರಂದು ಆಯುಷ್ಮಾನ್ ಭಾರತ್ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತರಲಾಗುವುದು ಎಂದಿದ್ದಾರೆ.

English summary

Narendra Modi may announce Ayushman Bharat scheme on August 15

Ayushman Bharat is National Health Protection Scheme, which will cover over 10 crore poor and vulnerable families providing coverage up to 5 lakh rupees per family per year.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

ಕರ್ನಾಟಕ ವಿಧಾನಸಭೆ ಚುನಾವಣೆ 2018

Get Latest News alerts from Kannada Goodreturns