ಬಿಪಿಸಿಎಲ್ ನ್ನು ಐಒಸಿಗೆ ಮಾರಾಟದ ಡಿಸ್ ಇನ್ವೆಸ್ಟ್ ಮೆಂಟ್ ಪೂರಕವೊ - ಮಾರಕವೊ

ಸರ್ಕಾರಗಳು ತಮ್ಮ ವಿವಿಧ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಣೆಗೆ ವೈವಿಧ್ಯಮಯ ರೀತಿಯಲ್ಲಿ ಪ್ರಯತ್ನಿಸುತ್ತವೆ. ಇದರಲ್ಲಿ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಯೋಜನೆಯು ಒಂದು.

ಸರ್ಕಾರಗಳು ತಮ್ಮ ವಿವಿಧ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಣೆಗೆ ವೈವಿಧ್ಯಮಯ ರೀತಿಯಲ್ಲಿ ಪ್ರಯತ್ನಿಸುತ್ತವೆ. ಇದರಲ್ಲಿ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಯೋಜನೆಯು ಒಂದು. ಇದರ ಪ್ರಕಾರ ಸರ್ಕಾರವು ಹೊಂದಿರುವ ಸಾರ್ವಜನಿಕ ವಲಯದ ಕಂಪೆನಿಗಳಲ್ಲಿನ ಭಾಗಿತ್ವದಲ್ಲಿನ ಸ್ವಲ್ಪ ಭಾಗವನ್ನು ಸಾರ್ವಜನಿಕರಿಗೆ ಮಾರಾಟಮಾಡುವ ಮೂಲಕ ಸಂಗ್ರಹಿಸಬಹುದಾದ ಹಣವಾಗಿದೆ. ಈ ಮೊದಲು ಸರ್ಕಾರದ ಭಾಗಿತ್ವವು ಕೆನರಾ ಬ್ಯಾಂಕ್, ಮಾರುತಿ ಸುಜುಕಿ ಮುಂತಾದವುಗಳು ಬುಕ್ ಬ್ಯುಲ್ಡಿಂಗ್ ಮಾದರಿಯಲ್ಲಿ ವಿತರಿಸಲಾಯಿತು. ನಂತರ ಸ್ಟಾಕ್ ಎಕ್ಸ್ ಚೇಂಜ್ ನ ವಿಶೇಷ ಗವಾಕ್ಷಿ ' ಆಫರ್ ಫಾರ್ ಸೇಲ್' ಮೂಲಕ ಮಾರಾಟಮಾಡಲಾಗುತ್ತಿದೆ. ಮೊದಮೊದಲು ಸರ್ಕಾರದ ಬಂಡವಾಳ ಹಿಂತೆಗೆತದಲ್ಲಿ ವಿತರಿಸಲಾದ ಷೇರುಗಳ ದರವು ಆಕರ್ಷಕವಾಗಿದ್ದು ಸಣ್ಣ ಹೂಡಿಕೆದಾರರ ಆಸಕ್ತಿಯನ್ನೂ ಸಹ ಕೆರಳಿಸಿತ್ತು. ಆದರೆ ನಂತರದ ದಿನಗಳಲ್ಲಿ ಈ ಯೋಜನೆಯಡಿಯಲ್ಲಿ ಬರುತ್ತಿರುವ ಆಫರ್ ಫಾರ್ ಸೇಲ್ ವಿತರಣೆಗಳು ಪೇಟೆಯ ದರದ ಸಮೀಪದಲ್ಲೇ ಇರುವುದರಿಂದ ಅದು ಕ್ರಮೇಣ ಹೂಡಿಕೆದಾರರ ಆಸಕ್ತಿ ಕಳೆದುಕೊಳ್ಳತೊಡಗಿದೆ. ಆ ಸಂದರ್ಭದಲ್ಲಿ ವಿತರಣೆಯನ್ನು ಯಶಸ್ವಿಯಾಗಿಸಿಕೊಳ್ಳಲು ಹಲವಾರು ಬಾರಿ ಇತರೆ ಸಾರ್ವಜನಿಕ ವಲಯದ ಕಂಪನಿಗಳಾದ ಒ ಎನ್ ಜಿ ಸಿ, ಲೈಫ್ ಇಂಶುರಾನ್ಸ್ ಕಾರ್ಪೊರೇಷನ್ ಮುಂತಾದ ಸಂಸ್ಥೆಗಳಿಂದ ಬೆಂಬಲ ಪಡೆದು ಯೋಜನೆ ಯಶಸ್ವಿಗೊಳಿಸಲಾಗಿದೆ. ಸಧ್ಯ ಸರ್ಕಾರವು ಸಹ ಬ್ಯಾಲನ್ಸ್ ಶೀಟ್ ಬಗ್ಗೆ ಚಿಂತಿಸುವ ಕಾರಣ ಸಾಮಾಜಿಕ ಚಿಂತನೆಯಿಂದ ಹೊರಬರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಪೇಟೆಯ ವಾತಾವರಣವು ಚೆನ್ನಾಗಿದ್ದರೆ ಮಾತ್ರ ತನ್ನ ಭಾಗಿತ್ವವನ್ನು ಮಾರಾಟ ಮಾಡುತ್ತದೆ. ಇಲ್ಲದೆ ಇದ್ದರೆ ವಿತರಣೆ ತಡೆಹಿಡಿಯುತ್ತದೆ. 2011 ರ ನವೆಂಬರ್ ನಲ್ಲಿ ಒ ಎನ್ ಜಿ ಸಿ ಕಂಪನಿಯ ಮತ್ತಷ್ಟು ಷೇರು ವಿತರಣೆಯನ್ನು ಮಾಡಲು ಅರ್ಜಿಗಳನ್ನು ಮುದ್ರಿಸಿ ವಿತರಿಸಿತ್ತು. ಆದರೆ ಆ ಸಂದರ್ಭದಲ್ಲಿ ಪೇಟೆಯ ವಾತಾವರಣ ಸರಿಯಿಲ್ಲ ಎಂಬ ಕಾರಣಕ್ಕಾಗಿ ವಿತರಣೆಯಿಂದ ಹಿಂದೆ ಸರಿಯಿತು. ಈ ವರ್ಷದ ಬಜೆಟ್ ನಲ್ಲಿ ಪ್ರಸ್ತಾವನೆಯಂತೆ ರೂ.1.05 ಲಕ್ಷ ಕೋಟಿಯ ಬಂಡವಾಳ ಹಿಂತೆಗೆತದ ಗುರಿಯನ್ನು, ಇಂದಿನ ಪೇಟೆಗಳ ಪರಿಸ್ಥಿತಿಯಲ್ಲಿ ಸಾಧಿಸುವುದು ಕಷ್ಟವಾಗಿದೆ.

ಹಿಂದುಸ್ಥಾನ್ ಏರೋನಾಟಿಕ್ಸ್

ಹಿಂದುಸ್ಥಾನ್ ಏರೋನಾಟಿಕ್ಸ್

ಹಿಂದುಸ್ಥಾನ್ ಏರೋನಾಟಿಕ್ಸ್ ಕಂಪನಿ ಲಿಮಿಟೆಡ್ 2018 ರ ಮಾರ್ಚ್ ನಲ್ಲಿ ಪ್ರತಿ ಷೇರಿಗೆ ರೂ. 1,215 ರಲ್ಲಿ ಸಾರ್ವಜನಿಕ ಷೇರು ವಿತರಣೆ ಮಾಡಿತು. ನಂತರದ ದಿನಗಳಲ್ಲಿ ಷೇರಿನ ಬೆಲೆ ಸತತವಾದ ಇಳಿಕೆಯತ್ತ ಸಾಗಿದೆ. ಹಿಂದಿನ ವರ್ಷದ ಆಗಸ್ಟ್ ನಲ್ಲಿ ರೂ. 1,014 ರ ವಾರ್ಷಿಕ ಗರಿಷ್ಟದಲ್ಲಿದ್ದ ಷೇರು ಫೆಬ್ರವರಿಯಲ್ಲಿ ರೂ. 603 ರ ಸಮೀಪಕ್ಕೆ ಕುಸಿದು ವಾರ್ಷಿಕ ಕನಿಷ್ಠ ದಾಖಲಿಸಿದೆ. ಸಧ್ಯ ರೂ.670 ರ ಸಮೀಪವಿರುವ ಈ ಕಂಪನಿ ಷೇರು ಹೂಡಿಕೆದಾರರ ಸುಮಾರು ಶೇ.೪೫ ರಷ್ಟರ ಬಂಡವಾಳವನ್ನು ನಾಶಗೊಳಿಸಿ ನಿರುತ್ಸಾಹಿಗಳನ್ನಾಗಿಸಿದೆ.
ಹಿಂದಿನ ವರ್ಷ ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪೆನಿಯಲ್ಲಿನ ಶೇ.51.11 ರ ಭಾಗಿತ್ವವನ್ನು ಕೇಂದ್ರ ಸರ್ಕಾರ ರೂ.36,915 ಕೋಟಿಗಳಿಗೆ ಮತ್ತೊಂದು ಪ್ರಮುಖ ಸಾರ್ವಜನಿಕ ವಲಯದ ಕಂಪನಿ ಒ ಎನ್ ಜಿ ಸಿ ಗೆ ಮಾರಾಟ ಮಾಡಿ ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ನ್ನು ಒ ಎನ್ ಜಿ ಸಿ ಲಿಮಿಟೆಡ್ ನ ಅಂಗ ಸಂಸ್ಥೆಯನ್ನಾಗಿಸಿದೆ. ಇದಕ್ಕೆ ಅವಶ್ಯಕವಿದ್ದ ಸಂಪನ್ಮೂಲವನ್ನು ವಿವಿಧ ಬ್ಯಾಂಕ್ ಗಳಿಂದ ಪಡೆದುಕೊಳ್ಳುವುದರ ಜೊತೆಗೆ ಆಂತರಿಕ ನಿಧಿಯನ್ನು ಬಳಸಿಕೊಂಡಿದೆ. ಇದು ಹೊರನೋಟಕ್ಕೆ ಸರಿ ಎನಿಸಿದರೂ ಒ ಎನ್ ಜಿ ಸಿ ಕಂಪನಿಯನ್ನು ಹೆಚ್ಚು ಸಾಲಗಾರರನ್ನಾಗಿಸಿದೆ. ಈ ಮೂಲಕ ಪೇಟೆಯ ಆಸಕ್ತಿ ಕ್ಷೀಣಿತವಾಗಿದೆ. ಜೊತೆಗೆ ಷೇರುದಾರರ ನಿಧಿಯು ಕರಗಿದಂತಾಗಿದೆ.

 

 

ಇಂಡಿಯನ್ ಆಯಿಲ್ ಕಾರ್ಪೊರೇಷನ್

ಇಂಡಿಯನ್ ಆಯಿಲ್ ಕಾರ್ಪೊರೇಷನ್

ಇದೇ ರೀತಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿಯ ಭಾಗಿತ್ವವನ್ನು ಇಂಡಿಯನ್ ಆಯಿಲ್ ಕಂಪನಿಗೆ ನೀಡುವ ಮೂಲಕ ಸುಮಾರು ರೂ.40 ಸಾವಿರ ಕೋಟಿಯಷ್ಟು ಬಂಡವಾಳ ಹಿಂತೆಗೆತ ಮಾಡಿದಂತಾಗುವುದು ಎಂಬ ಚಿಂತನೆಯಲ್ಲಿ ತೈಲ ಮಂತ್ರಾಲಯ ತೊಡಗಿದೆ ಎಂಬ ಸುದ್ಧಿಯು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಗಳ ಷೇರಿನ ಬೆಲೆಯನ್ನು ಕ್ರಮವಾಗಿ ರೂ.116.70,ಮತ್ತು ರೂ.342.35 ರವರೆಗೂ ಕುಸಿಯುವಂತೆ ಮಾಡಿದೆ. ನಂತರದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ. ಈ ರೀತಿಯ ಬಂಡವಾಳ ಹಿಂತೆಗೆತಕ್ಕೆ ವಿತ್ತ ಮಂತ್ರಾಲಯವು ಒಪ್ಪುತ್ತಿಲ್ಲ ಎಂಬ ಮಾಧ್ಯಮ ಸುದ್ಧಿಯು ಈ ಚೇತರಿಕೆಗೆ ಪೂರಕ ಅಂಶವಾಗಿದೆ.

ಅನಿಶ್ಚಿತ ನೀತಿ

ಅನಿಶ್ಚಿತ ನೀತಿ

ಕೇಂದ್ರ ಸರ್ಕಾರದ ಈ ಅನಿಶ್ಚಿತ ನೀತಿಯ ಕಾರಣ ಷೇರುಪೇಟೆಗಳಲ್ಲಿ ಸಾರ್ವಜನಿಕ ವಲಯದ ಕಂಪನಿಗಳಿಗೆ ಹೆಚ್ಚು ಬೆಂಬಲ ದೊರೆಯುತ್ತಿಲ್ಲ. ಈ ಕಂಪನಿಗಳ ಸಾಧನೆಗಿಂತ ಸರ್ಕಾರದ ನಿರ್ಧಾರದ ತೂಕವೇ ಆಧ್ಯತೆ ಪಡೆದಿದೆ. ಸರ್ಕಾರ ಪೇಟೆಯ ನಂಬಿಕೆಯನ್ನು ಪಡೆದುಕೊಳ್ಳುವ ರೀತಿ ನಿರ್ಧರಿಸಿದಲ್ಲಿ ಭವಿಷ್ಯದಲ್ಲಿ ಉತ್ತಮ ಸಹಕಾರ ಪಡೆಯಲು ಸಾಧ್ಯ.

 

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+