ಬ್ಯಾಂಕಿಂಗ್-ಶಾಕಿಂಗ್! ಎಸ್ಬಿಐನಂತೆ ನಾಲ್ಕು ಬ್ಯಾಂಕುಗಳು ವಿಲೀನ

2017-18ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ದಾಖಲೆಯ ನಷ್ಟವನ್ನು ಅನುಭವಿಸಿರುವ ಬ್ಯಾಂಕುಗಳನ್ನು ವಿಲೀನಗೊಳಿಸಲು ಸರ್ಕಾರ ಯೋಜಿಸಿದೆ.

2017-18ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ದಾಖಲೆಯ ನಷ್ಟವನ್ನು ಅನುಭವಿಸಿರುವ ಬ್ಯಾಂಕುಗಳನ್ನು ವಿಲೀನಗೊಳಿಸಲು ಸರ್ಕಾರ ಯೋಜಿಸಿದೆ.

ವಸೂಲಾಗದ ಸಾಲದ ಪ್ರಮಾಣ ಹೆಚ್ಚಾಗಿ ಆರ್ಥಿಕ ದುಸ್ಥಿತಿಯಲ್ಲಿರುವ ಸರ್ಕಾರಿ ಸ್ವಾಮ್ಯದ ನಾಲ್ಕು ಬ್ಯಾಂಕುಗಳ ಸುಧಾರಣೆಗಾಗಿ ಮೋದಿ ಸರ್ಕಾರ ಮುಂದಾಗಲಿದೆ.
ನಷ್ಟದಲ್ಲಿರುವ ಪರಿಸ್ಥಿತಿ ಸುಧಾರಣೆ ಮಾಡುವುದು ಸವಾಲಿನ ಕೆಲಸವಾಗಿದ್ದು, ಇದಕ್ಕಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೆಗಾ ವಿಲೀನವೊಂದು ನಡೆಯಲಿದೆ. 'ಬ್ಲಾಕ್‌ಚೈನ್ ವೋಟಿಂಗ್ ಸಿಸ್ಟಂ' ರಾಜಕೀಯ ವ್ಯವಸ್ಥೆಯನ್ನು ನಾಶಪಡಿಸಲಿದೆ! ಯಾಕೆ ಗೊತ್ತೆ?

ನಾಲ್ಕು ಬ್ಯಾಂಕ್ ಯಾವುವು?

ನಾಲ್ಕು ಬ್ಯಾಂಕ್ ಯಾವುವು?

ಬ್ಯಾಂಕ್ ಆಫ್ ಬರೋಡ, ಸೆಂಟ್ರಲ್ ಬ್ಯಾಂಕ್, ಐಡಿಬಿಐ ಹಾಗು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಈ ನಾಲ್ಕು ಬ್ಯಾಂಕುಗಳನ್ನು ವಿಲೀನಗೊಳಿಸಲು ಚಿಂತಿಸಲಾಗಿದೆ. ಸರ್ಕಾರಿ ಸ್ವಾಮ್ಯದ ನಾಲ್ಕು ಸರ್ಕಾರಿ ಬ್ಯಾಂಕ್ ಗಳನ್ನು ಸೇರಿಸಿ ಒಂದು ದೊಡ್ಡ ಬ್ಯಾಂಕ್ ಆಗಿ ರೂಪಿಸುವ ಕಾರ್ಯವನಡೆಯುತ್ತಿದೆ.

ಎಸ್ಬಿಐ ನಂತರದ ಅತಿದೊಡ್ಡ ಬ್ಯಾಂಕ್

ಎಸ್ಬಿಐ ನಂತರದ ಅತಿದೊಡ್ಡ ಬ್ಯಾಂಕ್

ನಾಲ್ಕು ಬ್ಯಾಂಕುಗಳು ವಿಲೀನವಾದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಂತರದ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕು ಎನಿಸಲಿದೆ. ಹೊಸ ಬ್ಯಾಂಕ್ ಬಳಿ ರೂ. 16.58 ಲಕ್ಷ ಕೋಟಿ ಆಸ್ತಿಯಿರಲಿದೆ.

ವಿಲೀನಕ್ಕೆ ಕಾರಣ

ವಿಲೀನಕ್ಕೆ ಕಾರಣ

ನಾಲ್ಕು ಅನುತ್ಪಾದಕ ಆಸ್ತಿಯ ಪ್ರಮಾಣ ಹೆಚ್ಚಾಗಿದ್ದು, 2018 ರ ಹಣಕಾಸು ವರ್ಷದಲ್ಲಿ ಈ ನಾಲ್ಕು ಬ್ಯಾಂಕ್ ಗಳಿಂದ ರೂ. 21646 ಸಾವಿರ ಕೋಟಿ ನಷ್ಟವಾಗಿದೆ. ಈ ಕಾರಣಕ್ಕಾಗಿ ಬ್ಯಾಂಕ್ ಆಫ್ ಬರೋಡ, ಸೆಂಟ್ರಲ್ ಬ್ಯಾಂಕ್, ಐಡಿಬಿಐ ಹಾಗು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಬ್ಯಾಂಕು ಗಳ ವಿಲೀನಕ್ಕೆ ಸರ್ಕಾರ ಮುಂದಾಗಿದೆ.

ಬ್ಯಾಂಕುಗಳ ಪರಿಸ್ಥಿತಿ ಸುಧಾರಣೆ

ಬ್ಯಾಂಕುಗಳ ಪರಿಸ್ಥಿತಿ ಸುಧಾರಣೆ

ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ನಾಲ್ಕು ಬ್ಯಾಂಕುಗಳು ವಿಲೀನವಾದರೆ ಬ್ಯಾಂಕುಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಜೊತೆಗೆ ದುರ್ಬಲ, ನಷ್ಟದಲ್ಲಿರುವ ಬ್ಯಾಂಕುಗಳಿಗೆ ಬಲ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+