For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2019 : ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?

|

ನವದೆಹಲಿ, ಫೆಬ್ರವರಿ 01 : 'ಆಯುಷ್ಮಾನ್ ಭಾರತ್ ಯೋಜನೆ ಅಡಿ ಕಳೆದ ನಾಲ್ಕು ತಿಂಗಳಿನಲ್ಲಿ 10 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ' ಎಂದು ಹಣಕಾಸು ಸಚಿವ ಪಿಯೂಷ್ ಘೋಯೆಲ್ ಘೋಷಣೆ ಮಾಡಿದರು.

ಶುಕ್ರವಾರ 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಪಿಯೂಷ್ ಘೋಯೆಲ್ ಅವರು ಆರೋಗ್ಯ ಕ್ಷೇತ್ರದ ಬಗ್ಗೆ ಸಂಸತ್‌ಗೆ ಮಾಹಿತಿ ನೀಡಿದರು. '22ನೇ ಏಮ್ಸ್ ಆಸ್ಪತ್ರೆ ಶೀಘ್ರವೇ ಹರ್ಯಾಣ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ' ಎಂದರು.

Interim Union Budget 2019 LIVE: ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲInterim Union Budget 2019 LIVE: ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ

'ದೇಶದಲ್ಲಿ ಪ್ರಸ್ತುತ 21 ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಪೈಕಿ 14 ಸಂಸ್ಥೆಗಳನ್ನು 2014ರ ಬಳಿಕ ಘೋಷಣೆಯಾದವು' ಎಂದು ಸಚಿವರು ಹೇಳಿದರು.

ಕೇಂದ್ರ ಬಜೆಟ್ 2019 : ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?

'ಕಡಿಮೆ ಬೆಲೆಗೆ ಔಷಧ ನೀಡುವ ಯೋಜನೆಯಿಂದಾಗಿ ಲಕ್ಷಾಂತರ ಬಡ ಜನರಿಗೆ ಅನುಕೂಲವಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 10 ಲಕ್ಷ ರೋಗಿಗಳು ಇದುವರೆಗೂ ಚಿಕಿತ್ಸೆ ಪಡೆದಿದ್ದಾರೆ' ಎಂದು ಪಿಯೂಷ್ ಘೋಯೆಲ್ ತಿಳಿಸಿದರು.

'ಆಯುಷ್ಮಾನ್ ಯೋಜನೆ ಮೂಲಕ ದೇಶದ 50 ಕೋಟಿ ಜನರಿಗೆ ಸಹಕಾರಿಯಾಗಿದೆ. ಜನಷೌಧಿ ಕೇಂದ್ರದ ಮೂಲಕ 4 ಕೋಟಿ ಜನರಿಗೆ ಸಹಕಾರಿಯಾಗಿದೆ' ಎಂದು ಸಚಿವರು ಹೇಳಿದರು.

English summary

Union budget 2019 : Whats for health sector

Finance minister Piyush Goyal presented interim budget 2019-20. Whats for health sector in the budget.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X