ಸಬ್ಸಿಡಿಯಲ್ಲಿ ನೀಡುವ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ದರವನ್ನು ಹೆಚ್ಚಿಸಲಾಗಿದ್ದು, ಮಂಗಳವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ.
ಸಬ್ಸಿಡಿಯಲ್ಲಿ ನೀಡುವ ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ದರವನ್ನು ಹೆಚ್ಚಿಸಲಾಗಿದ್ದು, ಮಂಗಳವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ. ತೆರಿಗೆಯ ಪರಿಣಾಮಗಳಿಂದಾಗಿ ಅಡುಗೆ ಅನಿಲ ದರ ಹೆಚ್ಚಿಸಲಾಗಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ. ಸಬ್ಸಿಡಿ ರಹಿತ ಅಡುಗೆ ಅನಿಲ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಸಬ್ಸಿಡಿ ಅಡುಗೆ ಅನಿಲ ದರದಲ್ಲಿ ಹೆಚ್ಚಳವಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?
ಬೆಲೆ ಏರಿಕೆಗೆ ಕಾರಣ
ಸಿಲಿಂಡರ್ ಬೆಲೆ
ಆಗಸ್ಟ್ ತಿಂಗಳಿನಲ್ಲಿ, ಇಂಡಿಯನ್ ಆಯಿಲ್ ಪ್ರಕಾರ ದೆಹಲಿಯಲ್ಲಿ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಗೆ ರೂ. 498.02 ಮತ್ತು ಸಬ್ಸಿಡಿ ರಹಿತ ರೂ. 789.5 ಆಗಿದೆ.
ಜುಲೈನಲ್ಲಿ ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್ಪಿಜಿ ಬೆಲೆ ರೂ. 2.71 ಹಾಗು ರೂ. 55.50 ಪ್ರತಿ ಸಿಲಿಂಡರ್ ಏರಿಕೆ ಕಂಡಿತ್ತು.
ಜಿಎಸ್ಟಿ ಕಾರಣ
ಜಿಎಸ್ಟಿ ಕಾರಣದಿಂದಾಗಿ ಸಬ್ಸಿಡಿ ಸಹಿತ ಎಲ್ಪಿಜಿ ಗ್ರಾಹಕರ ಮೇಲೆ ಪರಿಣಾಮವೆಂದರೆ ಸಿಲಿಂಡರ್ ಗೆ ರೂ. 1.76 ಮಾತ್ರ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಸೇರಿಸಲಾಗಿದೆ.
ಸಬ್ಸಿಡಿ ಮೊತ್ತ
ಗ್ರಾಹಕರ ಬ್ಯಾಂಕ್ ಖಾತೆಯಲ್ಲಿ ಸಬ್ಸಿಡಿ ಮೊತ್ತ ವರ್ಗಾವಣೆ ಮಾಡುವ ಪ್ರಮಾಣವನ್ನು ಆಗಸ್ಟ್ ತಿಂಗಳಲ್ಲಿ ಪ್ರತಿ ಸಿಲಿಂಡರ್ ಗೆ ರೂ. 291.48 ಹೆಚ್ಚಿಸಲಾಗಿದೆ. ಇದು ಜುಲೈನಲ್ಲಿ ಪ್ರತಿ ಸಿಲಿಂಡರ್ಗೆ ರೂ. 257.74 ಇತ್ತು.
ಸಬ್ಸಿಡಿ ಪಡೆಯುವ ಎಲ್ಪಿಜಿ ಗ್ರಾಹಕರು ಬೆಲೆ ಹೆಚ್ಚಳದಿಂದ ಕೊಂಚ ನೆಮ್ಮದಿ ಪಡೆದಿದ್ದಾರೆ ಎನ್ನಬಹುದು.
ವರ್ಷಕ್ಕೆ 12 ಸಿಲಿಂಡರ್
ದೇಶದಲ್ಲಿನ ಕುಟುಂಬಗಳು ವರ್ಷಕ್ಕೆ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಪಡೆಯಬಹುದಾಗಿದೆ. ಈ ಮಿತಿಯನ್ನು ಮೀರಿದ ನಂತರ ಖರೀದಿಸುವ ಸಿಲಿಂಡರ್ ಗಳನ್ನು ಸಬ್ಸಿಡಿ ರಹಿತವಾಗಿರುತ್ತವೆ.
ಉಜ್ವಲ ಯೋಜನೆ
ಕೇಂದ್ರದ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಉಜ್ವಲ ಯೋಜನೆಯ ಮೂಲಕ 10 ಕೋಟಿ ಮನೆಗಳಿಗೆ ಎಲ್ಪಿಜಿ ಸಂಪರ್ಕ ಒದಗಿಸಿದೆ. ಈ ಯೋಜನೆ ಸಾಕಾರಕ್ಕಾಗಿ ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳು ಕೈಜೋಡಿಸಿವೆ.


Click it and Unblock the Notifications