For Quick Alerts
ALLOW NOTIFICATIONS  
For Daily Alerts

ಜಪಾನ್ ನಲ್ಲಿ ರೋಬೋಟ್ ಪೂಜಾರಿ; ಬೆಲೆ 7 ಕೋಟಿ ಅಷ್ಟೇ ಕಣ್ರೀ

By ಅನಿಲ್ ಆಚಾರ್
|

ಕ್ಯೋಟೋ (ಜಪಾನ್), ಆಗಸ್ಟ್ 16: ಜಪಾನ್ ನಲ್ಲಿ ಏನಾಗ್ತಿದೆ ಅನ್ನೋದನ್ನು ಸ್ವಲ್ಪ ನೋಡಿ. ಅಲ್ಲಿನ ನಾನೂರು ವರ್ಷದ ಹಳೆಯ ದೇಗುಲದಲ್ಲಿ ರೋಬೋಟಿಕ್ ಅರ್ಚಕರನ್ನು ಪರಿಚಯಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಧಾರ್ಮಿಕ ಜಗತ್ತಿನಲ್ಲೇ ದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಟೀಕಾಕಾರರೇನೋ ಇದನ್ನು ಬೇರೆ ರೀತಿ ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ಬೌದ್ಧ ಧರ್ಮದ ಈ ಬದಲಾವಣೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.

ಕ್ಯೋಟೋದ ಕೊಡೈಜಿ ದೇಗುಲದಲ್ಲಿ ಕೆನಾನ್ ಹೆಸರಿನ ಈ ಆಂಡ್ರಾಯ್ಡ್ ರೋಬೋಟ್ ಕರುಣೆ ಬಗ್ಗೆ ತಿಳಿಸುತ್ತದೆ. ಜತೆಗೆ ಪ್ರವಚನ ಸಹ ನೀಡುತ್ತದೆ. ಇದರ ಜತೆಗೆ ಕಾರ್ಯ ನಿರ್ವಹಿಸುವ ಇತರ ಮನುಷ್ಯ ಅರ್ಚಕರು ಹೇಳುವ ಪ್ರಕಾರ, ಈ ರೋಬೋಟ್ ನ ಕೃತಕ ಬುದ್ಧಿ ಮತ್ತೆ ಮೂಲಕ ಅನಂತವಾದ ಜ್ಞಾನವನ್ನು ಗಳಿಸುತ್ತದೆ.

ಈ ರೋಬೋಟ್ ಗೆ ಸಾವಿಲ್ಲ. ಅದು ತನ್ನಷ್ಟಕ್ಕೆ ಅಪ್ ಡೇಟ್ ಆಗುತ್ತದೆ ಹಾಗೂ ಬದಲಾವಣೆ ಮಾಡಿಕೊಳ್ಳುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕು ಅಂದರೆ, ಅದರ ಜ್ಞಾನವನ್ನು ಶಾಶ್ವತವಾಗಿ ಹಾಗೂ ಮಿತಿಯೇ ಇಲ್ಲದಷ್ಟು ಸಂಗ್ರಹಿಸಿಟ್ಟು ಕೊಳ್ಳುತ್ತದೆ. ಇದರ ಕೃತಕ ಬುದ್ಧಿಮತ್ತೆ ಸಹಾಯದಿಂದ ಜನರ ಬಹಳ ದೊಡ್ಡ ಸಮಸ್ಯೆಗಳನ್ನು ಸಹ ಬಗೆಹರಿಸಬಲ್ಲದು. ಇದರಿಂದ ಬೌದ್ಧಧರ್ಮದಲ್ಲೇ ಬದಲಾವಣೆ ಕಾಣಬಹುದು ಎನ್ನಲಾಗುತ್ತಿದೆ.

ಏಳು ಕೋಟಿ ರುಪಾಯಿ ಖರ್ಚಾಗಿದೆ

ಏಳು ಕೋಟಿ ರುಪಾಯಿ ಖರ್ಚಾಗಿದೆ

ವಯಸ್ಕರರಂತೆ ಕಾಣುವ ರೋಬೋಟ್ ಈ ವರ್ಷದ ಆರಂಭದಿಂದ ಸೇವೆ ಆರಂಭಿಸಿದೆ. ಈ ರೋಬೋಟ್ ತನ್ನ ಕೈ, ತಲೆ ಹಾಗೂ ದೇಹವನ್ನು ಚಲಿಸಬಲ್ಲದು. ಇದರ ಕೈ, ಮುಖ ಹಾಗೂ ಭುಜವನ್ನು ಮಾತ್ರ ಸಿಲಿಕೋನ್ ನಿಂದ ಮಾಡಲಾಗಿದ್ದು, ಮನುಷ್ಯರ ಚರ್ಮದಂತೆ ಕಾಣುವ ಪ್ರಯತ್ನ ಮಾಡಲಾಗಿದೆ. ಪ್ರಾರ್ಥನೆ ಸಲ್ಲಿಸುವ ವೇಳೆ ಎರಡು ಕೈಗಳಲ್ಲಿ ಚಪ್ಪಾಳೆ ತಟ್ಟುತ್ತದೆ. ಸುಮಧುರ ಧ್ವನಿಯಲ್ಲಿ ಮಾತನಾಡುತ್ತದೆ. ಹಾಲಿವುಡ್ ನ ಸಿನಿಮಾದಲ್ಲಿ ಕಾಣುವಂತೆ ಇರುವ ಈ ರೋಬೋಟ್ ನ ಎಡಗಣ್ಣಿನಲ್ಲಿ ಸಣ್ಣದೊಂದು ಕ್ಯಾಮೆರಾ ಕೂಡ ಅಳವಡಿಸಲಾಗಿದೆ. ಅಂದಹಾಗೆ ಈ ರೋಬೋಡ್ ಅನ್ನು ಅಭಿವೃದ್ಧಿ ಪಡಿಸಲು ಹತ್ತು ಲಕ್ಷ ಅಮೆರಿಕನ್ ಡಾಲರ್ ನಷ್ಟು ಖರ್ಚಾಗಿದೆ. ಭಾರತೀಯ ರುಪಾಯಿಗಳಲ್ಲಿ ಏಳು ಕೋಟಿಗೂ ಹೆಚ್ಚು.

ಯುವ ಜನಾಂಗವನ್ನು ತಲುಪುವುದಕ್ಕೆ ಸಹಾಯ

ಯುವ ಜನಾಂಗವನ್ನು ತಲುಪುವುದಕ್ಕೆ ಸಹಾಯ

ಈ ಯೋಜನೆಯು ಝೆನ್ ದೇಗುಲ ಹಾಗೂ ಒಸಾಕ ವಿ.ವಿ.ಯ ರೋಬೋಟಿಕ್ಸ್ ಪ್ರೊಫೆಸರ್ ಹಿರೋಶಿ ಇಷಿಗುರೋ ಜಂಟಿ ಪ್ರಯತ್ನದ ಫಲವಾಗಿದೆ. ಮಿಂಡರ್ ಎಂಬ ಹೆಸರಿನ ಹ್ಯೂಮನಾಯ್ಡ್ ಕರುಣೆ, ಆಸೆಯ ಅಪಾಯ, ಕೋಪ ಹಾಗೂ ಅಹಂಕಾರದ ಪರಿಣಾಮಗಳನ್ನು ತಿಳಿಸುತ್ತದೆ. ಸಾಂಪ್ರದಾಯಿಕ ಬೌದ್ಧ ಸನ್ಯಾಸಿಗಳು ಯಾವ ಯುವ ಜನಾಂಗವನ್ನು ತಲುಪಲು ಸಾಧ್ಯವಿಲ್ಲವೋ ಆ ಜನಾಂಗವನ್ನು ಈ ರೋಬೋಟ್ ತಲುಪತ್ತದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ. ಯುವ ಜನರು ದೇವಾಲಯಗಳು ಇರುವುದು ಒಂದೋ ಅಂತ್ಯಕ್ರಿಯೆಗೆ ಅಥವಾ ವಿವಾಹಕ್ಕೆ ಅಂತ ಭಾವಿಸಿದಂತಿದೆ. ಅದನ್ನು ಬದಲಾಯಿಸಬೇಕು ಎಂದರೆ ಈ ರೋಬೋಟ್ ಪಾತ್ರ ಮುಖ್ಯವಾದದ್ದು ಎನ್ನುತ್ತಾರೆ.

ಧರ್ಮದ ಪರಿಶುದ್ಧತೆ ಹೋಗುತ್ತದೆ ಎಂಬ ಆತಂಕ

ಧರ್ಮದ ಪರಿಶುದ್ಧತೆ ಹೋಗುತ್ತದೆ ಎಂಬ ಆತಂಕ

ಬೌದ್ಧ ಧರ್ಮದ ಗುರಿಯೇ ಶೋಕ- ಬಾಧೆಯನ್ನು ದೂರ ಮಾಡುವುದು. ಆಧುನಿಕ ಸಮಾಜವು ಇತರ ಬಗೆಯ ಒತ್ತಡ ನೀಡುತ್ತಿದೆ. ಆದರೆ ಎರಡು ಸಾವಿರ ವರ್ಷಗಳಿಂದ ಬೌದ್ಧ ಧರ್ಮದ ಉದ್ದೇಶ ಬದಲಾಗಿಲ್ಲ. ಈ ರೋಬೋಟ್ ಜನರ ದುಃಖವನ್ನು ಹೋಗಲಾಡಿಸುತ್ತದೆ. ಜತೆಗೆ ಈ ರೋಬೋಟ್ ನ ಉಪದೇಶ ಜಪಾನಿ ಭಾಷೆಯಲ್ಲಿ ಇದ್ದರೂ ಅದರ ಅನುವಾದ ಇಂಗ್ಲಿಷ್, ಚೀನಿ ಭಾಷೆಯಲ್ಲಿ ವಿದೇಶಿ ಸಂದರ್ಶಕರಿಗೆ ಕಾಅಣುತ್ತದೆ. ಕೊಡೈಜಿ ದೇವಾಲಯಕ್ಕೆ ಈ ಹೊಸ ಬದಲಾವಣೆ ನೆಚ್ಚದ ವಿದೇಶಿಗರು ಹಲವರು ದೂರು ಹೇಳಿಕೊಂಡಿದ್ದಾರೆ. ಇದರಿಂದ ಧರ್ಮದ ಪರಿಶುದ್ಧತೆ ಹೋಗುತ್ತದೆ ಎಂಬ ಆತಂಕ ಅವರದು. ಪಾಶ್ಚಿಮಾತ್ಯರು ಹೆಚ್ಚು ಬೇಸರಗೊಂಡಿದ್ದಾರೆ. ಆದರೆ ಜಪಾನಿಯರು ಹೆಚ್ಚಿನ ಪ್ರಮಾಣದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಬೌದ್ಧ ಧರ್ಮದ ನಂಬಿಕೆ ಇರುವುದು ಬುದ್ಧನ ಹಾದಿಯಲ್ಲಿ

ಬೌದ್ಧ ಧರ್ಮದ ನಂಬಿಕೆ ಇರುವುದು ಬುದ್ಧನ ಹಾದಿಯಲ್ಲಿ

ಬೌದ್ಧ ಧರ್ಮದ ನಂಬಿಕೆ ದೇವರಲ್ಲಿ ಇಲ್ಲ. ಅದು ಬುದ್ಧ ಹಾಕಿಕೊಟ್ಟ ಹಾದಿಯಲ್ಲಿ ಇದೆ. ಆ ದಾರಿಯನ್ನು ಯಂತ್ರ ಅನುಸರಿಸತ್ತದೋ, ಕಬ್ಬಿಣದ ಗುಜರಿಯೋ ಅಥವಾ ಮರವೋ ಯಾವುದು ಎಂಬುದು ಮುಖ್ಯವಲ್ಲ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ. ಇನ್ನು ಜಪಾನಿಯರಿಗೆ ರೋಬೋಟ್ ಬಗ್ಗೆ ಯಾವುದೇ ಪೂರ್ವಗ್ರಹಗಳು ಇಲ್ಲ. "ಚಿಕ್ಕಂದಿನಿಂದಲೇ ಕಾಮಿಕ್ ಕಥೆಗಳನ್ನು ಓದುತ್ತಾ ಬರುತ್ತಿರುವ ನಾವು ರೋಬೋಟ್ ಗಳನ್ನು ನಮ್ಮ ಸ್ನೇಹಿತರು ಅಂತಲೇ ಭಾವಿಸುತ್ತೇವೆ. ಆದರೆ ಪಾಶ್ಚಿಮಾತ್ಯರ ಆಲೋಚನೆ ವಿಭಿನ್ನವಾಗಿ ಇರುತ್ತದೆ" ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.

Read more about: business finance
English summary

Robotic Priest In Japan's Kyoto 400 Year Old Buddhist Temple

Japan's Kyoto 400 year old Buddhist temple introduced Robotic priest earlier this year.
Story first published: Friday, August 16, 2019, 15:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X