For Quick Alerts
ALLOW NOTIFICATIONS  
For Daily Alerts

ಐಡಿಯಾ, ವೋಡಾಫೋನ್ ವಿಲೀನ: ಮೊದಲ ಸ್ಥಾನ ಕಳೆದುಕೊಂಡ ಏರ್ಟೆಲ್

ದೂರಸಂಪರ್ಕ ವಲಯದಲ್ಲಿ ಕಳೆದ 15 ವರ್ಷಗಳಿಂದ ಏರ್ಟೆಲ್ ಮೊದಲ ಸ್ಥಾನದಲ್ಲಿತ್ತು. ಐಡಿಯಾ, ವೋಡಾಫೋನ್ ವಿಲೀನದ ನಂತರ ಮೊದಲ ಸ್ಥಾನ ಇವುಗಳ ಪಾಲಾಗಿದೆ. ಈ ಎರಡೂ ಕಂಪನಿಗಳು 44 ಕೋಟಿ ಗ್ರಾಹಕರನ್ನು ಹೊಂದಿವೆ.

By Siddu
|

ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಅತಿದೊಡ್ಡ ಸಂಸ್ಥೆಯಾಗಿ ಕಳೆದ ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಏರ್ಟೆಲ್ ಮೊದಲ ಸ್ಥಾನ ಕಳೆದುಕೊಂಡಿದೆ. ಜಿಯೋ ಪ್ರವೇಶಾತಿ ನಂತರ ಟೆಲಿಕಾಂ ವಲಯದಲ್ಲಿ ಭಾರೀ ಪೈಪೋಟಿಯೊಂದಿಗೆ ದರ ಸಮರ ಏರ್ಪಟ್ಟಿತ್ತು. ಜಿಯೋ ನೀಡಿದ ಅಗ್ಗದ ಹಾಗು ಉಚಿತ ಆಫರ್ ಗಳಿಂದಾಗಿ ಉಳಿದ ಕಂಪನಿಗಳಿಗೆ ಭಾರೀ ಹೊಡೆತ ಬಿದ್ದು, ಹಿನ್ನಡೆಯುಂಟಾಗಿದೆ.

ಹೀಗಾಗಿ ಪ್ರಮುಖ ಟೆಲಿಕಾಂ ಕಂಪನಿಗಳು ಜಿಯೋಗೆ ಪೈಪೋಟಿ ನೀಡಲು ಅಗ್ಗದ ಆಫರ್ ಹಾಗು ಬೇರೆ ಕಂಪನಿಗಳೊಂದಿಗೆ ವಿಲೀನ ಆಗುವುದಕ್ಕೆ ಮುಂದಾದವು.

ವೋಡಾಫೋನ್, ಐಡಿಯಾ ಒಪ್ಪಂದ

ವೋಡಾಫೋನ್, ಐಡಿಯಾ ಒಪ್ಪಂದ

ಜಿಯೋಗೆ ಎದುತರೇಟು ನೀಡಲು ಮಾರ್ಚ್ 20, 2017 ರಲ್ಲಿ ವೋಡಾಫೋನ್ ಹಾಗೂ ಐಡಿಯಾ ಮಹತ್ವದ ನಿರ್ಧಾರ ತೆಗೆದುಕೊಂಡು, ವಿಲೀನ ಒಪ್ಪಂದ ಘೋಷಣೆ ಮಾಡಿದ್ದವು. ಇದೀಗ ಅಧಿಕೃತ ಒಪ್ಪಿಗೆ ಸಿಕ್ಕಿದ್ದು, ವೋಡಾಫೋನ್ ಹಾಗೂ ಐಡಿಯಾ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ.

ಐಡಿಯಾ, ವೋಡಾಫೋನ್ ನಂಬರ್ ಒನ್

ಐಡಿಯಾ, ವೋಡಾಫೋನ್ ನಂಬರ್ ಒನ್

ದೂರಸಂಪರ್ಕ ವಲಯದಲ್ಲಿ ಕಳೆದ 15 ವರ್ಷಗಳಿಂದ ಏರ್ಟೆಲ್ ಮೊದಲ ಸ್ಥಾನದಲ್ಲಿತ್ತು. ಐಡಿಯಾ, ವೋಡಾಫೋನ್ ವಿಲೀನದ ನಂತರ ಮೊದಲ ಸ್ಥಾನ ಇವುಗಳ ಪಾಲಾಗಿದೆ. ಈ ಎರಡೂ ಕಂಪನಿಗಳು 44 ಕೋಟಿ ಗ್ರಾಹಕರನ್ನು ಹೊಂದಿವೆ.

ಐಡಿಯಾ ಷೇರು ಏರಿಕೆ, ಏರ್ಟೆಲ್ ಷೇರು ಇಳಿಕೆ

ಐಡಿಯಾ ಷೇರು ಏರಿಕೆ, ಏರ್ಟೆಲ್ ಷೇರು ಇಳಿಕೆ

ಐಡಿಯಾ, ವೋಡಾಫೋನ್ ಅಧಿಕೃತ ಒಪ್ಪಿಗೆ ನಂತರ ಐಡಿಯಾ ಕಂಪನಿಯ ಷೇರು ದರದಲ್ಲಿ ಏರಿಕೆಯಾಗಿದೆ. ಶುಕ್ರವಾರ ಶೇ. 1.81 ರಷ್ಟು ಹೆಚ್ಚಳದೊಂದಿಗೆ ಷೇರು ಬೆಲೆ ರೂ. 50.75 ಆಗಿದೆ. ಏರ್ಟೆಲ್ ಷೇರಿನಲ್ಲಿ ಶೇ. 0.25 ರಷ್ಟು ಇಳಿಕೆ ಕಂಡು, ಷೇರು ಬೆಲೆ ರೂ. 382.75 ರಷ್ಟಿದೆ.

Read more about: airtel idea vodafone telecom business
English summary

Idea and Vodafone Merge: Airtel Lost first place

Airtel is no more number one telecom company, Vodafone-Idea to lead market.
Story first published: Friday, August 31, 2018, 16:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X