For Quick Alerts
ALLOW NOTIFICATIONS  
For Daily Alerts

ಕಪ್ಪು ಬಣ್ಣಕ್ಕೆ ಬದಲಾಗಲಿದೆ ವಾಟ್ಸಾಪ್: ಹೊಸ ಸೌಲಭ್ಯಗಳೇನು?

|

ನವದೆಹಲಿ, ಜನವರಿ 25: ಬಹುತೇಕ ಜನರ ಮೆಚ್ಚಿನ ಸಂವಹನ ಮಾಧ್ಯಮ ವಾಟ್ಸಾಪ್, ತನ್ನ ಹಿನ್ನೆಲೆ ಬಣ್ಣ ಬದಲಿಸಿಕೊಳ್ಳಲಿದೆ.

ವಾಟ್ಸಾಪ್ ಕಪ್ಪು ಬಣ್ಣಕ್ಕೆ ಬದಲಾಗಲಿದೆ ಎಂಬ ಸುದ್ದಿ ಹಲವು ತಿಂಗಳಿನಿಂದ ಹರಿದಾಡುತ್ತಿತ್ತು. ಈಗ ಕೊನೆಗೂ ಅದು ನಿಜವಾಗಲಿದೆ. ವಾಟ್ಸಾಪ್ ಹೊಸ ವಿಶೇಷಗಳನ್ನು ಪರೀಕ್ಷಿಸುವ ವೆಬ್‌ಸೈಟ್ ವಾಬೇಟಾಇನ್ಫೋದಲ್ಲಿ ಅದರ ಕೆಲವು ಹೊಸ ಗುಣಗಳನ್ನು ಪರೀಕ್ಷಿಸಲಾಗಿದೆ. ಅಲ್ಲದೆ, ಅದರ ಫರ್ಸ್ಟ್ ಲುಕ್‌ನ ಪರಿಕಲ್ಪನೆಯ ಚಿತ್ರವನ್ನು ಸಹ ಪ್ರಕಟಿಸಿದೆ.

ಜನವರಿ 1ರಿಂದ ಈ ಫೋನ್ ಗಳಲ್ಲಿ ನಿಮ್ಮ ನೆಚ್ಚಿನ WhatsApp ವರ್ಕ್ ಆಗಲ್ಲ!

ಆಂಡ್ರಾಯ್ಡ್ ಕ್ಯೂದಲ್ಲಿ ಸಂಪೂರ್ಣ ಡಾರ್ಕ್ ಮೋಡ್ ಫೀಚರ್ ಅಳವಡಿಸಲು ಗೂಗಲ್ ಚಿಂತನೆ ನಡೆಸಿದೆ. ಹೀಗಾಗಿ ವಾಟ್ಸಾಪ್‌ನ ಹೊಸ ಫೀಚರ್ ಮಹತ್ವ ಪಡೆದಿದೆ. ಡಾರ್ಕ್ ಮೋಡ್ ಫೀಚರ್ ಆಪ್ ಸ್ಟೋರ್‌ನಲ್ಲಿ ದೂಳೆಬ್ಬಿಸಲಿದೆ. ಈಗಾಗಲೇ ಅನೇಕ ಆಪ್‌ಗಳು ಈ ಫೀಚರ್ ಅಳವಡಿಕೊಂಡಿವೆ.

ಈ ಹೊಸ 'ಕತ್ತಲ ಗುಣ'ದ ಜೊತೆಗೆ ಇನ್ನೂ ಅನೇಕ ಹೊಸ ಸೌಲಭ್ಯಗಳು ವಾಟ್ಸಾಪ್‌ನಲ್ಲಿ ಲಭ್ಯವಾಗಲಿವೆ. ವಾಟ್ಸಾಪ್‌ನಲ್ಲಿ ಏನೆಲ್ಲ ಹೊಸ ಸೌಲಭ್ಯಗಳಿವೆ? ಮುಂದೆ ಓದಿ...

ಕಪ್ಪು ಬಣ್ಣದ ಹಿನ್ನೆಲೆ

ಕಪ್ಪು ಬಣ್ಣದ ಹಿನ್ನೆಲೆ

ವಾಟ್ಸಾಪ್ ಲೋಗೋದ ಹಸಿರು ಬಣ್ಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ, ಅದರ ಐಕಾನ್, ತೆಳು ಬಣ್ಣದ ಅಕ್ಷರ ಮತ್ತು ಇತರೆ ಅಂಶಗಳು ಕಡುಕಪ್ಪು ಬಣ್ಣದ ಹಿನ್ನೆಲೆಗೆ ವಿರುದ್ಧವಾಗಿರಲಿದೆ.

ಕಣ್ಣಿಗೆ ಆರಾಮದಾಯಕ

ಈ ಹೊಸ ಗುಣದಿಂದ ಪ್ರಖರ ಬೆಳಕಿನಿಂದ ಕಣ್ಣಿಗೆ ಆಗುವ ಆಯಾಸ ಕಡಿಮೆಯಾಗಲಿದೆ. ಅಲ್ಲದೆ, ಬಳಕೆದಾರರು ಚೆನ್ನಾಗಿ ನಿದ್ದೆ ಮಾಡಲು ಸಹಕರಿಸುತ್ತದೆ. ಓಎಲ್‌ಇಡಿ ಪರದೆ ಮೂಲಕ ಮೊಬೈಲ್ ಸಾಧನದ ಬ್ಯಾಟರಿಯ ದೀರ್ಘ ಬಾಳಿಕೆಗೆ ನೆರವಾಗುತ್ತದೆ.

ಆಪ್ ಲಾಕ್‌ಗೆ ಹೊಸ ಫೀಚರ್

ಆಪ್ ಲಾಕ್‌ಗೆ ಹೊಸ ಫೀಚರ್

ವಾಟ್ಸಾಪ್‌ಅನ್ನು ಲಾಕ್ ಮಾಡಲು ಫಿಂಗರ್ ಪ್ರಿಂಟ್ ಲಾಕ್‌ಅನ್ನು ಹೆಚ್ಚಿನವರು ಬಳಸುತ್ತಾರೆ. ಖಾಸಗಿತನ ರಕ್ಷಣೆಗೆ ಕಾರಣ ಈ ಸೌಲಭ್ಯ ಪ್ರಮುಖವಾಗಿದೆ. ಈ ಆಪ್ ಪ್ರತ್ಯೇಕ ಫಿಂಗರ್ ಪ್ರಿಂಟ್ ಲಾಕ್ ಆಪ್ಅನ್ನು ಇನ್‌ಸ್ಟಾಲ್ ಮಾಡುವ ಅವಶ್ಯಕತೆಯನ್ನು ನಿವಾರಿಸಲಿದೆ.

ವಿಡಿಯೋ ವೀಕ್ಷಣೆ ನೇರ

ವಿಡಿಯೋ ವೀಕ್ಷಣೆ ನೇರ

ಅಲ್ಲದೆ ಇನ್ನು ಮುಂದೆ ವಿಡಿಯೋಗಳನ್ನು ನೋಟಿಫಿಕೇಷನ್ ಟ್ರೇನಲ್ಲಿಯೇ ನೇರವಾಗಿ ವೀಕ್ಷಿಸಬಹುದು. ಈ ಫೀಚರ್‌ಅನ್ನು ಫೋಟೊ ಮತ್ತು ಗ್ರಾಫಿಕ್‌ಗಳಿಗೆ ಸೀಮಿತಗೊಳಿಸಲಾಗಿತ್ತು.

ವಾಟ್ಸಾಪ್‌ನ ಹೊಸ ನಿರಂತರ ಧ್ವನಿ ಸಂದೇಶ ಫೀಚರ್ ಒಂದರ ನಂತರ ಇನ್ನೊಂದು ಸಂದೇಶವು ಸ್ವಯಂಚಾಲಿತವಾಗಿ ಪ್ಲೇ ಆಗುವಂತೆ ಮಾಡುತ್ತದೆ.

ಸ್ಟಿಕ್ಕರ್ ಹುಡುಕಾಟ ಸುಲಭ

ಸ್ಟಿಕ್ಕರ್ ಹುಡುಕಾಟ ಸುಲಭ

ವಾಟ್ಸಾಪ್ ಬಳಕೆದಾರರು ಸೂಕ್ತ ಪದವನ್ನು ಟೈಪ್ ಮಾಡುವುದರ ಮೂಲಕ ತಮ್ಮ ನೆಚ್ಚಿನ ಸ್ಟಿಕ್ಕರ್‌ಅನ್ನು ಹುಡುಕಬಹುದು. ಇದರಿಂದ ತಾವು ಸಂವಹನ ನಡೆಸುತ್ತಿರುವವರೊಂದಿಗೆ ಚುರುಕಾಗಿ ಹಾಗೂ ವಿಶ್ವಾಸಾರ್ಹತೆಯೊಂದಿಗೆ ಸಂದೇಶ ಹಂಚಿಕೊಳ್ಳಬಹುದು.

Read more about: whatsapp mobile
English summary

whatsapp will get dark mode and other features soon

WhatsApp will get Dark Mode in background soon. Also is introducing some other new features including fingerprint lock app.
Story first published: Friday, January 25, 2019, 19:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X