ಎಲ್ಪಿಜಿ ಬೆಲೆ ಏರಿಕೆ, 3 ತಿಂಗಳಲ್ಲಿ 3ನೇ ಬಾರಿ ಗ್ರಾಹಕರಿಗೆ ಬರೆ!

ಎಲ್ಪಿಜಿ ಗ್ರಾಹಕರಿಗೆ ಕಹಿಸುದ್ದಿ. ಸಬ್ಸಿಡಿಯಲ್ಲಿ ನೀಡುವ ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್ ಗೆ ರೂ. 1.49 ಏರಿಕೆ ಮಾಡಲಾಗಿದೆ. ಹೊಸ ದರ ಸೆಪ್ಟಂಬರ್ ೧ರ ಮಧ್ಯರಾತ್ರಿಯಿಂದ ಜಾರಿಯಾಗಿದೆ.

ಎಲ್ಪಿಜಿ ಗ್ರಾಹಕರಿಗೆ ಕಹಿಸುದ್ದಿ. ಸಬ್ಸಿಡಿಯಲ್ಲಿ ನೀಡುವ ಅಡುಗೆ ಅನಿಲ ದರವನ್ನು ಪ್ರತಿ ಸಿಲಿಂಡರ್ ಗೆ ರೂ. 1.49 ಏರಿಕೆ ಮಾಡಲಾಗಿದೆ. ಹೊಸ ದರ ಸೆಪ್ಟಂಬರ್ 1ರ ಮಧ್ಯರಾತ್ರಿಯಿಂದ ಜಾರಿಯಾಗಿದೆ. ಜಿಎಸ್ಟಿ ಏರಿಕೆಯ ಪರಿಣಾಮದಿಂದ ಎಲ್ಪಿಜಿ ದರ ಏರಿಕೆಯಾಗಿದೆ.

ಎಲ್ಪಿಜಿ ಏರಿಕೆಗೆ ಕಾರಣ

ಎಲ್ಪಿಜಿ ಏರಿಕೆಗೆ ಕಾರಣ

ಸಬ್ಸಿಡಿ ಸಿಲಿಂಡರ್ ಬೆಲೆ

ಸಬ್ಸಿಡಿ ಸಿಲಿಂಡರ್ ಬೆಲೆ

ಎಲ್ಪಿಜಿ ದರ ಏರಿಕೆಯಿಂದ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ರೂ. 499.51 ಆಗಲಿದೆ.
ಆಗಸ್ಟ್ ತಿಂಗಳಿನಲ್ಲಿ ದೆಹಲಿಯಲ್ಲಿ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಗೆ ರೂ. 498.02 ಮತ್ತು ಸಬ್ಸಿಡಿ ರಹಿತ ರೂ. 789.5 ದರ ಇತ್ತು. ಕೇಂದ್ರ ಸರ್ಕಾರ ಸಬ್ಸಿಡಿಯನ್ನು ನೀಡುತ್ತಿದ್ದರೂ ಜಿಎಸ್ಟಿ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ.

ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ

ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ

ಸಬ್ಸಿಡಿ ರಹಿತ ಸಿಲಿಂಡರ್‌ ಮೇಲೆ ರೂ. 30.50 ಏರಿಕೆಯಾಗಿದೆ. ಸೆಪ್ಟಂಬರ್ 1ರಿಂದ ಜಾರಿಯಾಗಿದ್ದು, ಪ್ರತಿ ಸಿಲಿಂಡರ್ ಬೆಲೆ ರೂ. 820 ಇದೆ. ಆಗಸ್ಟ್ ನಲ್ಲಿ ಇದರ ಬೆಲೆ ರೂ. 789.5 ಇತ್ತು.

ಸಬ್ಸಿಡಿ ಮೊತ್ತ

ಸಬ್ಸಿಡಿ ಮೊತ್ತ

ಗ್ರಾಹಕರ ಬ್ಯಾಂಕ್ ಖಾತೆಯಲ್ಲಿ ಸಬ್ಸಿಡಿ ಮೊತ್ತ ವರ್ಗಾವಣೆ ಮಾಡುವ ಪ್ರಮಾಣವನ್ನು ಸೆಪ್ಟೆಂಬರ್‌ ತಿಂಗಳಲ್ಲಿ ಪ್ರತಿ ಸಿಲಿಂಡರ್ ಗೆ ರೂ. 320.49 ಸಬ್ಸಿಡಿ ನೀಡಲಾಗುತ್ತದೆ. ಇದು ಆಗಸ್ಟ್ ನಲ್ಲಿ ಪ್ರತಿ ಸಿಲಿಂಡರ್ ಗೆ ರೂ. ರೂ. 291.48, ಜುಲೈನಲ್ಲಿ ರೂ. 257.74 ಇತ್ತು. ಸಬ್ಸಿಡಿ ಪಡೆಯುವ ಎಲ್ಪಿಜಿ ಗ್ರಾಹಕರು ಬೆಲೆ ಹೆಚ್ಚಳದಿಂದ ಕೊಂಚ ನೆಮ್ಮದಿ ಪಡೆದಿದ್ದಾರೆ ಎನ್ನಬಹುದು.

ವರ್ಷಕ್ಕೆ 12 ಸಿಲಿಂಡರ್

ವರ್ಷಕ್ಕೆ 12 ಸಿಲಿಂಡರ್

ದೇಶದಲ್ಲಿನ ಕುಟುಂಬಗಳು ವರ್ಷಕ್ಕೆ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಪಡೆಯಬಹುದಾಗಿದೆ. ಈ ಮಿತಿಯನ್ನು ಮೀರಿದ ನಂತರ ಖರೀದಿಸುವ ಸಿಲಿಂಡರ್ ಗಳನ್ನು ಸಬ್ಸಿಡಿ ರಹಿತವಾಗಿರುತ್ತವೆ.

ಉಜ್ವಲ ಯೋಜನೆ

ಉಜ್ವಲ ಯೋಜನೆ

ಕೇಂದ್ರದ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಉಜ್ವಲ ಯೋಜನೆಯ ಮೂಲಕ 10 ಕೋಟಿ ಮನೆಗಳಿಗೆ ಎಲ್ಪಿಜಿ ಸಂಪರ್ಕ ಒದಗಿಸಿದೆ. ಈ ಯೋಜನೆ ಸಾಕಾರಕ್ಕಾಗಿ ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳು ಕೈಜೋಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+