For Quick Alerts
ALLOW NOTIFICATIONS  
For Daily Alerts

ಪೆಪ್ಸಿಕೋ ಸಂಸ್ಥೆಯ ಸಿಇಒ ಹುದ್ದೆಯಿಂದ ಇಂದ್ರಾ ನೂಯಿ ನಿರ್ಗಮನ

ಹನ್ನೆರಡು ವರ್ಷಗಳಿಂದ ವಿಶ್ವದ ಅತಿದೊಡ್ಡ ಆಹಾರ ಮತ್ತು ತಂಪು ಪಾನೀಯ ಕಂಪನಿ ಪೆಪ್ಸಿಕೋ ಸಂಸ್ಥೆಯ ಸಿಇಒ ಕಾರ್ಯನಿರ್ವಹಿಸುತ್ತಿದ್ದ ಇಂದ್ರಾ ನೂಯಿ ಅವರು ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಸಂಸ್ಥೆ ಪ್ರಕಟಿಸಿದೆ.

By Siddu Thoravat
|

ಹನ್ನೆರಡು ವರ್ಷಗಳಿಂದ ವಿಶ್ವದ ಅತಿದೊಡ್ಡ ಆಹಾರ ಮತ್ತು ತಂಪು ಪಾನೀಯ ಕಂಪನಿ ಪೆಪ್ಸಿಕೋ ಸಂಸ್ಥೆಯ ಸಿಇಒ ಕಾರ್ಯನಿರ್ವಹಿಸುತ್ತಿದ್ದ ಇಂದ್ರಾ ನೂಯಿ ಅವರು ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಸಂಸ್ಥೆ ಪ್ರಕಟಿಸಿದೆ.

ಭಾರತೀಯ ಮೂಲದ ಇಂದ್ರಾ ನೂಯಿಯವರು, ಕಳೆದ ಹನ್ನೆರಡು ವರ್ಷಗಳಿಂದ ಪೆಪ್ಸಿಕೋ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು, ಬರುವ ಅಕ್ಟೋಬರ್ ೩ಕ್ಕೆ ಸಿಇಒ ಸ್ಥಾನದಿಂದ ನಿರ್ಗಮಿಸಲಿದ್ದಾರೆ.

ಮುಂದಿನ ಉತ್ತರಾಧಿಕಾರಿ

ಮುಂದಿನ ಉತ್ತರಾಧಿಕಾರಿ

ಪೆಪ್ಸಿಕೋ ಸಂಸ್ಥೆಯ ಅಧ್ಯಕ್ಷ ರಾಮೊನ್‌ ಲಗುವರ್ಟಾ ಅವರು ಇಂದ್ರಾ ನೋಯಿ ಸ್ಥಾನದ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಸಂಸ್ಥೆ ಹೇಳಿದೆ. ನಿರ್ದೇಶಕ ಮಂಡಳಿ ರಾಮೊನ್‌ ಲಗುವರ್ಟಾ ಅವರನ್ನುಷ ಅವಿರೋಧವಾಗಿ ಆಯ್ಕೆ ಮಾಡಿದೆ ಎಂದು ಸಂಸ್ಥೆ ತಿಳಿಸಿದೆ. ಇಂದ್ರಾ ನೂಯಿ ಕಳೆದ 24 ವರ್ಷದಿಂದ ಪೆಪ್ಸಿಕೋ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 12 ವರ್ಷದಿಂದ ಸಿಇಒ ಆಗಿದ್ದಾರೆ.

ಇಂದ್ರಾ ನೂಯಿ ಹೇಳಿದ್ದೇನು?

ಇಂದ್ರಾ ನೂಯಿ ಹೇಳಿದ್ದೇನು?

ಇಂದ್ರಾ ನೂಯಿ 1994ರಲ್ಲಿ ಹಿರಿಯ ಉಪಾಧ್ಯಕ್ಷೆಯಾಗಿ ಯೋಜನೆ ವಿಭಾಗದಲ್ಲಿ ಪೆಪ್ಸಿಕೋ ಸೇರಿದ್ದರು.
ಅವರ ಅಭಿಪ್ರಾಯಗಳನ್ನು ಟ್ವಿಟರ್‌ನಲ್ಲಿ ಹೇಳಿದ್ದು, ರಾಮೊನ್‌ ಅತ್ಯಂತ ಅರ್ಹ ವ್ಯಕ್ತಿಯಾಗಿದ್ದು, ಅವರ ಆಡಳಿತದಿಂದ ಸಂಸ್ಥೆ ಇನ್ನಷ್ಟು ಉತ್ತಮ ಬೆಳವಣಿಗೆ ಕಾಣಲಿದೆ. ಈ ದಿನ ನನಗೆ ಸಮ್ಮಿಶ್ರ ಭಾವನೆಗಳ ದಿನವಾಗಿದೆ ಎಂದು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

ವಿಶ್ವದ ಪ್ರಭಾವಿ ಮಹಿಳೆ

ವಿಶ್ವದ ಪ್ರಭಾವಿ ಮಹಿಳೆ

ಭಾರತ ಮೂಲದ ಇಂದ್ರಾ ನೂಯಿ ಜಗತ್ತಿನ ಅತಿದೊಡ್ಡ ಸಂಸ್ಥೆ ಸಿಇಒ ಆಗಿ ಮುನ್ನಡೆಸಿರುವುದು ಹೆಗ್ಗಳಿಕೆಯಾಗಿದೆ. ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.

Read more about: finance news money business
English summary

PepsiCo CEO Indra Nooyi to step down

Long-serving PepsiCo chief executive officer (CEO) Indra Nooyi is going to step down from her position.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X