ಪ್ರಸಕ್ತ ಹಣಕಾಸು ಸಾಲಿನಲ್ಲಿ ಸಂಸ್ಥೆಯ ಪೊರ್ಟ್ಪೋಲಿಯೊ ಹೆಚ್ಚಿಸುವ ಸಲುವಾಗಿ ನಾಲ್ಕು ಹೊಸ ಬಗೆಯ ಕ್ರೆಡಿಟ್ ಕಾರ್ಡ್ ಗಳನ್ನು ಪರಿಚಯಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ನಿರ್ಧರಿಸಿದೆ.
ಪ್ರಸಕ್ತ ಹಣಕಾಸು ಸಾಲಿನಲ್ಲಿ ಸಂಸ್ಥೆಯ ಪೊರ್ಟ್ಪೋಲಿಯೊ ಹೆಚ್ಚಿಸುವ ಸಲುವಾಗಿ ನಾಲ್ಕು ಹೊಸ ಬಗೆಯ ಕ್ರೆಡಿಟ್ ಕಾರ್ಡ್ ಗಳನ್ನು ಪರಿಚಯಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ನಿರ್ಧರಿಸಿದೆ.
ಕಾರ್ಡು ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ, ಸಹ ಬ್ರಾಂಡ್ ಕಾರ್ಡ್ ಒಳಗೊಂಡಂತೆ ಕನಿಷ್ಠ ನಾಲ್ಕು ನೂತನ ಪ್ರಕಾರದ ಕಾರ್ಡುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಎಸ್ಬಿಐ ಕಾರ್ಡ್ ವ್ಯವಸ್ಥಾಪಕ ನಿರ್ದೇಶಕರಾದ ಹೃದಯಾಳ್ ಪ್ರಸಾದ್ ಹೇಳಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷ ೪ ಕಾರ್ಡ್
ಇದೇ ರೀತಿ ಕಳೆದ ಹಣಕಾಸು ವರ್ಷದಲ್ಲೂ ಕೂಡ ಡಾಕ್ಟರ್ಸ್ ಎಸ್ಬಿಐ ಕಾರ್ಡ್ ಒಳಗೊಂಡಂತೆ ಹೊಸ ಕಾರ್ಡುಗಳನ್ನು ಪರಿಚಯಿಸಲಾಗಿತ್ತು.
ಈ ಬಾರಿ ಕೋ ಬ್ರಾಂಡೆಡ್ ಕಾರ್ಡ್ ಒಳಗೊಂಡಂತೆ ನವೀನ ಉತ್ಪನ್ನಗಳನ್ನು, ಕನಿಷ್ಠ ನಾಲ್ಕು ಕ್ರೆಡಿಟ್ ಕಾರ್ಡ್ ಗಳನ್ನು ಪ್ರಾರಂಭಿಸುತ್ತೇವೆ ಎಂದಿದ್ದಾರೆ.
ಗ್ರಾಹಕ ಬೆಂಬಲ ಸೇವೆ
ಗ್ರಾಹಕರ ಅನುಭವವನ್ನು ಸುಧಾರಿಸಲು, ಕಂಪನಿಯು ಇತ್ತೀಚೆಗೆ ELA (ಎಲೆಕ್ಟ್ರಾನಿಕ್ ಲೈವ್ ಸಹಾಯಕ), ಗ್ರಾಹಕ ಬೆಂಬಲ ಸೇವೆಯನ್ನು ಪ್ರಾರಂಭಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷೀನ್ ಕಲಿಕೆಯಿಂದ ನಡೆಸಲ್ಪಟ್ಟ, ಗ್ರಾಹಕರ ಪ್ರಶ್ನೆಗಳಿಗೆ ಸಂಬಂಧಿಸಿದ ಮತ್ತು ತ್ವರಿತ ಪ್ರತಿಕ್ರಿಯೆ ನೀಡುವ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.
ELA ನೊಂದಿಗೆ ಸಂವಹನ
ಸಂಭಾಷಣಾ ಭಾಷೆಯಲ್ಲಿ ಗ್ರಾಹಕರು ELA ನೊಂದಿಗೆ ಸಂವಹನ ಮಾಡಬಹುದಾಗಿದ್ದು, ಪ್ರಾಂಪ್ಟ್ ಕ್ವೆಸ್ಟ್ ರೆಸೊಲ್ಯೂಶನ್ ಜೊತೆಗೆ ಸುಲಭವಾಗಿ ಇಂಟರ್ಫೇಸ್ ಸಕ್ರಿಯಗೊಳಿಸಬಹುದು. ವರ್ಚುವಲ್ ಸಹಾಯಕ ಪ್ರಸ್ತುತ ಎಸ್ಬಿಐ ಕಾರ್ಡ್ ವೆಬ್ಸೈಟ್ ನಲ್ಲಿ ಪರಿಚಯಿಸಲಾಗಿದ್ದು, ಶೀಘ್ರದಲ್ಲೇ ಮೊಬೈಲ್ ಅಪ್ಲಿಕೇಶನ್ ಗಳಲ್ಲೂ ಸಂಯೋಜಿಸಲ್ಪಡಲಿದೆ ಎಂದು ಹೃದಯಾಳ್ ಪ್ರಸಾದ್ ಹೇಳಿದ್ದಾರೆ.


Click it and Unblock the Notifications