ಫಿಪಾ ವಿಶ್ವಕಪ್ ಸ್ಪೇಷಲ್! ಬಿಎಸ್ಎನ್ಎಲ್ ನಿಂದ ಪ್ರತಿದಿನ 4 GB ಡೇಟಾ ಆಫರ್

ಫಿಪಾ ವಿಶ್ವಕಪ್ ಹಿನ್ನೆಲೆಯಲ್ಲಿ ಬಿಎಸ್ಎನ್ಎಲ್ ಭರ್ಜರಿ ಆಫರ್ ಘೋಷಿಸಿದ್ದು, ಫಿಫಾ ವಿಶ್ವಕಪ್ ವೀಕ್ಷಿಸುವ ಪ್ರೇಕ್ಷಕರಿಗಾಗಿ ಈ ಆಫರ್ ಶುರು ಮಾಡಲಾಗಿದೆ.

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ಪ್ರಸ್ತುತ ನಡೆಯುತ್ತಿರುವ ಟೆಲಿಕಾಂ ಸಮರದಲ್ಲಿ ಹೊಸ ಆಫರ್ ಗಳನ್ನು ಘೋಷಿಸುವುದರ ಮುಖಾಂತರ ಪೈಪೋಟಿ ನೀಡುತ್ತಿದೆ. ಫಿಪಾ ವಿಶ್ವಕಪ್ ಹಿನ್ನೆಲೆಯಲ್ಲಿ ಬಿಎಸ್ಎನ್ಎಲ್ ಭರ್ಜರಿ ಆಫರ್ ಘೋಷಿಸಿದ್ದು, ಫಿಫಾ ವಿಶ್ವಕಪ್ ವೀಕ್ಷಿಸುವ ಪ್ರೇಕ್ಷಕರಿಗಾಗಿ ಈ ಆಫರ್ ಶುರು ಮಾಡಲಾಗಿದೆ.

ರೂ. 149 ಪ್ಲಾನ್

ರೂ. 149 ಪ್ಲಾನ್

ರಿಲಯನ್ಸ್ ಜಿಯೋ ಹಾಗೂ ಏರ್ಟೆಲ್ ನಂತರದಲ್ಲಿ ಬಿಎಸ್ಎನ್ಎಲ್ ಕಂಪನಿ ರೂ. 149 ಪ್ಲಾನ್ ಅಡಿ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ.
ಫಿಫಾ ವಿಶ್ವಕಪ್ ಸ್ಪೆಷಲ್ ಡೇಟಾ 149 ಪ್ಲಾನ್ ನಲ್ಲಿ ಬಿಎಸ್ಎನ್ಎಲ್ ಆಕರ್ಷಕ ಕೊಡುಗೆ ಪರಿಚಯಿಸಿದೆ. ರಿಲಯನ್ಸ್ ಜಿಯೋ ತನ್ನೆಲ್ಲ ಗ್ರಾಹಕರಿಗೆ 1.5 GB ಹೆಚ್ಚುವರಿ ಡೇಟಾ ನೀಡುವ ಘೋಷಣೆ ಮಾಡಿದ ಬೆನ್ನಲ್ಲೆ ಬಿಎಸ್ಎನ್ಎಲ್ ಈ ಆಫರ್ ಬಿಡುಗಡೆ ಮಾಡಿದೆ.

ಪ್ರತಿದಿನ 4 GB ಡೇಟಾ

ಪ್ರತಿದಿನ 4 GB ಡೇಟಾ

ಪ್ರತಿದಿನ 4 GB ಡೇಟಾ ನೀಡುತ್ತಿದ್ದು, ಜೂನ್ 14 ರಿಂದಲೇ ಆಫರ್ ಶುರುವಾಗಿದೆ. ಗ್ರಾಹಕರು ಜೂನ್ 14 ರಿಂದ 28 ದಿನಗಳವರೆಗೆ ಲಾಭ ಪಡೆಯಲಿದ್ದಾರೆ.

ಯಾರಿಗೆ ಸೌಲಭ್ಯವಿಲ್ಲ

ಯಾರಿಗೆ ಸೌಲಭ್ಯವಿಲ್ಲ

ಮುಂಬೈ ಮತ್ತು ದೆಹಲಿ ಬಳಕೆದಾರರನ್ನು ಹೊರತುಪಡಿಸಿ ಭಾರತದಾದ್ಯಂತ ಬಿಎಸ್ಎನ್ಎಲ್ ಗ್ರಾಹಕರಿಗೆ ಫಿಫಾ ವಿಶ್ವಕಪ್ ಯೋಜನೆ ಲಭ್ಯವಿರುತ್ತದೆ. ಈ ಯೋಜನೆಯಡಿ ಉಚಿತ ಧ್ವನಿ ಕರೆ ಹಾಗೂ ಎಸ್ಎಂಎಸ್ ಸೌಲಭ್ಯ ಇರುವುದಿಲ್ಲ. ಬಿಎಸ್ಎನ್ಎಲ್ ನ ಪ್ರಿಪೇಡ್ ಗ್ರಾಹಕರು ಜೂನ್ 14 ರಿಂದ ಪೋರ್ಟಲ್ ಮೂಲಕ ರೀಚಾರ್ಜ್ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+