For Quick Alerts
ALLOW NOTIFICATIONS  
For Daily Alerts

ವೊಡಾಫೋನ್ ರೂ. 99 ಪ್ಲಾನ್ ಮೂಲಕ ಅನಿಯಮಿತ ಕರೆ ಸೌಲಭ್ಯ

ರಿಲಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಗ್ರಾಹಕರಿಗೆ ಉಚಿತ ಮತ್ತು ಅತಿ ಕಡಿಮೆ ಬೆಲೆಗೆ ಧ್ವನಿ ಕರೆ, ಡೇಟಾ ಸೌಲಭ್ಯ ನೀಡುವುದರ ಸಂಚಲನ ಉಂಟು ಮಾಡಿತು.

By Siddu Thoravat
|

ರಿಲಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಗ್ರಾಹಕರಿಗೆ ಉಚಿತ ಮತ್ತು ಅತಿ ಕಡಿಮೆ ಬೆಲೆಗೆ ಧ್ವನಿ ಕರೆ, ಡೇಟಾ ಸೌಲಭ್ಯ ನೀಡುವುದರ ಸಂಚಲನ ಉಂಟು ಮಾಡಿತು.

 

ಅಲ್ಲಿಯವರೆಗೆ ಇಂತಹ ಯಾವುದೇ ಆಫರ್ ನೀಡದ ಏರ್ಟೆಲ್, ವೊಡಾಫೋನ್, ಐಡಿಯಾ, ಬಿಎಸ್ಎನ್ಎಲ್ ನಂತಹ ಕಂಪನಿಗಳ ಮೇಲೆ ಪರಿಣಾಮ ಬೀರಿತು.

ತನ್ನ ಗ್ರಾಹಕರನ್ನು ಉಳಿಸುವ ಹಾಗು ನೂತನ ಆಫರ್ ಮೂಲಕ ಸೆಳೆಯುವ ಸವಾಲು ಈ ಕಂಪನಿಗಳಿಗೆ ಎದುರಾಯಿತು. ತದನಂತರ ಆರಂಭವಾದದ್ದೆ ದರ ಸಮರ!
ಇದೀಗ ಜಿಯೋಗೆ ತಿರುಗೇಟು ನೀಡಲು ಏರ್ಟೆಲ್, ವೊಡಾಫೋನ್, ಬಿಎಸ್ಎನ್ಎಲ್, ಐಡಿಯಾ ಸಂಸ್ಥೆಗಳು ಹೊಸ ಆಕರ್ಷಕ ಪ್ಲಾನ್ ಗಳನ್ನು ಜಾರಿಗೆ ತರುತ್ತಿವೆ.

ರೂ. 99 ಪ್ಲಾನ್

ರೂ. 99 ಪ್ಲಾನ್

ವೋಡಾಫೋನ್ ಪ್ರೀಪೇಯ್ಡ್ ಗ್ರಾಹಕರಿಗಾಗಿ ರೂ. 99 ಅನಿಯಮಿತ ಕರೆ ಪ್ಲಾನ್ ಆರಂಭಿಸಿದೆ. ಈ ಪ್ಲಾನ್ ಅಡಿಯಲ್ಲಿ ಗ್ರಾಹಕರು ದಿನಕ್ಕೆ 250 ನಿಮಿಷ ಹಾಗೂ ಒಂದು ವಾರಕ್ಕೆ 1,000 ನಿಮಿಷ ಉಚಿತ ಕರೆ ಮಾಡಬಹುದಾಗಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ. ಡೇಟಾ ಹಾಗೂ ಎಸ್ಎಂಎಸ್ ಸೌಲಭ್ಯ ಇರುವುದಿಲ್ಲ.

ಜಿಯೋಗೆ ಟಕ್ಕರ್

ಜಿಯೋಗೆ ಟಕ್ಕರ್

ವೋಡಾಫೋನ್ ಈ ಪ್ಲಾನ್ ಮೂಲಕ ಜಿಯೋ ನೀಡುತ್ತಿರುವ ರೂ. 98 ಪ್ಲಾನ್ ಗೆ ಟಕ್ಕರ್ ನೀಡಲಿದೆ. ಜಿಯೋ ತನ್ನ ಪ್ಲಾನ್ ನಲ್ಲಿ ಕರೆ ಜೊತೆ ಗ್ರಾಹಕರಿಗೆ ಡೇಟಾ ನೀಡುತ್ತಿದ್ದರೆ, ವೊಡಾಫೋನ್ ಡೇಟಾ ಹಾಗೂ ಎಸ್ಎಂಎಸ್ ಸೌಲಭ್ಯ ನೀಡುತ್ತಿಲ್ಲ.

ರೀಚಾರ್ಜ್ ಹೇಗೆ?
 

ರೀಚಾರ್ಜ್ ಹೇಗೆ?

ವೋಡಾಫೋನ್ ಅಧಿಕೃತ ಆಪ್ ಹಾಗೂ ವೆಬ್ಸೈಟ್ ನಲ್ಲಿ ಈ ಪ್ಲಾನ್ ಖರೀದಿಸಬಹುದಾಗಿದೆ. ಪೇಟಿಎಂ, ಮೊಬಿಕ್ವಿಕ್ ಮೂಲಕ ರೀಚಾರ್ಜ್ ಮಾಡಲು ಸಾಧ್ಯವಿಲ್ಲ.

Read more about: vodafone telecom finance news jio
English summary

Vodafone Rs. 99 Recharge Offers Unlimited Calls

Rs. 99 Vodafone recharge pack has been launched to offer bundled calls to prepaid subscribers of the operator.
Story first published: Monday, August 13, 2018, 19:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X