ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆ

ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಪ್ರಕಾರ ಎರಡು ದಿನ ಬದಲಾಗದೆ ಇದ್ದ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗುರುವಾರ ಹೆಚ್ಚಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಪ್ರಕಾರ ಎರಡು ದಿನ ಬದಲಾಗದೆ ಇದ್ದ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗುರುವಾರ ಹೆಚ್ಚಿವೆ. ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ನೀಡಲಾಗುತ್ತದೆ. ಈ ಸೂಚಿಸಿದ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗುರುವಾರ ಬೆಳಿಗ್ಗೆ 6ರಿಂದ ಅನ್ವಯವಾಗುತ್ತವೆ. ನೀವು ಆನ್ಲೈನ್ ವ್ಯವಹಾರ ಮಾಡುತ್ತಿರಾ? ಹಾಗಿದ್ದರೆ ತಪ್ಪದೇ ಓದಿ..

ಮೆಟ್ರೊ ನಗರ

ಮೆಟ್ರೊ ನಗರ

ಐಒಸಿ ವೆಬ್ಸೈಟ್ iocl.com ಪ್ರಕಾರ ಒಂದು ಲೀಟರ್ ಪೆಟ್ರೋಲ್ ದೆಹಲಿಯಲ್ಲಿ ರೂ. 76.43, ಕೋಲ್ಕತಾದಲ್ಲಿ ರೂ. 79.33, ಮುಂಬೈನಲ್ಲಿ ರೂ. 83.87 ಮತ್ತು ಚೆನ್ನೈನಲ್ಲಿ ರೂ. 79.39, ಮಾರಾಟವಾಗಿದೆ.

ಒಂದು ಲೀಟರ್ ಡೀಸೆಲ್ ಬೆಲೆ ರೂ. 67.93, ಕೋಲ್ಕತಾದಲ್ಲಿ ರೂ. 70.69, ಮುಂಬೈನಲ್ಲಿ ರೂ. 72.12 ಮತ್ತು ಚೆನ್ನೈನಲ್ಲಿ ರೂ. 71.74 ಏರಿಕೆ ಕಂಡಿದೆ.

ಬುಧವಾರ ಪೆಟ್ರೋಲ್ ಡೀಸೆಲ್ ದರ

ಬುಧವಾರ ಪೆಟ್ರೋಲ್ ಡೀಸೆಲ್ ದರ

ಬುಧವಾರ ಪೆಟ್ರೋಲ್ ದರ ಹೊಸ ದೆಹಲಿ ರೂ. 76.31, ಕೋಲ್ಕತಾದಲ್ಲಿ ರೂ. 79.20, ಮುಂಬೈನಲ್ಲಿ ರೂ. 83.76, ಚೆನ್ನೈನಲ್ಲಿ ರೂ. 79.26ರಷ್ಟಿತ್ತು. ಅದೇ ರೀತಿ ಡಿಸೇಲ್ ದರ ದೆಹಲಿಯಲ್ಲಿ ರೂ. 67.82, ಕೋಲ್ಕತಾದಲ್ಲಿ ರೂ. 70.58, ಮುಂಬೈನಲ್ಲಿ ರೂ. 72 ಮತ್ತು ಚೆನ್ನೈನಲ್ಲಿ ರೂ. 71.62ರಷ್ಟಿತ್ತು.

ದರ ಏರಿಕೆ

ದರ ಏರಿಕೆ

ಆದ್ದರಿಂದ, ಪೆಟ್ರೋಲ್ ದರವನ್ನು ದೆಹಲಿಯಲ್ಲಿ 12 ಪೈಸೆ, ಕೋಲ್ಕತಾ ಮತ್ತು ಚೆನ್ನೈನಲ್ಲಿ 13 ಪೈಸೆ ಹಾಗು ಮುಂಬೈನಲ್ಲಿ 11 ಪೈಸೆ ಏರಿಕೆ ಮಾಡಲಾಗಿದೆ. ಡೀಸೆಲ್ ದರವನ್ನು ದೆಹಲಿ ಮತ್ತು ಕೋಲ್ಕತಾದಲ್ಲಿ 12 ಪೈಸೆ ಹಾಗು ಮುಂಬಯಿ ಮತ್ತು ಚೆನ್ನೈನಲ್ಲಿ 11 ಪೈಸೆ ಏರಿಸಿದೆ.

ತೈಲ ಬೆಲೆಗಳ ಏರಿಳಿತಕ್ಕೆ ಕಾರಣ

ತೈಲ ಬೆಲೆಗಳ ಏರಿಳಿತಕ್ಕೆ ಕಾರಣ

ಜಾಗತಿಕ ಕಚ್ಚಾ ತೈಲ ಬೆಲೆಗಳು ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಆಧಾರದ ಮೇಲೆ ಪೆಟ್ರೋಲ್ ಡೀಸೆಲ್ ದರಗಳನ್ನು ನಿರ್ಧರಿಸಲಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಲಗಾಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+