For Quick Alerts
ALLOW NOTIFICATIONS  
For Daily Alerts

ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ನೀಡಿ ರೂ. 1 ಕೋಟಿ ಪಡೆಯಿರಿ

ನರೇಂದ್ರ ಮೋದಿ ಸರ್ಕಾರ ಬೇನಾಮಿ ಆಸ್ತಿ ಮೇಲೆ ಕಣ್ಣಿಟ್ಟಿದ್ದು, ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ನೀಡುವವರಿಗೆ ರೂ. 1 ಕೋಟಿ ಬಹುಮಾನ ಘೋಷಣೆ ಮಾಡಿದೆ.

By Siddu
|

ನರೇಂದ್ರ ಮೋದಿ ಸರ್ಕಾರ ಬೇನಾಮಿ ಆಸ್ತಿ ಮೇಲೆ ಕಣ್ಣಿಟ್ಟಿದ್ದು, ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ನೀಡುವವರಿಗೆ ರೂ. 1 ಕೋಟಿ ಬಹುಮಾನ ಘೋಷಣೆ ಮಾಡಿದೆ. 'ಬೇನಾಮಿ ವ್ಯವಹಾರಗಳ ಮಾಹಿತಿದಾರರ ಪುರಸ್ಕಾರ ಯೋಜನೆ- 2018' (Benami Transactions Informants Reward Scheme 2018) ಎಂಬುದು ಈ ಯೋಜನೆಯಾಗಿದೆ. ಜೂನ್ ಒಂದರಿಂದ ಈ ಯೋಜನೆ ಜಾರಿಯಾಗಲಿದೆ.

ಇದು ಬೇನಾಮಿ ಆಸ್ತಿ ಹಾಗೂ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡುವ ಯೋಜನೆಯಾಗಿದೆ. ಐಟಿಐ ಸ್ಕೀಂ ಅಡಿ ಕಪ್ಪು ಹಣದ ಮಾಹಿತಿ ನೀಡುವವರಿಗೆ 5 ಕೋಟಿ ರೂಪಾಯಿವರೆಗೆ ಬಹುಮಾನ ಹಾಗೂ ಬಿಟಿಐ ಸ್ಕೀಂನಲ್ಲಿ 1 ಕೋಟಿ ರೂಪಾಯಿವರೆಗೆ ಬಹುಮಾನ ನೀಡಲಾಗುತ್ತದೆ. ಯಾವುದೇ ವ್ಯಕ್ತಿ ತನ್ನ ಹಣದಿಂದ ಬೇರೆಯವರ ಹೆಸರಿನಲ್ಲಿ ಆಸ್ತಿ ಮಾಡಿದ್ದರೆ ಅದನ್ನು ಬೇನಾಮಿ ಆಸ್ತಿಯೆಂದು ಕರೆಯಲಾಗುತ್ತದೆ. ಅನಾಮಧೇಯ ಎಂಬುದು ಗೊತ್ತಾದಲ್ಲಿ ಆಸ್ತಿಯನ್ನು ಯಾವಾಗ ಬೇಕಾದ್ರೂ ವಶಪಡಿಸಿಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಸಿಕ್ಕಿಬಿದ್ದ ವ್ಯಕ್ತಿಗೆ 7 ವರ್ಷ ಜೈಲು ಶಿಕ್ಷೆಯಾಗಲಿದೆ. ನರೇಂದ್ರ ಮೋದಿ ಸರ್ಕಾರದ ಈ ಯೋಜನೆಯಿಂದ 6 ತಿಂಗಳಲ್ಲಿ ರೂ. 5 ಕೋಟಿ ಗಳಿಸುವುದು ಹೇಗೆ?

ಮಾಹಿತಿ ನೀಡಿದವರ ಹೆಸರು ರಹಸ್ಯ

ಮಾಹಿತಿ ನೀಡಿದವರ ಹೆಸರು ರಹಸ್ಯ

ಈ ಬಗ್ಗೆ ಹಣಕಾಸು ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಒಂದು ವೇಳೆ ತಮ್ಮ ಗುರುತು ಬಹಿರಂಗವಾದರೆ ಹೇಗೆ ಎಂಬ ಆತಂಕ ಬೇಡ. ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಯ ಹೆಸರು ರಹಸ್ಯವಾಗಿರಲಿದೆ. ಒಂದು ವೇಳೆ ವ್ಯಕ್ತಿ ಕೊಟ್ಟ ಮಾಹಿತಿ ತಪ್ಪಿದ್ದರೆ ಯಾವುದೇ ಬಹುಮಾನ ಸಿಗುವುದಿಲ್ಲ. ಆದಾಯ ತೆರಿಗೆ ಇಲಾಖೆ ತನ್ನದೇ ಮಟ್ಟದಲ್ಲಿ ತನಿಖೆ ನಡೆಸಲಿದೆ. ನೀವು ಶ್ರೀಮಂತರಾಗಬಯಸುವಿರಾ? ಈ 5 ಮಾರ್ಗ ತಪ್ಪದೇ ಅನುಸರಿಸಿ ನೋಡಿ..

ಸರ್ಕಾರಕ್ಕೆ ಯಾರು, ಹೇಗೆ ಮಾಹಿತಿ ನೀಡಬಹುದು?

ಸರ್ಕಾರಕ್ಕೆ ಯಾರು, ಹೇಗೆ ಮಾಹಿತಿ ನೀಡಬಹುದು?

ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಸರಕಾರಕ್ಕೆ ಮಾಹಿತಿ ನೀಡಲು ಅವಕಾಶವಿದೆ. 1 ಕೋಟಿ ರೂಪಾಯಿವರೆಗಿನ ಬೇನಾಮಿ ಸ್ಥಿರಾಸ್ತಿ, ಚರಾಸ್ತಿಗಳ ನಿರ್ದಿಷ್ಟ ಮಾಹಿತಿ ನೀಡಬಹುದು. ಆದರೆ ಈ ಎಲ್ಲ ಆರೋಪಗಳನ್ನು ಸಾಬೀತುಪಡಿಸುವ ಸೂಕ್ತ ದಾಖಲೆಗಳನ್ನು ನೀಡುವುದು ಅಗತ್ಯ. ಬೇನಾಮಿ ಬಗ್ಗೆ ಮಾಹಿತಿ ನೀಡಬಯಸುವವರು ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕರನ್ನು ಸಂಪರ್ಕಿಸಬಹುದು. ಮಾಹಿತಿ ನೀಡುವವರು ನಿರ್ದಿಷ್ಟ ಫಾರ್ಮನಲ್ಲಿ ವಿವರಗಳನ್ನು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಇಲಾಖೆಗೆ ಸಲ್ಲಿಸಬೇಕು. ಅಲ್ಲದೆ ಈ ಫಾರ್ಮನಲ್ಲಿ ಮಾಹಿತಿ ನೀಡುವವರು ತಮ್ಮ ವೈಯಕ್ತಿಕ ವಿವರಗಳಾದ ಹೆಸರು, ತಂದೆಯ ಹೆಸರು, ವಿಳಾಸ, ಆಧಾರ ಸಂಖ್ಯೆ, ದೂರವಾಣಿ ಸಂಖ್ಯೆ ಮುಂತಾದ ವಿವರಗಳನ್ನು ನಮೂದಿಸಬೇಕಾಗುತ್ತದೆ. ಇದರೊಂದಿಗೆ ತೆರಿಗೆ ವಂಚಕರು ಹಾಗೂ ಕಪ್ಪುಹಣ ಸಂಗ್ರಹಿಸಿರುವವರ ಹೆಸರು, ವಿಳಾಸ, ಅವರು ಹೊಂದಿರುವ ಆಸ್ತಿಗಳ ಮಾಹಿತಿ ಮುಂತಾದ ವಿವರಗಳನ್ನು ಸಲ್ಲಿಸಬೇಕಿರುತ್ತದೆ.

ಪರಿಶೀಲನೆ ಬಳಿಕ 6 ತಿಂಗಳೊಳಗೆ ಅಂತಿಮ ಬಹುಮಾನ

ಪರಿಶೀಲನೆ ಬಳಿಕ 6 ತಿಂಗಳೊಳಗೆ ಅಂತಿಮ ಬಹುಮಾನ

ಮಾಹಿತಿ ನೀಡಿದ ನಂತರ ವಿವರಗಳನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿದ ಬಳಿಕ ನಾಲ್ಕು ತಿಂಗಳಲ್ಲಿ ಮಧ್ಯಂತರ ಬಹುಮಾನ ಹಾಗೂ ವಂಚನೆ, ಬೇನಾಮಿ ಆಸ್ತಿಯನ್ನು ವಶಪಡಿಸಿಕೊಂಡ ಆರು ತಿಂಗಳೊಳಗೆ ಅಂತಿಮ ಬಹುಮಾನವನ್ನು ನೀಡಲಾಗುವುದು.

English summary

Benami Transactions Informants Reward Scheme, 2018- Reward up to Rs. 1 crore

Benami properties can get awards up to Rs 1 crore. The scheme comes into effect from June 1.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X