For Quick Alerts
ALLOW NOTIFICATIONS  
For Daily Alerts

ಫ್ಲಿಪ್ಕಾರ್ಟ್ ಫ್ಲಸ್ ಯೋಜನೆ ಆರಂಭ! ಗ್ರಾಹಕರಿಗೆ ಸಿಗಲಿರುವ ಸೌಲಭ್ಯಗಳೇನು ಗೊತ್ತೆ?

ಜಗತ್ತಿನ ದೈತ್ಯ ಸಂಸ್ಥೆ ಅಮೆಜಾನ್ ಸಂಸ್ಥೆಯ ಅಮೆಜಾನ್ ಪ್ರೈಂ ಕಾರ್ಯಕ್ರಮದಂತೆ ಫ್ಲಿಪ್ಕಾರ್ಟ್ ಪ್ಲಸ್ ಯೋಜನೆ ಮೂಲಕ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡುವುದು ಇದರ ಉದ್ದೇಶವಾಗಿದೆ.

By Siddu
|

ಇ-ಕಾಮರ್ಸ್ ವಲಯದ ದೈತ್ಯ ಸಂಸ್ಥೆ ಫ್ಲಿಪ್ಕಾರ್ಟ್ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ! ಶೂನ್ಯ ಶುಲ್ಕ ಸದಸ್ಯತ್ವ (zero fee membership) ನೀಡಲು ಫ್ಲಿಪ್ಕಾರ್ಟ್ ಫ್ಲಸ್ ಯೋಜನೆ ಆರಂಭಿಸಿದೆ.

 

ಜಗತ್ತಿನ ದೈತ್ಯ ಸಂಸ್ಥೆ ಅಮೆಜಾನ್ ಸಂಸ್ಥೆಯ ಅಮೆಜಾನ್ ಪ್ರೈಂ ಕಾರ್ಯಕ್ರಮದಂತೆ ಫ್ಲಿಪ್ಕಾರ್ಟ್ ಪ್ಲಸ್ ಯೋಜನೆ ಮೂಲಕ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡುವುದು ಇದರ ಉದ್ದೇಶವಾಗಿದೆ.

ಅಮೆಜಾನ್ ಶುಲ್ಕ 999

ಅಮೆಜಾನ್ ಶುಲ್ಕ 999

ಅಮೆಜಾನ್ ಪ್ರೈಂ ಯೋಜನೆಯ ಸದಸ್ಯತ್ವ ಪಡೆಯಲು ಗ್ರಾಹಕರು ವರ್ಷಕ್ಕೆ 999 ರೂಪಾಯಿ ನೀಡಬೇಕು. ಆದರೆ ಫ್ಲಿಪ್ಕಾರ್ಟ್ ಸದಸ್ಯತ್ವ ಉಚಿತವಾಗಿದೆ. ಅಮೆಜಾನ್ ಪ್ರೈಮ್ ನಲ್ಲಿ ಒಂದೇ ದಿನದಲ್ಲಿ ಉಚಿತವಾಗಿ ಡಿಲೆವರಿ, ಡಿಸ್ಕೌಂಟ್ ಸೇಮ್ ಡೇ ಡಿಲೆವರಿ, ಎಕ್ಸ್ ಕ್ಲ್ಯೂಸಿವ್ ಡೀಲ್ಸ್, ಪ್ರೈಂ ವಿಡಿಯೋ, ಮ್ಯೂಸಿಕ್, ಸಿನಿಮಾ ಸೇರಿದಂತೆ ಅನೇಕ ಸೌಲಭ್ಯ ಗ್ರಾಹಕರು ಪಡೆಯಬಹುದಾಗಿದೆ.

ಫ್ಲಿಪ್ಕಾರ್ಟ್ ಶೂನ್ಯ ಶುಲ್ಕ

ಫ್ಲಿಪ್ಕಾರ್ಟ್ ಶೂನ್ಯ ಶುಲ್ಕ

ಫ್ಲಿಪ್ಕಾರ್ಟ್ ಪ್ಲಸ್ ಸದಸ್ಯತ್ವಕ್ಕೆ ಹಣ ಪಾವತಿಸಬೇಕಿಲ್ಲ. ಫ್ಲಿಪ್ಕಾರ್ಟ್ ಫ್ಲಸ್ ಸದಸ್ಯತ್ವ ಪಡೆದವರು ಕೂಡ ಈ ಎಲ್ಲ ಸೌಲಭ್ಯ ಪಡೆಯಲಿದ್ದು, ಫ್ಲಿಪ್ಕಾರ್ಟ್ ಹಿಂದೆಯೇ ಫ್ಲಿಪ್ಕಾರ್ಟ್ ಪ್ಲಸ್ ಕಾರ್ಯಕ್ರಮ ಘೋಷಣೆ ಮಾಡಿತ್ತು. ಆದರೆ ಸ್ವಾತಂತ್ರ್ಯ ದಿನಾಚರಣೆಯಂದು ಅಧಿಕೃತವಾಗಿ ಚಾಲನೆ ನೀಡಿದೆ.

ಸದಸ್ಯತ್ವ ಅವಧಿ, ವಿಶೇಷ
 

ಸದಸ್ಯತ್ವ ಅವಧಿ, ವಿಶೇಷ

ಫ್ಲಿಪ್ಕಾರ್ಟ್ ಸದಸ್ಯತ್ವ ಅವಧಿಯು ಆಗಸ್ಟ್ 15, 2019 ರವರೆಗೆ ಇರಲಿದೆ. ಈ ಮೂಲಕ ಮೂರು ಕೋಟಿಗಿಂತ ಹೆಚ್ಚು ಉತ್ಪನ್ನಗಳ ಉಚಿತ ಹಾಗೂ ಶೀಘ್ರ ವಿತರಣೆಯ ಲಾಭವನ್ನು ಗ್ರಾಹಕರು ಪಡೆಯಲಿದ್ದಾರೆ. ರೂ. 250 ಮೌಲ್ಯದ ವಸ್ತುಗಳನ್ನು ಖರೀದಿ ಮಾಡಿದರೆ ನಾಣ್ಯ ಸಿಗಲಿದೆ. ಒಂದೇ ಸಮಯದಲ್ಲಿ 10 ನಾಣ್ಯ ಪಡೆಯಬಹುದಾಗಿದೆ. ಈ ನಾಣ್ಯಗಳನ್ನು ಮತ್ತೊಮ್ಮೆ ಶಾಪಿಂಗ್ ಮಾಡುವಾಗ ಬಳಸಬಹುದಾಗಿದೆ.

Read more about: amazon flipkart finance news money
English summary

Flipkart Plus: Know membership eligibility, benefits and other details

Flipkart has launched its zero fee membership program 'Flipkart Plus'.
Story first published: Friday, August 17, 2018, 14:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X