ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ದೇಶದ ಪ್ರಥಮ ಇಂಟರ್‌ನೆಟ್ ಟೆಲಿಫೋನ್ ಸೇವೆಯನ್ನು ಪರಿಚಯಿಸಿದೆ.ಈ ಸೇವೆ ಮೂಲಕ ಗ್ರಾಹಕರು ದೇಶದಾದ್ಯಂತ ಬಿಎಸ್ಎನ್ಎಲ್ ಮೊಬೈಲ್ ಆಪ್ ವಿಂಗ್ ಗಳ ಮೂಲಕ ಯಾವುದೇ ಸಂಖ್ಯೆಗೆ ಕರೆ ಮಾಡಬಹುದು.
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ದೇಶದ ಪ್ರಥಮ ಇಂಟರ್‌ನೆಟ್ ಟೆಲಿಫೋನ್ ಸೇವೆಯನ್ನು ಪರಿಚಯಿಸಿದೆ.
ಈ ಸೇವೆ ಮೂಲಕ ಗ್ರಾಹಕರು ದೇಶದಾದ್ಯಂತ ಬಿಎಸ್ಎನ್ಎಲ್ ಮೊಬೈಲ್ ಆಪ್ ವಿಂಗ್ ಗಳ ಮೂಲಕ ಯಾವುದೇ ಸಂಖ್ಯೆಗೆ ಕರೆ ಮಾಡಬಹುದು.
ಈ ಹಿಂದೆ ಮೊಬೈಲ್ ಅಪ್ಲಿಕೇಶನ್ ಮೂಲಕ ಕಾಲ್ ಮಾಡುವ ಸೌಲಭ್ಯ ಕೆಲ ಆಪ್ ಗಳಲ್ಲಿ ಮಾತ್ರ ಲಭ್ಯವಿತ್ತು. ಈಗ ಆಪ್ ಮುಖಾಂತರ ಯಾವುದೇ ಕಂಪನಿಯ ಸಂಖ್ಯೆಗಳಿಗೆ ಬೇಕಾದರೂ ಕರೆ ಮಾಡಬಹುದು.
ಮನೋಜ್ ಸಿನ್ಹಾ ಅಭಿನಂದನೆ
ಇಂಟರ್ನೆಟ್ ಟೆಲಿಫೋನ್ ಸೇವೆಜಿಯೋ ಪ್ರವೇಶಾತಿ ನಂತರ ಟೆಲಿಕಂ ಕ್ಷೇತ್ರದ ದಿಶೆಯ ಬದಲಾಗಿದೆ! ಟೆಲಿಕಾಂ ಕಂಪನಿಗಳು ದರ ಸಮರದ ಜಿದ್ದಾಜಿದ್ದಿಗೆ ಬಿದ್ದು, ತಮ್ಮ ಗ್ರಾಹಕರನ್ನು ಉಳಿಸುವ ಹಾಗು ಸೆಳೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರನ್ನು ಆಕರ್ಷಿಸಲು ಇದು ಒಳ್ಳೆ ಕೆಲಸವಾಗಿದ್ದು, ಅಂತರ್ಜಾಲ ಟೆಲಿಫೋನ್ ಸೇವೆ ಆರಂಭಿಸಿರುವ ಬಿಎಸ್ಎನ್ಎಲ್ ಗೆ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಅಭಿನಂದಿಸಿದ್ದಾರೆ.
ಸಿಮ್ ಬಳಸದೆ ಸೇವೆ
ಗ್ರಾಹಕರು ಸಿಮ್ ಕಾರ್ಡ್ ನ್ನು ಬಳಸದೇ ಕರೆ ಮಾಡುವ ಸೌಲಭ್ಯವನ್ನು ಈ ಯೋಜನೆ ಮೂಲಕ ನೀಡಲಾಗುತ್ತಿದೆ. ಈ ಸೇವೆ ಮುಖಾಂತರ ದೇಶದ ಯಾವುದೇ ಮೂಲೆಗೆ ಕರೆ ಮಾಡಬಹುದು.
ಸೇವೆ ಯಾವಾಗ ಲಭ್ಯ?
ಇದೇ ವಾರದಲ್ಲಿಈ ಸೇವೆಯ ನೋಂದಣಿ ಕಾರ್ಯ ಶುರುವಾಗಲಿದೆ. ಇದೇ ಜುಲೈ 25 ರಿಂದ ಸೇವೆ ಲಭ್ಯವಾಗಲಿದೆ.
ಈ ಸೇವೆಗೆ ರೂ. 1099 ಎಂದು ಹೇಳಲಾಗುತ್ತಿದ್ದು, ಒಂದು ವರ್ಷದವರೆಗೆ ಉಚಿತ ಕರೆಗಳನ್ನು ಮಾಡಬಹುದಾಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications