For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ 8 ಲಕ್ಷ ಕೋಟಿ ಷೇರು ಮೌಲ್ಯ ದಾಟಿದ ದೇಶದ ಮೊದಲ ಕಂಪನಿ

ದೇಶದ ಅತಿದೊಡ್ಡ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಕೇಶ್ ಅಂಬಾನಿ ಇನ್ನೊಂದು ಮೈಲಿಗಲ್ಲು ಮುಟ್ಟಿದ್ದಾರೆ. ರಿಲಯನ್ಸ್ ಇಂಡಸ್ರ್ಟೀಸ್ 8 ಲಕ್ಷ ಕೋಟಿ ಷೇರುಪೇಟೆ ಬಂಡವಾಳ ಹೊಂದಿರುವ ದೇಶದ ಮೊದಲ ಸಂಸ್ಥೆ.

By Siddu Thoravat
|

ದೇಶದ ಅತಿದೊಡ್ಡ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಕೇಶ್ ಅಂಬಾನಿ ಇನ್ನೊಂದು ಮೈಲಿಗಲ್ಲು ಮುಟ್ಟಿದ್ದಾರೆ. ರಿಲಯನ್ಸ್ ಇಂಡಸ್ರ್ಟೀಸ್ 8 ಲಕ್ಷ ಕೋಟಿ ಷೇರುಪೇಟೆ ಬಂಡವಾಳ ಹೊಂದಿರುವ ದೇಶದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊದಲ ಬಾರಿ ಭಾರತದ ಕಂಪನಿಯೊಂದು ಹೊಸ ದಾಖಲೆ ನಿರ್ಮಿಸಿದ್ದು, ಟಿಸಿಎಸ್ ನೊಂದಿಗೆ ನೇರ ಸ್ಪರ್ಧೆ ಉಂಟಾಗಿದೆ. ಎರಡನೇ ಸ್ಥಾನದಲ್ಲಿರುವ ಟಿಸಿಎಸ್ ರೂ. 7.79 ಲಕ್ಷ ಕೋಟಿ ಷೇರು ಮೌಲ್ಯ ಹೊಂದಿದೆ.

ಷೇರು ದರ ಏರಿಕೆ

ಷೇರು ದರ ಏರಿಕೆ

ಸ್ವಾತಂತ್ರ್ಯ ದಿನಾಚರಣೆ ನಂತರ ರಿಲಯನ್ಸ್ ಜಿಯೋ ಗಿಗಾ ಫೈಬರ್ ಹಾಗು ಜಿಯೋಫೋನ್ ೨ ಬಿಡುಗಡೆಗೊಳಿಸಿದ ನಂತರ ಷೇರು ದರಗಳು ಹೆಚ್ಚಿವೆ. ರಿಲಯನ್ಸ್ ಷೇರು ದರ ಶೇ. 1.86 ಏರಿಕೆ ಕಂಡಿದ್ದು, ರೂ. 1,269.70 ರಷ್ಟಿದೆ. ಸಂಸ್ಥೆಯ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, ಸೆನ್ಸೆಕ್ಸ್ ನಲ್ಲಿ ಮುನ್ನಡೆ ಕಂಡಿದೆ.

ಷೇರು ಮೌಲ್ಯ ಹೆಚ್ಚಳಕ್ಕೆ ಕಾರಣ

ಷೇರು ಮೌಲ್ಯ ಹೆಚ್ಚಳಕ್ಕೆ ಕಾರಣ

ಜಿಯೋಗಿಗಾ ಫೈಬರ್ ಬ್ರಾಡ್‌ಬ್ಯಾಂಡ್‌ ಸೇವೆ ಹಾಗು ಜಿಯೋ ಫೋನ್‌-2ಗಳು ಮಾರುಕಟ್ಟೆಗೆ ಬಂದ ಬಳಿಕ ಹೂಡಿಕೆದಾರರು ರಿಲಾಯನ್ಸ್‌ ಷೇರು ಖರೀದಿಗೆ ಹೆಚ್ಚು ಆಸಕ್ತರಾಗಿದ್ದಾರೆ. ಉತ್ತಮ ದರದಲ್ಲಿ ಉತ್ತಮ ಯೋಜನೆಗಳನ್ನು ಪರಿಚಯಿಸುತ್ತಿರುವುದು ಮಾರುಕಟ್ಟೆಯಲ್ಲಿ ಹೆಚ್ಚು ವಿಶ್ವಾಸ ಗಳಿಸಿಕೊಳ್ಳಲು ಸಹಕಾರಿಯಾಗಿದೆ.

ಲಾಭದಲ್ಲಿ ಭಾರೀ ಏರಿಕೆ

ಲಾಭದಲ್ಲಿ ಭಾರೀ ಏರಿಕೆ

ರಿಲಯನ್ಸ್ ಜಿಯೋ ಜೂನ್‌ ತ್ರೈಮಾಸಿಕದಲ್ಲಿರೂ. 612 ಕೋಟಿ ಹೊಂದಿರುವುದು ವರದಿಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಶೇ. 19.9 ರಷ್ಟು ಬೆಳವಣಿಗೆ ಕಂಡಿದೆ. ಟ್ರಾಯ್‌ ಅಂಕಿ-ಅಂಶಗಳ ಪ್ರಕಾರ ಜಿಯೋಗೆ 9.71 ದಶಲಕ್ಷ ಬಳಕೆದಾರರು ಸೇರಿಕೊಂಡಿದ್ದಾರೆ.

English summary

RIL first Indian company to cross ₹ 8 trillion market cap

RIL share prices rose 1.86% to close at a record high of Rs 1,269.70 on BSE, pegging its market cap at ₹ 8.05 trillion
Story first published: Friday, August 24, 2018, 13:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X