For Quick Alerts
ALLOW NOTIFICATIONS  
For Daily Alerts

ಜಿಯೋಗೆ ತಿರುಗೇಟು! ಏರ್ಟೆಲ್ ವಿ-ಫೈಬರ್ ಐತಿಹಾಸಿಕ ಆಫರ್.. 3 ತಿಂಗಳು ಅನಿಯಮಿತ ಡೇಟಾ, ಉಚಿತ ಕರೆ, HD ವಿಡಿಯೋ ಸೌಲಭ್ಯ

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ವಿ ಫೈಬರ್ ಸೂಪರ್ ಫಾಸ್ಟ್ ಬ್ರಾಡ್ಬ್ಯಾಂಡ್ ಸೇವೆ ಮೂಲಕ ಜಿಯೋಗೆ ಟಕ್ಕರ್ ನೀಡಲು ಮುಂದಾಗಿದೆ.

By Siddu
|

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ವಿ ಫೈಬರ್ ಸೂಪರ್ ಫಾಸ್ಟ್ ಬ್ರಾಡ್ಬ್ಯಾಂಡ್ ಸೇವೆ ಮೂಲಕ ಜಿಯೋಗೆ ಟಕ್ಕರ್ ನೀಡಲು ಮುಂದಾಗಿದೆ.

ರಿಲಯನ್ಸ್ ಜಿಯೋ ಸಂಸ್ಥೆಯ ಮಹತ್ವಾಕಾಂಕ್ಷೆಯ FTTH ಸೇವೆ Jio GigaFiber ಪ್ರಾರಂಭವಾಗುವ ಮುನ್ನ, ದೇಶದ ಅತಿ ದೊಡ್ಡ ಪ್ರತಿಸ್ಪರ್ಧಿ ಏರ್ಟೆಲ್ ವಿ-ಫೈಬರ್ ಎಂಬ ತನ್ನದೇ ಆದ ನವೀಕರಿಸಿದ FTTH ಸೇವೆಯನ್ನು ಪ್ರಾರಂಭಿಸಿದೆ.
ಇದೀಗ ಜಿಯೋಗೆ ಟಾಂಗ್ ನೀಡುವುದಕ್ಕಾಗಿ ಏರ್ಟೆಲ್ ವಿ ಫೈಬರ್ ಅತ್ಯುತ್ತಮ ಪ್ಲಾನ್ ಲಾಂಚ್ ಮಾಡುತ್ತಿದೆ.

ಏರ್ಟೆಲ್ ಬೆಸ್ಟ್!

ಏರ್ಟೆಲ್ ಬೆಸ್ಟ್!

ರಿಲಯನ್ಸ್ ಜಿಯೊಗೆ ಹೋಲಿಸಿದರೆ, ಏರ್ಟೆಲ್ ಸಂಸ್ಥೆಯು ಈಗಾಗಲೇ ಎರಡು ವರ್ಷದಿಂದ ಸೇವೆಪ್ರಾರಂಭಿಸಿದೆ. ಜೊತೆಗ ತನ್ನದೇ FTTH ಸೇವೆಗೆ ಅನುಭವವನ್ನು ಹೊಂದಿದೆ.

ಏರ್ಟೆಲ್ ವಿ ಫೈಬರ್

ಏರ್ಟೆಲ್ ವಿ ಫೈಬರ್

ಏರ್ಟೆಲ್ ಕಂಪನಿ ಈಗಾಗಲೇ ಎರಡು ವರ್ಷಗಳಿಂದ ಮನೆ ಮತ್ತು ಕಚೇರಿಗಳಿಗೆ ಇಂಟರ್ನೆಟ್ ಮತ್ತು ಬ್ರಾಡ್ಬ್ಯಾಂಡ್ ಸೇವೆ ಒದಗಿಸುತ್ತಿದೆ. ಈಗ ಅದೇ ಯೋಜನೆಯನ್ನು ಜಿಯೋಗೆ ಟಕ್ಕರ್ ನೀಡಲು ನವೀಕರಿಸಿದೆ.
ಏರ್ಟೆಲ್ ವಿ ಫೈಬರ್ 1000Mbps ವೇಗದ ಸಾಮರ್ಥ್ಯ ಹೊಂದಿದ್ದು, ಹಲವು ನವೀನ ಸಾಧನಗಳನ್ನು ಅಳವಡಿಸಿದೆ. ಇದರಿಂದ ಗ್ರಾಹಕರು ಹೈಸ್ಪೀಡ್ ಇಂಟರ್ನೆಟ್ ಸೇವೆಯನ್ನು ಪಡೆಯಬಹುದಾಗಿದೆ.

ಏರ್ಟೆಲ್ ವಿ ಫೈಬರ್ ಲಭ್ಯತೆ
 

ಏರ್ಟೆಲ್ ವಿ ಫೈಬರ್ ಲಭ್ಯತೆ

ಏರ್ಟೆಲ್ ವಿ ಫೈಬರ್ ಸೇವೆ ಪ್ರಸ್ತುತ ದೇಶದಾದ್ಯಂತ 30 ನಗರಗಳಲ್ಲಿ ಲಭ್ಯವಿದೆ. ಸದ್ಯ ವಿ ಫೈಬರ್ ಸಂಪೂರ್ಣ ಸೇವೆ ತಮಿಳುನಾಡಿನಲ್ಲಿ ಮಾತ್ರ ಲಭ್ಯವಿದೆ. ಈ ಯೋಜನೆಯನ್ನು ದೇಶದ 87 ನಗರಗಳಲ್ಲಿ ಜಾರಿಗೊಳಿಸಲು ಏರ್ಟೆಲ್ ಚಿಂತನೆ ನಡೆಸಿದೆ. ಇದರ ವಿಸ್ತರಣೆಗಾಗಿ ಟೈರ್ 2 ಮತ್ತು ಟೈರ್ 3 ನಗರಗಳು ಎಂಬ ಎರಡು ಪಟ್ಟಿಯನ್ನು ಸಿದ್ಧಪಡಿಸಿದೆ.

ವಿ ಫೈಬರ್ ಅನಿಯಮಿತ ಸೇವೆಗಳು

ವಿ ಫೈಬರ್ ಅನಿಯಮಿತ ಸೇವೆಗಳು

ಏರ್ಟೆಲ್ ವಿ ಫೈಬರ್ ಮೂಲಕ ಗ್ರಾಹಕರಿಗೆ ವೆಲ್ಕಮ್ ಆಫರ್ ಅಡಿಯಲ್ಲಿ ಮೂರು ತಿಂಗಳವರೆಗೆ ಉಚಿತ ಡೇಟಾ ಸಿಗಲಿದೆ. ಮೂರು ತಿಂಗಳವರೆಗೆ ಯಾವುದೇ ನೆಟ್ವರ್ಕ್ ಗೆ ಉಚಿತ ಕರೆಗಳು, ಅತೀವೇಗದ ಇಂಟರ್ನೆಟ್, HD ವಿಡಿಯೋ, ಉಚಿತ ಫೈಲ್ ಡೌನ್ಲೋಡಿಂಗ್ ಸೇವೆ ಪಡೆಯಬಹುದಾಗಿದೆ. ಇತರೆ ಗ್ರಾಹಕರು ಕೂಡ ಏರ್ಟೆಲ್ ವಿ ಫೈಬರ್ ಪ್ಲಾನ್ ಆನಂದಿಸಬಹುದಾಗಿದೆ.

ಏರ್ಟೆಲ್ ವಿ ಫೈಬರ್ ಮೊಡೆಮ್ ಪಡೆಯುವುದು ಹೇಗೆ?

ಏರ್ಟೆಲ್ ವಿ ಫೈಬರ್ ಮೊಡೆಮ್ ಪಡೆಯುವುದು ಹೇಗೆ?

ಏರ್ಟೆಲ್ ವಿ ಫೈಬರ್ ಚಂದಾದಾರಿಕೆಗಾಗಿ, ನೀವು ಏರ್ಟೆಲ್ ವಿ ಫೈಬರ್ ಹೊಸ ಮೋಡೆಮ್ ಪಡೆಯಬೇಕು.
ಏರ್ಟೆಲ್ ನ ಹಳೆಯ ಬ್ರಾಡ್ಬ್ಯಾಂಡ್ ಗ್ರಾಹಕರು ತಮ್ಮ ಮೋಡೆಮ್ ನ್ನು ಸಕ್ರಿಯಗೊಳಿಸಬೇಕು. ಅಂದರೆ ನಿಮ್ಮ ಮೋಡೆಮ್ ಅನ್ನು ಏರ್ಟೆಲ್ ವಿ ಫೈಬರ್ ಮೋಡೆಮ್ ಗೆ ಸಕ್ರಿಯಗೊಳಿಸಬೇಕಾಗಿದೆ. ಹೊಸ ಮೋಡಮ್ ಪಡೆಯಲು ಏರ್ಟೆಲ್ ರು. 1000 ಶುಲ್ಕ ಪಾವತಿಸಬೇಕು. ಆದರೆ ಏರ್ಟೆಲ್ ವಿ ಫೈಬರ್ ನೆಟ್ವರ್ಕ್ ಗೆ ಅಪ್ಗ್ರೇಡ್ ಮಾಡುವುದು ಉಚಿತವಾಗಿದೆ.

ಏರ್ಟೆಲ್ ವಿ ಫೈಬರ್ ಪ್ಲಾನ್

ಏರ್ಟೆಲ್ ವಿ ಫೈಬರ್ ಪ್ಲಾನ್

ರೂ. 999 ರಿಂದ ಶುರುವಾಗುವ ವಿ ಫೈಬರ್ ಪ್ಲಾನ್ ರೂ. 4999 ವರೆಗೂ ಇದೆ. 50 ಜಿಬಿ ಡೇಟಾದಿಂದ 1000 ಜಿಬಿ ಡೇಟಾವರೆಗಿನ FUP ಇನ್ನು ಕೆಲವೇ ದಿನದಲ್ಲಿ ಜಾರಿಗೆ ಬರಲಿದೆ.
ರು. 999 ವಿ ಫೈಬರ್ ಯೋಜನೆ ಹೊರತುಪಡಿಸಿದಂತೆ ಉಳಿದ ಎಲ್ಲಾ ಏರ್ಟೆಲ್ ವಿ ಫೈಬರ್ ಯೋಜನೆಗಳು ಅನಿಯಮಿತ ಧ್ವನಿ ಕರೆ(ಲೋಕಲ್, ಎಸ್ಟಿಡಿ ಮತ್ತು ನ್ಯಾಷನಲ್ ರೋಮಿಂಗ್)ಒದಗಿಸಲಿದೆ.

ಶೀಘ್ರದಲ್ಲಿ ಸೇವೆ ಲಭ್ಯ

ಶೀಘ್ರದಲ್ಲಿ ಸೇವೆ ಲಭ್ಯ

ಏರ್ಟೆಲ್ ವಿ ಫೈಬರ್ ಸೇವೆ ಈಗ ಚೆನ್ನೈ ಮತ್ತು ತಮಿಳುನಾಡು ವಲಯದಲ್ಲಿ ಚಾಲ್ತಿಯಲ್ಲಿದೆ. ಭಾರತದಾದ್ಯಂತ 87 ನಗರಗಳು ಒಳಗೊಂಡಂತೆ ದೆಹಲಿ, ಎನ್.ಸಿ.ಆರ್ ಮತ್ತು ಬೆಂಗಳೂರಿನಲ್ಲಿ ಶೀಘ್ರದಲ್ಲೇ ವಿ ಫೈಬರ್ ಸೇವೆಯನ್ನು ಪ್ರಾರಂಭಿಸಲಾಗುವುದು.

English summary

Airtel V-Fiber: Free Unlimited Data, Free Call, HD video For 3 Months

Airtel biggest rival in the country has launched its own upgraded FTTH service called Airtel V-Fiber.
Story first published: Wednesday, August 8, 2018, 12:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X