ಕುಬೇರರನ್ನು ಹೊಂದಿರುವ ಟಾಪ್ 10 ದೇಶಗಳು, ಭಾರತಕ್ಕೆ ಎಷ್ಟನೆ ಸ್ಥಾನ?

ಬೆಂಗಳೂರು, ಆಗಸ್ಟ್‌ 9: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಪ್ರತಿ‌ದಿನ‌ ಬದಲಾವಣೆಗಳಾಗುತ್ತಿರುತ್ತದೆ. ಆಯಾ ದೇಶದ ಜಿಡಿಪಿಯನ್ನು ನಿರ್ವಹಿಸುವುದರಲ್ಲಿ ಈ ಶ್ರೀಮಂತರ ಪಾತ್ರ ಬಹಳ‌ ಮುಖ್ಯವಾಗುತ್ತದೆ. ವಿಶ್ವದ 78 ರಾಷ್ಟ್ರಗಳಲ್ಲಿ 2,781 ಬಿಲೇನಿಯರ್ ಗಳಿದ್ದಾರೆ ಎಂದು ಪೋರ್ಬ್ಸ್ ಪಟ್ಟಿ ಹೇಳಿದೆ.

ಯುನೈಟೆಡ್ ಸ್ಟೇಟ್ಸ್ ಜಾಗತಿಕ ಬಿಲಿಯನೇರ್ ಶ್ರೇಯಾಂಕದಲ್ಲಿ 813 ಬಿಲಿಯನೇರ್‌ಗಳನ್ನು ಹೊಂದಿದ್ದು ಅಗ್ರ ಸ್ಥಾನದಲ್ಲಿದೆ. ಫ್ರಾನ್ಸ್‌ನ ಎಲ್‌ವಿಎಂಎಚ್‌ನ ಅಧ್ಯಕ್ಷ ಮತ್ತು ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಸಿಇಒ ಮತ್ತು ಸಂಸ್ಥಾಪಕ ಎಲೋನ್ ಮಸ್ಕ್ ಮತ್ತೊಮ್ಮೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ತಮ್ಮದಾಗಿರಿಸಿಕೊಂಡಿದ್ದಾರೆ.

ಕುಬೇರರನ್ನು ಹೊಂದಿರುವ ಟಾಪ್ 10 ದೇಶಗಳು

ಯುನೈಟೆಡ್ ಸ್ಟೇಟ್ಸ್ ನಂತರ, ಚೀನಾವು ಕಳೆದ ವರ್ಷಕ್ಕೆ ಹೋಲಿಸಿದರೆ 155 ಬಿಲಿಯನೇರ್‌ಗಳನ್ನು ಕಳೆದುಕೊಂಡಿದ್ದರೂ ಸಹ ಎರಡನೇ ಸ್ಥಾನವನ್ನು ಹೊಂದಿದೆ ಚೀನಾದಲ್ಲಿ ಪ್ರಸ್ತುತ 473 ಬಿಲಿಯನೇರ್ ಗಳಿದ್ದಾರೆ. ವಿಶ್ವದ ಒಟ್ಟು ಬಿಲೇನಿಯರ್ ಗಳ ಪೈಕಿ ಯುಎಸ್ ಎ ಮತ್ತು ಚೀನಾ ಬಳಿಯೇ ಅರ್ಧದಷ್ಟು ಶ್ರೀಮಂತರಿದ್ದಾರೆ. ಅಂದರೆ‌ ವಿಶ್ವದ ಒಟ್ಟು ಶ್ರೀಮಂತರ ಪಟ್ಟಿಯಲ್ಲಿ ಅರ್ಧದಷ್ಟು ಕುಬೇರರು ಈ ಎರಡೂ ದೇಶಗಳಲ್ಲಿಯೇ ಇದ್ದಾರೆ.

ಗಮನಿಸಬೇಕಾದ ಸಂಗತಿಯೆಂದರೆ, ಯುಎಸ್ ಮತ್ತು ಚೀನಾ ಒಟ್ಟಾಗಿ ವಿಶ್ವದಾದ್ಯಂತ 3,279 ಬಿಲಿಯನೇರ್‌ಗಳಲ್ಲಿ ಅರ್ಧದಷ್ಟು ಜನರನ್ನು ಹೊಂದಿದ್ದು, ಇತರ ದೇಶಗಳನ್ನು ಮೀರಿಸಿದೆ.

ಭಾರತದ ಶ್ರೀಮಂತರ ಪಟ್ಟಿಯೂ ಜೋರಾಗಿಯೇ ಬೆಳೆಯುತ್ತಿದೆ. ಈ ವರ್ಷ 84 ಹೊಸ ಬಿಲೇನಿಯರ್ ಗಳು ಪಟ್ಟಿಗೆ ಸೇರ್ಪಡರಯಾಗಿದ್ದು ಭಾರತದಲ್ಲಿ ಒಟ್ಟು 271 ಬಿಲಿಯನೇರ್‌ ಗಳು ನೆಲೆಸಿದ್ದಾರೆ. ಈ ಮೂಲಕ ಭಾರತ ಜಾಗತಿಕವಾಗಿ ಮೂರನೇ ಸ್ಥಾನ ಪಡೆದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾದ ಮುಖೇಶ್ ಅಂಬಾನಿ ಅವರು ಜಾಗತಿಕವಾಗಿ 11 ನೇ ಸ್ಥಾನದಲ್ಲಿರುವ ಶ್ರೀಮಂತ ಭಾರತೀಯರಾಗಿದ್ದಾರೆ, ಏಷ್ಯಾ ಖಂಡದಿಂದ 100 ಬಿಲಿಯನ್ ಡಾಲರ್ ಕ್ಲಬ್‌ನ ಏಕೈಕ ಸದಸ್ಯ ಮುಖೇಶ್ ಅಂಬಾನಿ ಆಗಿದ್ದಾರೆ.

ಬಿಲೇನಿಯರ್ ಪಟ್ಡಿಯಲ್ಲಿ ಈ ವರ್ಷ, ಕ್ರೊಯೇಷಿಯಾ, ಉರುಗ್ವೆ ಮತ್ತು ಲಕ್ಸೆಂಬರ್ಗ್‌ ಸಹ ಸ್ಥಾನ ಪಡೆದುಕೊಂಡಿವೆ. ಪೆರು ಮತ್ತು ಮಕಾವು ಕೆಲವು ಬಿಲೇನಿಯರ್ ಗಳನ್ನು ಕಳೆದುಕೊಂಡಂತೆ ಕಾಣುತ್ತಿದೆ. ಲಕ್ಸೆಂಬರ್ಗ್‌ನ ಮೈಕೆಲ್ ಗ್ಯಾನ್ಸ್ ಪಟ್ಟಿಯಲ್ಲಿ ಮಿಂಚಿದ್ದಾರೆ. ಅಂದಾಜು 1.1 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ಉದ್ಯಮಿಯಾಗಿದ್ದಾರೆ. ಸುಪ್ರೀಂ ಗ್ರೂಪ್‌ನಲ್ಲಿ ಅವರು ಹೊಂದಿಪಾಲು ಅವರಿಗೆ ಈ ಪಟ್ಟ ತಂದುಕೊಟ್ಟಿದೆ. ಈ ಬಿಲೇನಿಯರ್ ಗಳ ಪಟ್ಟಿ ಜಾಗತಿಕ ಆರ್ಥಿಕತೆಯನ್ನು ಜತೆಗೆ ಸಂಪತ್ತು‌ ಸೃಷ್ಟಿ ಯನ್ನು ವಿವರಿಸುತ್ತಿದೆ.

ಏಷ್ಯಾ-ಪೆಸಿಫಿಕ್ ಪ್ರದೇಶವು ಅಧಿಕ ಬಿಲಿಯನೇರ್ ಗಳನ್ನು ಹೊಂದಿದೆ, 1,000 ಅಧಿಕ‌ ಕುಬೇರರು ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಅಮೆರಿಕ (993), ಯುರೋಪ್ (690), ಮತ್ತು ಮಧ್ಯಪ್ರಾಚ್ಯ ಮತ್ತು ಆಫ್ರಿಕಾ (98) ಬರುತ್ತದೆ.

ಅತಿ ಹೆಚ್ಚು ಬಿಲೇನಿಯರ್ ಗಳನ್ನು ಹೊಂದಿರುವ ಟಾಪ್ 10 ದೇಶಗಳು

1. ಯುಎಸ್ಎ:

ಯುನೈಟೆಡ್ ಸ್ಟೇಟ್ಸ್ ಅತಿ ಹೆಚ್ಚಿನ ಬಿಲಿಯನೇರ್‌ಗಳನ್ನು ಹೊಂದಿದೆ, ಒಟ್ಟು 813 ಕುಬೇರರು ಇಲ್ಲಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 735 ಇದ್ದು ಏರಿಕೆ ಕಂಡಿದೆ. ಈ ಎಲ್ಲ ಶ್ರೀಂಮತರ ಒಟ್ಟು ಸಂಪತ್ತು 5.7 ಟ್ರಿಲಿಯನ್‌ ಡಾಲರ್ ಗೆ ಏರಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 4.5 ಟ್ರಿಲಿಯನ್‌ ಡಾಲರ್ ಹೆಚ್ಚಾಗಿದೆ. 195 ಬಿಲಿಯನ್ ಡಾಲರ್ ಆಸ್ತಿ ಹೊಂದೊರುವ ಎಲಸನ್ ಮಸ್ಕ್ U.S. ಮತ್ತು ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿ ತಮ್ನ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ ಅವರ ಶ್ರೀಮಂತಿಕೆ ಹೆಚ್ಚಿಸಿದೆ.

2. ಚೀನಾ:

ಚೀನಾ ವಿಶ್ವದ ಬಿಲೇನಿಯರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದರೂ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕುಸಿತ ಕಂಡಿದೆ. 495 ಬಿಲೇನಿಯರ್ ಗಳ ಹೊಂದಿದ್ದ ಚೀನಾದ ಸಂಖ್ಯೆ ಈಗ 406ಕ್ಕೆ ಕುಸಿತವಾಗಿದೆ. ಒಟ್ಟು ನಿವ್ವಳ ಮೌಲ್ಯ 1.67 ಟ್ರಿಲಿಯನ್ ಡಾಲರ್ ನಿಂದ 1.3 ಟ್ರಿಲಿಯನ್‌ ಡಾಲರ್ ಗೆ ಇಳಿಕೆಯಾಗಿದೆ. ಚೀನಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಝಾಂಗ್ ಶಾನ್ಶನ್ ಅವರ ಬಳಿ 62.3 ಬಿಲಿಯನ್ ಡಾಲರ್ ಆಸ್ತಿ ಇದೆ. ಫಾರ್ಮಾಸ್ಯುಟಿಕಲ್‌ ಮತ್ತು ಅವರ ಬಾಟಲ್ ವಾಟರ್ ಕಂಪನಿ ನೊಂಗ್‌ಫು ಸ್ಪ್ರಿಂಗ್ ದೊಡ್ಡ ಮೊತ್ತದ ಸಂಪತ್ತು ಸೃಷ್ಟಿಸಿದೆ.

3. ಭಾರತ :

169 ರಿಂದ 200 ಬಿಲಿಯನೇರ್‌ ಗಳಿಗೆ ಭಾರತ ತನ್ನ ಸಂಖ್ಯೆ ಏರಿಸಿಕೊಂಡಿದೆ. ಭಾರತದ ಶ್ರೀಮಂತರ ಒಟ್ಟು ನಿವ್ವಳ ಮೌಲ್ಯವು 675 ಬಿಲಿಯನ್ ಡಾಲರ್ ನಿಂದ 954 ಬಿಲಿಯನ್ ಡಾಲರ್ ಗೆ ಏಎಇಕೆಯಾಗಿದೆ. ಮುಖೇಶ್ ಅಂಬಾನಿ 116 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. ಪೆಟ್ರೋಕೆಮಿಕಲ್ಸ್, ದೂರಸಂಪರ್ಕ ಮತ್ತು ರಿಟೇಲ್ ವಹಿವಾಟಿನ ರಿಲಯನ್ಸ್ ಇಂಡಸ್ಟ್ರೀಸ್‌ ಅವರಿಗೆ ದೊಡ್ಡ ಮೊತ್ತದ ಆಸ್ತಿ ಹೆಚ್ಚಳ ಮಾಡಿಕೊಟ್ಟಿದೆ.

4. ಜರ್ಮನಿ:

ಜರ್ಮನಿಯು ತನ್ನ ಬಿಲಿಯನೇರ್ ಸಂಖ್ಯೆಯಲ್ಲಿ ಅಲ್ಪ ಹೆಚ್ಚಳ ಕಂಡಿದೆ. ಇದು 126 ರಿಂದ 132 ಕ್ಕೆ ಬಿಲೇನಿಯರ್ ಗಳ ಸಂಖ್ಯೆ ಏರಿಕೆ ಮಾಡಿಕೊಂಡಿದೆ. ಒಟ್ಟು ನಿವ್ವಳ ಮೌಲ್ಯ 585 ಬಿಲಿಯನ್ ಡಾಲರ್ ನಿಂದ 644 ಡಾಲರ್ ಗೆ ಏರಿಕೆಯಾಗಿದೆ. 39.2 ಬಿಲಿಯನ್ ಡಾಲರ್ ಹೊಂದಿರುವ ಕ್ಲಾಸ್-ಮೈಕೆಲ್ ಕುಹ್ನೆ ಶ್ರೀಮಂತ ಜರ್ಮನ್ ಆಗಿದ್ದಾರೆ. ಲಾಜಿಸ್ಟಿಕ್ಸ್ ಮತ್ತು ಸಾರಿಗೆಯಲ್ಲಿ ತನ್ನ ಕಂಪನಿ ಕುಹ್ನೆ + ನಗೆಲ್ ಮೂಲಕ ಆಸ್ತಿ ಸಂಪಾದಿಸಿಕೊಂಡಿದ್ದಾರೆ.

5. ರಷ್ಯಾ:

ರಷ್ಯಾ ಸಹ ಪಟ್ಟಿಯಲ್ಲಿ ತನ್ನ ಸ್ಥಾನ ಭದ್ರ ಮಾಡಿಕೊಂಡಿದೆ. 105 ಬಿಲೇನಿಯರ್ ಹೊಂದಿದ್ದ ರಷ್ಯಾ ಅದನ್ನು 120 ಕ್ಕೆ ಏರಿಸಿಕೊಂಡಿದೆ. ಒಟ್ಟು 474 ಬಿಲಿಯನ್ ಡಾಲರ್ ನಿಂದ ಶ್ರೀಮಂತರ ಒಟ್ಟು ಸಂಪತ್ತು 537 ಬಿಲಿಯನ್ ಡಾಲರ್ ಗೆ ಏರಿಕೆ ಕಂಡಿದೆ. ಲುಕೋಯಿಲ್ ಕಂಪನಿ ಮುಖೇನ ತೈಲ ಮತ್ತು ಅನಿಲ ಉದ್ಯಮದಲ್ಲಿ ಛಾಪು ಹೊಂದಿರುವ ವಾಗಿತ್ ಅಲೆಕ್‌ಪೆರೋವ್ ರಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, 28.6 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.

6. ಇಟಲಿ:

ಇಟಲಿಯಲ್ಲಿ 73 ಬಿಲಿಯನೇರ್‌ ಗಳಿದ್ದಾರೆ. 64 ರಿಂದ 73ಕ್ಕೆ ಈ ಸಂಖ್ಯೆ ಹೆಚ್ಚಳವಾಗಿದೆ. ಒಟ್ಟು ಸಂಪತ್ತು 216 ಬಿಲಿಯನ್ ಡಾಲರ್ ನಿಂದ 302 ಬಿಲಿಯನ್ ಡಾಲರ್ ಗೆ ಬೆಳೆದಿದೆ. ಜಿಯೋವಾನಿ ಫೆರೆರೋ 43.8 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಮಿಠಾಯಿ ಉತ್ಪನ್ನಗಳಿಗೆ ಹೆಸರುವಾಸಿಯಾದ ನುಟೆಲ್ಲಾ ಮತ್ತು ಫೆರೆರೋ ರೋಚರ್ ಅವರಿಗೆ ಅಗ್ರ ಪಟಟ ತಂದುಕೊಟ್ಟಿದೆ.

7. ಬ್ರೆಜಿಲ್:

ಬ್ರೆಜಿಲ್‌ನ ಬಿಲಿಯನೇರ್ ಸಂಖ್ಯೆ 51 ರಿಂದ 69 ಕ್ಕೆ ಏರಿಕೆಯಾಗಿದೆ. ಒಟ್ಟು ನಿವ್ವಳ ಮೌಲ್ಯವು 160 ಬಿಲಿಯನ್ ಡಾಲರ್ ನಿಂದ 231 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಎಡ್ವರ್ಡೊ ಸವೆರಿನ್ ಶ್ರೀಮಂತ ಬ್ರೆಜಿಲಿಯನ್ ಪಟ್ಟ ಪಡೆದುಕೊಂಡಿದ್ದಾರೆ. 28 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ. ಫೇಸ್‌ಬುಕ್‌ ಮೇಲಿನ ಹೂಡಿಕೆ, ತಂತ್ರಜ್ಞಾನ ಕ್ಷೇತ್ರದ ಹೂಡಿಕೆ ಅವರ ಸಂಪತ್ತು ಸೃಷ್ಟಿಗೆ ಕಾರಣವಾಗಿದೆ.

8. ಕೆನಡಾ:

ಕೆನಡಾದಲ್ಲಿಯೂ ಶ್ರೀಮಂತರ ಸಂಖ್ಯೆ ಹೆಚ್ಚಾಗಿದೆ. 63 ರಿಂದ 67ಕ್ಕೆ ಬಿಲಿಯನೇರ್‌ ಸಂಖ್ಯೆ ಏರಿಕೆಯಾಗಿದೆ. ಒಟ್ಟು ಸಂಪತ್ತು 245 ಬಿಲಿಯನ್ ಡಾಲರ್ ನಿಂದ 315 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಡೇವಿಡ್ ಥಾಮ್ಸನ್ ಮತ್ತು ಅವರ ಕುಟುಂಬವು 67.8 ಬಿಲಿಯನ್ ಡಾಲರ್ ಹೊಂದಿದ್ದು ಅಗ್ರ ಸ್ಥಾನದಲ್ಲಿದೆ. ಥಾಮ್ಸನ್ ರಾಯಿಟರ್ಸ್‌ನಲ್ಲಿ ಹೊಂದಿರುವ ದೊಡ್ಡ ಪಾಲು ಅವರ ಆಸ್ತಿ ಹೆಚ್ಚಳಕ್ಕೆ ಪ್ರಮುಖ ಕಾರಣ.

9. ಹಾಂಗ್ ಕಾಂಗ್‌:

ಹಾಂಗ್ ಕಾಂಗ್‌ನಲ್ಲಿ, ಬಿಲಿಯನೇರ್ ಸಂಖ್ಯೆ 66 ರಿಂದ 67 ಕ್ಕೆ ಏರಿದೆ, ಆದರೆ ಒಟ್ಟು ನಿವ್ವಳ ಮೌಲ್ಯವು 350 ಬಿಲಿಯನ್ ಡಾಲರ್ ನಿಂದ 330 ಬಿಲಿಯನ್ ಡಾಲರ್ ಗೆ ಇಳಿದಿದೆ. ರಿಯಲ್ ಎಸ್ಟೇಟ್, ಟೆಲಿಕಮ್ಯುನಿಕೇಶನ್ಸ್ ಮತ್ತು ಚಿಲ್ಲರೆ ವ್ಯಾಪಾರದಲ್ಲಿನ ವಿವಿಧ ಹೂಡಿಕೆಗಳಿಂದ ಅಪಾರ ಸಂಪತ್ತು ಹೊಂದಿರುವ ಲಿ ಕಾ-ಶಿಂಗ್ ಒಟ್ಟು 37.3 ಬಿಲಿಯನ್ ಡಾಲರ್ ಹೊಂದಿದ್ದು ಮೊದಲ ಸ್ಥಾನದಲ್ಲಿದ್ದಾರೆ.

10. ಯುನೈಟೆಡ್ ಕಿಂಗ್ ಡಮ್:

ಯುನೈಟೆಡ್ ಕಿಂಗ್‌ಡಮ್‌ನಲ್ಲಿ, ಒಟ್ಟು ಬಿಲಿಯನೇರ್‌ಗಳ ಸಂಖ್ಯೆ 52 ರಿಂದ 55ಕ್ಕೆ ಏರಿದೆ. 202 ಬಿಲಿಯನ್ ಡಾಲರ್ ಇದ್ದ ಶ್ರೀಮಂತರ ನಿವ್ವಳ ಸಂಪತ್ತು 225 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. UK ಯಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ಹೆಗ್ಗಳಿಕೆ ಮೈಕೆಲ್ ಪ್ಲ್ಯಾಟ್ ಅವರ ಬಳಿ ಇದೆ. ಅವರ ಸಂಪತ್ತು 18 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಪ್ಲ್ಯಾಟ್ ಅವರು ಬ್ಲೂಕ್ರೆಸ್ಟ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್‌ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+