ಮಹಿಳೆಯರಿಗೆ ಮತ್ತೆ ಗುಡ್‌ನ್ಯೂಸ್.. ಭಾರತದಲ್ಲಿ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಮಹಿಳೆಯರು ಅತಿಹೆಚ್ಚು ಇಷ್ಟ ಪಡುವುದೇ ಆಭರಣ..ಅದರಲ್ಲೂ ಚಿನ್ನ ಅವರಿಗೆಷ್ಟು ಇಷ್ಟ ಎಂದು ಕೇಳೋದೇ ಬೇಡ. ಏಕೆಂದರೆ ನಾರಿಮಣಿಯರ ಅಲಂಕಾರಕ್ಕೆ ಇನ್ನಷ್ಟು ರೂಪ ಕೊಡುವ ಈ ಚಿನ್ನ ಎಲ್ಲಕ್ಕಿಂತ ಮಿಗಿಲು. ಹೀಗಾಗಿಯೇ ಮಹಿಳೆಯರು ಚಿನ್ನವನ್ನು ಅತಿಹೆಚ್ಚು ಇಷ್ಟ ಪಡುತ್ತಾರೆ. ಈ ಚಿನ್ನ ತನ್ನ ಬೆಲೆ ಎಷ್ಟೇ ಹೆಚ್ಚಿಸಿಕೊಂಡರೂ ಮಹಿಳೆಯರಿಗೆ ಇದರ ಮೇಲಿನ ಆಸಕ್ತಿ ಕೊಂಚವೂ ಕಡಿಮೆಯಾಗುವುದಿಲ್ಲ. ಇನ್ನು ಬೆಲೆ ಕಡಿಮೆಯಾದರೆ ಕೇಳಬೇಕಾ. ಮಹಿಳೆಯರಿಗೆ ಈ ಚಿನ್ನದ ಮೇಲೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಹರಿಯುತ್ತದೆ.
ಸಭೆ, ಸಮಾರಂಭಗಳಲ್ಲಿ ಆಕರ್ಷಣೆ ಮಾಡುವುದೇ ಬಂಗಾರ. ಮಹಿಳೆಯರು ಬಂಗಾರ ತೊಡುವುದೇ ಒಂದು ಚಂದ. ಎಷ್ಟೇ ಏರಿಕೆಯಾದರೂ ಚಿನ್ನ ಖರೀದಿಸುವ ಆಸೆ ಮಾತ್ರ ಕಡಿಮೆಯಾಗಲ್ಲ. ಇನ್ನು ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ತಿಳಿದರೆ ಕೇಳೋದೇ ಬೇಡ. ಚಿನ್ನದಂಗಡಿಗೆ ಓಡೋಡಿ ಹೋಗಿ ಖರೀದಿಸುತ್ತಾರೆ. ಹಾಗೆಯೇ ಚಿನ್ನದ ಬೆಲೆಯಲ್ಲಿ ಇಂದು ಕೂಡ ಇಳಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನ ದುಬಾರಿಯಾಗಿದೆ. ಇಂದು ಕೊಂಚ ಬೆಲೆ ಇಳಿಕೆಯಾಗಿದ್ದು, ಭಾರತದಲ್ಲಿ ಚಿನ್ನದ ಬೆಲೆ ಇಂದು ಹೇಗಿದೆ. ನಿನ್ನೆಗಿಂತ ಇಂದು ಎಷ್ಟು ಬೆಲೆ ಕಡಿಮೆಯಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಚಿನ್ನದ ಬೆಲೆ
22 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 7,960 ರೂ. ಆಗಿದೆ. ನಿನ್ನೆ ಇದರ ಬೆಲೆ 8,010 ರೂ. ಆಗಿದ್ದು ನಿನ್ನೆಗಿಂತ ಇಂದು, 50 ರೂ. ಕುಸಿತ ಕಂಡಿದೆ. ಹಾಗೆಯೇ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 79,600 ರೂ. ಆಗಿದೆ. ನಿನ್ನೆಯ ಬೆಲೆ 80,100 ರೂ. ಆಗಿದ್ದು ನಿನ್ನೆಗಿಂತ ಇಂದಿಗೆ 500 ರೂ. ಕಡಿಮೆಯಾಗಿದೆ. ಇನ್ನು 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 7 ಲಕ್ಷದ 96 ಸಾವಿರ ರೂ. ಆಗಿದೆ. ನಿನ್ನೆಯ ಬೆಲೆ 8,01,000 ರೂ. ಆಗಿದ್ದು ನಿನ್ನೆಗಿಂತ ಇಂದು 5,000 ರೂ. ಇಳಿಕೆಯಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 8,684 ರೂ. ಆಗಿದೆ. ನಿನ್ನೆ ಇದರ ಬೆಲೆ 8,738 ರೂ. ಆಗಿದ್ದು ನಿನ್ನೆಗಿಂತ ಇಂದು, 54 ರೂ. ಕುಸಿತ ಕಂಡಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 86,840 ರೂ. ಆಗಿದೆ. ನಿನ್ನೆಯ ಬೆಲೆ 87,380 ರೂ. ಆಗಿದ್ದು ನಿನ್ನೆಗಿಂತ ಇಂದಿಗೆ 540 ರೂ. ಕಡಿಮೆಯಾಗಿದೆ. ಇನ್ನು 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8 ಲಕ್ಷ 68 ಸಾವಿರದ 400 ರೂ. ಆಗಿದೆ. ನಿನ್ನೆಯ ಬೆಲೆ 8 ಲಕ್ಷ 73 ಸಾವಿರದ 800 ರೂ. ಆಗಿದ್ದು ನಿನ್ನೆಗಿಂತ ಇಂದು 5,400 ರೂ. ಇಳಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 6,513 ರೂ. ಆಗಿದೆ. ನಿನ್ನೆ ಇದರ ಬೆಲೆ 6,554 ರೂ. ಆಗಿದ್ದು ನಿನ್ನೆಗಿಂತ ಇಂದು, 41 ರೂ. ಕುಸಿತ ಕಂಡಿದೆ. ಹಾಗೆಯೇ 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 65,130 ರೂ. ಆಗಿದೆ. ನಿನ್ನೆಯ ಬೆಲೆ 65,540 ರೂ. ಆಗಿದ್ದು ನಿನ್ನೆಗಿಂತ ಇಂದಿಗೆ 410 ರೂ. ಕಡಿಮೆಯಾಗಿದೆ. ಇನ್ನು 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 6 ಲಕ್ಷ 51 ಸಾವಿರದ 300 ರೂ. ಆಗಿದೆ. ನಿನ್ನೆಯ ಬೆಲೆ 6 ಲಕ್ಷ 55 ಸಾವಿರದ 400 ರೂ. ಆಗಿದ್ದು ನಿನ್ನೆಗಿಂತ ಇಂದು 4,100 ರೂ. ಇಳಿಕೆಯಾಗಿದೆ.
ವಿವಿಧ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಹೇಗಿದೆ
ನಗರಗಳು 22K 24K 18K
ಚೆನೈ ₹7,960 ₹8,684 ₹6,550
ಮುಂಬೈ ₹7,960 ₹8,684 ₹6,513
ದೆಹಲಿ ₹7,975 ₹8,699 ₹6,525
ಕೋಲ್ಕತಾ ₹7,960 ₹8,684 ₹6,513
ಬೆಂಗಳೂರು ₹7,960 ₹8,684 ₹6,513
ಹೈದರಾಬಾದ್ ₹7,960 ₹8,684 ₹6,513
ಕೇರಳ ₹7,960 ₹8,684 ₹6,513
ಪುಣೆ ₹7,960 ₹8,684 ₹6,513
ವಡೋದರಾ ₹7,965 ₹8,689 ₹6,517
ಅಹಮದಾಬಾದ್ ₹7,965 ₹8,689 ₹6,517
ಭಾರತದಲ್ಲಿ ಬೆಳ್ಳಿ ಬೆಲೆ ಹೇಗಿದೆ..?
ಇಂದು, ಭಾರತದಲ್ಲಿ ಬೆಳ್ಳಿ ಬೆಲೆಯೂ ಇಳಿಮುಖವಾಗಿದೆ. ನಿನ್ನೆ ₹98 ಇದ್ದ ಪ್ರತಿ ಗ್ರಾಂ ಬೆಳ್ಳಿ ಬೆಲೆ ಇಂದು, ₹97 ಆಗಿದ್ದು ನಿನ್ನೆಗಿಂತ ₹1 ಇಳಿಕೆಯಾಗಿದೆ. ಹಾಗೆಯೇ ನಿನ್ನೆ ₹980 ಇದ್ದ 10 ಗ್ರಾಂ ಬೆಳ್ಳಿ ಬೆಲೆ ಇಂದು ₹970 ಆಗಿದ್ದು ನಿನ್ನೆಗಿಂತ ಇಂದು ₹10 ಇಳಿಕೆಯಾಗಿದೆ. ನಿನ್ನೆ ₹9,800 ಇದ್ದ 100 ಗ್ರಾಂ ಬೆಳ್ಳಿ ಬೆಲೆ ಇಂದು ₹9,700 ಆಗಿದ್ದು ನಿನ್ನೆಗಿಂತ ಇಂದು ₹100 ಇಳಿಕೆಯಾಗಿದೆ. ನಿನ್ನೆ ₹98,000 ಇದ್ದ 1 ಕೆ.ಜಿ ಬೆಳ್ಳಿ ಬೆಲೆ ಇಂದು ₹97,000 ಆಗಿದ್ದು ನಿನ್ನೆಗಿಂತ ಇಂದು ₹1,000 ಇಳಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ವರದಿ ಪ್ರಕಾರ 2025ರ ಫೆಬ್ರವರಿ 28ರಂದು, ಅಮೆರಿಕಾ ಚಿನ್ನದ ದರಗಳು 0.3% ಕಡಿಮೆಯಾಗಿದೆ. ಅಂದರೆ $2,886.80 ಪ್ರತಿ ಔನ್ಸ್‌ಗೆ ವಹಿವಾಟು ನಡೆಯುತ್ತಿದೆ. ಸ್ಪಾಟ್ ಚಿನ್ನದ ದರವು 0.1% ಇಳಿಕೆಯಾಗಿ 02:32 GMT $2,874.69 ಪ್ರತಿ ಔನ್ಸ್ ಆಗಿದೆ.


Click it and Unblock the Notifications