For Quick Alerts
ALLOW NOTIFICATIONS  
For Daily Alerts

ಸ್ಯಾನಿಟರಿ ನ್ಯಾಪ್ಕಿನ್ ಸಂಪೂರ್ಣ ತೆರಿಗೆಮುಕ್ತ, ಒಂದು ವರ್ಷದ ಹೋರಾಟಕ್ಕೆ ಜಯ..

ದೇಶದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ತೆರಿಗೆ ಮುಕ್ತವಾಗಬೇಕು ಎಂಬ ಮಹಿಳೆಯರ ಹೋರಾಟಕ್ಕೆ ಒಂದು ವರ್ಷದ ನಂತರ ಗೆಲುವು ಸಿಕ್ಕಿದೆ. ಸ್ಯಾನಿಟರಿ ಪ್ಯಾಡ್ ಮೇಲಿನ ಶೇ. ೧೨ರಷ್ಟು ತೆರಿಗೆಯನ್ನು ವಿರೋಧಿಸಿ ದೇಶದಾದ್ಯಂತ ತೀವ್ರವಾದ ವಿರೋಧ ವ್ಯಕ್ತ.

By Siddu Thoravat
|

ದೇಶದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ತೆರಿಗೆ ಮುಕ್ತವಾಗಬೇಕು ಎಂಬ ಮಹಿಳೆಯರ ಹೋರಾಟಕ್ಕೆ ಒಂದು ವರ್ಷದ ನಂತರ ಗೆಲುವು ಸಿಕ್ಕಿದೆ. ಸ್ಯಾನಿಟರಿ ಪ್ಯಾಡ್ ಮೇಲಿನ ಶೇ. ೧೨ರಷ್ಟು ತೆರಿಗೆಯನ್ನು ವಿರೋಧಿಸಿ ದೇಶದಾದ್ಯಂತ ತೀವ್ರವಾದ ವಿರೋಧ ವ್ಯಕ್ತವಾಗಿತ್ತು.

 
ಸ್ಯಾನಿಟರಿ ನ್ಯಾಪ್ಕಿನ್ ಸಂಪೂರ್ಣ ತೆರಿಗೆಮುಕ್ತ, ಮಹಿಳೆಯರಿಗೆ  ಜಯ..

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸಭೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಸಂಪೂರ್ಣವಾಗಿ ತೆರಿಗೆಮುಕ್ತಗೊಳಿಸಿರುವುದು ಮಹಿಳೆಯರ ಸಂತಸಕ್ಕೆ ಕಾರಣವಾಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ತುಂಬಾ ಟ್ರೆಂಡ್ ಕ್ರಿಯೆಟ್ ಮಾಡಿದ್ದು, #SanitaryNapkins ಹ್ಯಾಷ್‌ಟ್ಯಾಗ್‌ ನೊಂದಿಗೆ ಹರ್ಷದಾಯಕ ಸಂದೇಶಗಳು ಹರಿದಾಡುತ್ತಿವೆ.

 

ಮಹಿಳೆಯರು ಋತುಸ್ರಾವದ ಸಮಯದಲ್ಲಿ ಅವಶ್ಯವಾಗಿ ಬಳಸುವ ಸ್ಯಾನಿಟರಿ ನ್ಯಾಪ್ಕಿನ್ ಅನ್ನು ಕಳೆದ ಬಾರಿ ಜಿಎಸ್ಟಿಯ ಶೇ.೧೨ರ ಸ್ಲ್ಯಾಬ್ ಗೆ ಸೇರಿಸಲಾಗಿತ್ತು. ಆಗ ಸರ್ಕಾರದ ವಿರುದ್ಧ ಮಹಿಳೆಯರು, ನಟ-ನಟಿಯರು, ಸಾಮಾಜಿಕ ಕಾರ್ಯಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಲ್ಲದೆ ಕೆಲವು ಮಹಿಳೆಯರು ಆನ್‌ಲೈನ್‌ ಪಿಟಿಷನ್‌ ಆರಂಭಿಸಿದ್ದಲ್ಲದೇ, ಸುಮಾರು ೪ ಲಕ್ಷಕ್ಕಿಂತ ಹೆಚ್ಚು ಸಹಿಗಳನ್ನು ಆನ್‌ಲೈನ್‌ ಪಿಟಿಷನ್ ಪಡೆದುಕೊಂಡಿತ್ತು. ಕೊನೆಗೂ ಸ್ಯಾನಿಟರಿ ನ್ಯಾಪ್‌ಕಿನ್‌ ಸಂಪೂರ್ಣ ತೆರಿಗೆಮುಕ್ತವಾಗಿದೆ. ಜಿಎಸ್ಟಿ ಕೌನ್ಸಿಲ್, ಜನಸಾಮಾನ್ಯರಿಗೆ ಬಂಪರ್! 88 ಸರಕುಗಳ ಮೇಲಿನ ತೆರಿಗೆ ಕಡಿತ

Read more about: india finance news money
English summary

Sanitary Napkins Now Exempt From GST After Year-Long Opposition

The government scrapped a controversial tax on sanitary pads on Saturday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X