ಬೆಂಗಳೂರು, ಏಪ್ರಿಲ್ 5: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಹಾಲಿ ಸಂಸದ ರಾಹುಲ್ ಗಾಂಧಿ ಬುಧವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅದಕ್ಕೂ ಮುನ್ನ ರಾಹುಲ್ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಭರ್ಜರಿ ರೋಡ್ ಶೋ ಮಾಡಿ ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರದಲ್ಲಿ ಸಲ್ಲಿಸಿದ ಆಸ್ತಿಯ ವಿವರದಂತೆರಾಹುಲ್ ಗಾಂಧಿ ಒಟ್ಟು ₹20 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ರಾಹುಲ್ ಗಾಂಧಿ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಅವರು 4.3 ಕೋಟಿ ರೂಪಾಯಿ ಷೇರು ಮಾರುಕಟ್ಟೆ ಹೂಡಿಕೆ, 3.81 ಕೋಟಿ ರೂಪಾಯಿ ಮ್ಯೂಚುವಲ್ ಫಂಡ್ ಠೇವಣಿ ಮತ್ತು ಬ್ಯಾಂಕ್ ಖಾತೆಯಲ್ಲಿ 26.25 ಲಕ್ಷ ರೂಪಾಯಿ ಹೊಂದಿದ್ದಾರೆ. 53 ವರ್ಷದ ರಾಹುಲ್ ಅವರು 2022-23ರ ಹಣಕಾಸು ವರ್ಷದಲ್ಲಿ 55,000 ರೂಪಾಯಿ ನಗದು ಮತ್ತು ಒಟ್ಟು 1,02,78,680 (ರೂ 1.02 ಕೋಟಿ) ಆದಾಯವನ್ನು ಹೊಂದಿದ್ದರು ಎಂದು ಘೋಷಿಸಿದ್ದಾರೆ.'

ರಾಹುಲ್ ಗಾಂಧಿ ಬಳಿ 15.2 ಲಕ್ಷ ಮೌಲ್ಯದ ಚಿನ್ನದ ಬಾಂಡ್‌ಗಳಿವೆ. ಇದಲ್ಲದೇ ರಾಷ್ಟ್ರೀಯ ಉಳಿತಾಯ ಯೋಜನೆಗಳು, ಅಂಚೆ ಉಳಿತಾಯ ಮತ್ತು ವಿಮಾ ಪಾಲಿಸಿಗಳಲ್ಲಿ 61.52 ಲಕ್ಷ ರೂಪಾಯಿ ಮೌಲ್ಯದ ಹೂಡಿಕೆಗಳನ್ನು ಹೊಂದಿದ್ದಾರೆ. ಅಫಿಡವಿಟ್ ಪ್ರಕಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಬಳಿ 4.2 ಲಕ್ಷ ರೂ. ಮೌಲ್ಯದ ಆಭರಣವಿದೆ. ಅವರ ಒಟ್ಟು ಚರ ಆಸ್ತಿ ಮೌಲ್ಯ 9.24 ಕೋಟಿ ರೂ.ಗಳಾಗಿದ್ದು, ಅವರ ಸ್ಥಿರಾಸ್ತಿಯ ಒಟ್ಟು ಮೌಲ್ಯ ಸುಮಾರು 11.14 ಕೋಟಿ ರೂ. ಆಗಿದೆ. ರಾಹುಲ್ ಗಾಂಧಿ ಕೂಡ ಸುಮಾರು 49.7 ಲಕ್ಷ ರೂ ಸಾಲವನ್ನು ಹೂಂದಿದ್ದಾರೆ.
7 ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ
ಸಣ್ಣ ಮತ್ತು ಮಿಡ್‌ಕ್ಯಾಪ್ ಸೇರಿದಂತೆ ಏಳು ಮ್ಯೂಚುವಲ್ ಫಂಡ್‌ಗಳಲ್ಲಿ ರಾಹುಲ್ ಗಾಂಧಿಯವರು 3.81 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.
ಮ್ಯೂಚುವಲ್ ಫಂಡ್ ಸ್ಕೀಮ್ ಯೂನಿಟ್ ಮಾರುಕಟ್ಟೆ ಮೌಲ್ಯ (ರೂ.)
HDFC MCOP DP GR 11763.377 19,58,249
HDFC ಸ್ಮಾಲ್ ಕ್ಯಾಪ್ DP GR 13911.606 17,89,032
ICICI EQ&DF D ಗ್ರೋಥ್ 5253.773 19,03,179
PPFAS FCF D ಗ್ರೋಥ್ 26851.471 19,76,536
HDFC ಸ್ಮಾಲ್ ಕ್ಯಾಪ್ Reg-G 108222.684 1,23,85,545
HDFC ಹೈಬ್ರಿಡ್ ಡೆಟ್ ಫಂಡ್-G 107071.772 79,01,329
ICICI ಪ್ರುಡೆನ್ಶಿಯಲ್ ರೆಗ್ ಸೇವಿಂಗ್ಸ್-G 154297.162 1,02,19,702


Click it and Unblock the Notifications