ನವದೆಹಲಿ, ಮೇ 23: ಭಾರತದ ಹಾಗೂ ಏಷ್ಯಾ ಖಂಡದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿ , ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಖೇಶ್ ಅಂಬಾನಿ ಮುಂಬೈನ ಲ್ಲಿರುವ 15,000 ಕೋಟಿ ರೂಪಾಯಿ ಮೌಲ್ಯದ ನಿವಾಸ ಆಂಟಿಲಿಯಾದಲ್ಲಿ ವಾಸಿಸುತ್ತಿರುವುದು ಜಗಜ್ಜಾಹೀರ ವಿಚಾರವಾಗಿದೆ. ಆದರೆ, ಈ ಐಷಾರಾಮಿ ನಿವಾಸ ಮಾತ್ರವಲ್ಲದೇ , ಬಕಿಂಗ್ಹ್ಯಾಮ್ ಅರಮನೆಯ ಗಾತ್ರಕ್ಕಿಂತ ನಾಲ್ಕು ಪಟ್ಟು ಹೆಚ್ಚು ದೊಡ್ಡದಾದ ಅರಮನೆಯಲ್ಲಿ ವಾಸಿಸುತ್ತಿರುವ ಬರೋಡಾದ ರಾಜಮನೆತನದ ಬಗ್ಗೆ ಮಾಹಿತಿ ಇಲ್ಲಿದೆ.
ಸಮರ್ಜಿತ್ ಸಿಂಹ ಗಾಯಕ್ವಾಡ್ ಬರೋಡಾದ ರಾಜ ಕುಟುಂಬದ ಮುಖ್ಯಸ್ಥರಾಗಿದ್ದು, 2012 ರಲ್ಲಿ ಅವರ ತಂದೆ ರಂಜಿತ್‌ಸಿಂಹ ಪ್ರತಾಪ್‌ಸಿಂಹ ಗಾಯಕ್ವಾಡ್ ಅವರ ನಿಧನ ನಂತರ ರಾಜಕಿರೀಟವನ್ನು ವಂಶಪಾರಂಪರ್ಯವಾಗಿ. ಇವರು 2002 ರಲ್ಲಿ ವಾಂಕನೇರ್ ರಾಜಮನೆತನದ ಮಾಜಿ ಪತ್ರಕರ್ತ ರಾಧಿಕರಾಜೆಯನ್ನು ವಿವಾಹವಾಗಿದ್ದಾರೆ. ಸಮರ್ಜಿತ್ ಸಿಂಹ ಗಾಯಕ್ವಾಡ್ ಅವರು ರಂಜಿತ್ ಸಿಂಹ ಪ್ರತಾಪ್ ಸಿಂಹ ಗಾಯಕ್ವಾಡ್ ಹಾಗೂ ಶುಭಾಂಗಿ ನಿರಾಜೆ ಅವರ ಏಕೈಕ ಪುತ್ರರಾಗಿದ್ದಾರೆ.

ಸಮರ್ಜಿತ್ ಸಿಂಹ ಗಾಯಕ್ವಾಡ್ ಮತ್ತು ರಾಧಿಕರಾಜೆ ರಾಜಮನೆತನದ ದಂಪತಿಗಳು ಇಬ್ಬರು ಹೆಣ್ಣುಮಕ್ಕಳ ಪೋಷಕರಾಗಿದ್ದಾರೆ. ಸಮರ್ಜಿತ್ ಸಿಂಗ್ ಗಾಯಕ್ವಾಡ್ ಮತ್ತು ಅವರ ಪತ್ನಿ ರಾಧಿಕರಾಜೆ 170 ಎಕರೆಗಳಷ್ಟು ವಿಸ್ತಾರವಾಗಿರುವ ಮತ್ತು 170 ಕೊಠಡಿಗಳನ್ನು ಹೊಂದಿರುವ ಐಷಾರಾಮಿ ಲಕ್ಷ್ಮಿ ವಿಲಾಸ ಅರಮನೆಯಲ್ಲಿ ವಾಸವಾಗಿದ್ದಾರೆ. ಇದರ ಮೌಲ್ಯ 24,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
700 ಎಕರೆ ವಿಸ್ತೀರ್ಣದ ಲಕ್ಷ್ಮಿ ವಿಲಾಸ್ ಅರಮನೆಯು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಾಗಿದೆ. ಇದನ್ನು 1890 ರಲ್ಲಿ ನಿರ್ಮಿಸಲಾಗಿದ್ದು, ಭವ್ಯವಾದ ಲಕ್ಷ್ಮಿ ವಿಲಾಸ್ ಅರಮನೆಯು ಇಂದು ವಡೋದರ ಭಾರತವಲ್ಲದೇ ಭಾರತದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಮರಾಠಾ ಮಹಾರಾಜ ಸಯ್ಯಾಜಿರಾವ್ ಗಾಯಕ್ವಾಡ್ III ಅವರಿಂದ ಈ ಭವ್ಯವಾದ ಅರಮನೆ ನಿರ್ಮಾಣವಾಗಿದೆ. ಈ ಕಟ್ಟಡವನ್ನು ನಿರ್ಮಿಸಲು ಸಯ್ಯಾಜಿರಾವ್ ಆ ಕಾಲದ ಪ್ರಖ್ಯಾತ ವಾಸ್ತುಶಿಲ್ಪಿ ಮೇಜರ್ ಚಾರ್ಲ್ಸ್ ಮಾಂಟ್ ಅವರನ್ನು ನಿಯೋಜಿಸಿದ್ದರಂತೆ. 1890 ರ ಕಾಲಘಟ್ಟದಲ್ಲಿ ವಿಲಾಸಿ ಅರಮನೆಯ ನಿರ್ಮಾಣಕ್ಕೆ ಬರೋಬ್ಬರಿ 27 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗಿತ್ತು. ಐಷಾರಾಮಿ ಅರಮನೆಯು ಗಾಲ್ಫ್ ಕೋರ್ಸ್ ಅನ್ನು ಕೂಡ ಹೊಂದಿದೆ. ಇದು ಯುಕೆಯ ಬಕಿಂಗ್ಹ್ಯಾಮ್ ಅರಮನೆಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ ಎಂದು ಹೇಳಲಾಗುತ್ತದೆ.
ಸಮರ್ಜಿತ್‌ಸಿನ್ಹ್ ಗಾಯಕ್ವಾಡ್ ಅವರು ಗುಜರಾತ್ ಮತ್ತು ಬನಾರಸ್‌ನಾದ್ಯಂತ 17 ದೇವಾಲಯಗಳನ್ನು ನಡೆಸುತ್ತಿರುವ ಟೆಂಪಲ್ ಟ್ರಸ್ಟ್ ಅನ್ನು ನಿಯಂತ್ರಿಸುತ್ತಿದ್ದಾರೆ. ಬರೋಡಾದ ರಾಜಮನೆತನವು 1934 ರ ರೋಲ್ಸ್ ರಾಯ್ಸ್, 1948 ಬೆಂಟ್ಲಿ ಮಾರ್ಕ್ VI, 1937 ರ ರೋಲ್ಸ್ ರಾಯ್ಸ್ ಫ್ಯಾಂಟಮ್ III ಮತ್ತು 1886 ರ ಬೆಂಜ್ ಪೇಟೆಂಟ್ ಮೋಟಾರ್‌ವ್ಯಾಗನ್ ಅನ್ನು ಹೊಂದಿದೆ.
ಬರೋಡಾದ ರಾಜಮನೆತನವು ಪಿತ್ರಾರ್ಜಿತ ಆಸ್ತಿಗಳು, ಇತರ ಆಸ್ತಿಗಳು ಮತ್ತು ವ್ಯಾಪಾರ ಉದ್ಯಮಗಳನ್ನು ಒಳಗೊಂಡಂತೆ 20,000 ಕೋಟಿ ರೂಪಾಯಿಗಳ ಅಂದಾಜು ನಿವ್ವಳ ಮೌಲ್ಯವನ್ನು ಹೊಂದಿದೆ.


Click it and Unblock the Notifications