ಬೆಂಗಳೂರು, ಮಾರ್ಚ್ 4: ಇತ್ತೀಚಿನ ದಶಕಗಳಲ್ಲಿ ಭಾರತದ ತ್ವರಿತ ಆರ್ಥಿಕ ಬೆಳವಣಿಗೆಯಲ್ಲಿ ಮಹಿಳಾ ಉದ್ಯಮಿಗಳ ಕೊಡುಗೆಯೂ ಸಾಕಷ್ಟಿದೆ. ಇವರು ಉದ್ಯಮದ ಹಲವು ವಲಯಗಳಲ್ಲಿ ತಮ್ಮ ಪ್ರಭಾವವನ್ನು ಬೀರುತ್ತಿದ್ದಾರೆ.
ಮಹಿಳೆಯರ ನೇತೃತ್ವದ ಸ್ಟಾರ್ಟ್‌ಅಪ್‌ಗಳ ಹೆಚ್ಚಳ ವ್ಯವಹಾರ ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಗೆ ಸಾಕ್ಷಿಯಾಗಿದೆ. ನಿಧಿ ಯಾದವ್ ಅವರ ಯಶಸ್ಸು ಉದ್ಯಮಶೀಲತೆಯ ಜಗತ್ತಿನಲ್ಲಿ ಒಂದು ಸ್ಪೂರ್ತಿದಾಯಕ ಕಥೆಯಾಗಿದೆ. ಉದ್ಯಮಶೀಲತೆಯ ಜಗತ್ತಿನಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿರುವಾಗ, ಕೆರಿಯಲ್ ನಲ್ಲಿ ಏಳಿಗೆ ಹೊಂದುತ್ತಿರುವಾಗ ಕಂಪ್ಯೂಟರ್ ಎಂಜಿನಿಯರಿಂಗ್ ವೃತ್ತಿಜೀವನವನ್ನು ತೊರೆದು ಮೋಡಿ ಮಾಡುವ ಫ್ಯಾಷನ್ ಜಗತ್ತಿನಲ್ಲಿ ನಿಧಿಯವರು ನಿರ್ಭಯವಾಗಿ ಧುಮುಕಿ ಸಮಸ್ಯೆ ಸವಾಲುಗಳನ್ನುಗೆಲ್ಲುತ್ತಾರೆ.

ಡೆಲಾಯ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಿಧಿ ಫ್ಯಾಷನ್ ಕ್ಷೇತ್ರವನ್ನು ಎಂಟ್ರಿ ಕೊಡಲು ಬಯಸಿದ್ದರು. ಈ ಕ್ಷೇತ್ರದಲ್ಲಿ ಬಗ್ಗೆ ಅನುಭವ ಪಡೆಯಲೆಂದೇ ಅವರು ಫ್ಲಾರೆನ್ಸ್‌ನಲ್ಲಿರುವ ಪೊಲಿಮೋಡಾ ಫ್ಯಾಶನ್ ಸ್ಕೂಲ್‌ನಲ್ಲಿ ಒಂದು ವರ್ಷದ ಕೋರ್ಸ್ ಕೂಡಾ ಅಧ್ಯಯನ ಮಾಡಿದರು. ತಮ್ಮ ಅಧ್ಯಯನ ಸಂಪೂರ್ಣವಾದ ಬಳಿಕ ಅವರಿಗೆ ಇಟಲಿಯಲ್ಲಿ ಕೆಲಸ ದೊರಕಿತು. ಆದರೆ ತಾಯ್ನಾಡಿನಲ್ಲಿ ತನ್ನ ಕನಸನ್ನು ಸಾಧಿಸಬೇಕೆಂದು ತಮ್ಮ ಕುಟುಂಬದೊಂದಿಗೆ ಇರಲು ಭಾರತಕ್ಕೆ ಮರಳಲು ನಿರ್ಧರಿಸಿದರು.
ಕೇವಲ 3.5 ಲಕ್ಷ ರೂಪಾಯಿ ಹೂಡಿಕೆ ಮಾಡಿ ಅವರು 2014 ರಲ್ಲಿ, ಅವರು ಆಕ್ಸ್ (aks) ಎಂಬ ಸಂಸ್ಥೆ ತೆರೆದರು. ಸಮಕಾಲೀನ ಎಥ್ನಿಕ್ ವೇರ್ ಗಳನ್ನು ಕೈಗೆಟಕುವ ಬೆಲೆಯಲ್ಲಿ ನೀಡುವುದರ ಮೂಲಕ 18 ರಿಂದ 35 ವರ್ಷದೊಳಗಿನ ಮಹಿಳಾ ಗ್ರಾಹಕರ ಪೂರೈಕೆ ಬೇಡಿಸುವುದು ಪೂರೈಸುವುದು ಅವರ ಕಂಪನಿಯ ಗುರಿಯಾಗಿತ್ತು.
ಇದು ತಕ್ಷಣವೇ ಯಶಸ್ವಿಯಾಗದಿದ್ದರೂ ಆರಂಭಿಕ ಹಂತದಿಂದ ಐದು ವರ್ಷಗಳಲ್ಲಿ ಕಂಪನಿಯು ಸ್ಥಿರವಾಗಿ ನೆಲೆಯೂರಿತು. ಆದಾದ ಮುಂದಿನ ವರ್ಷಗಳಲ್ಲಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿತು. 2014ರಲ್ಲಿ ಕಂಪನಿಯ ಆದಾಯ 1.60 ಕೋಟಿ ರೂ. ಗಳಷ್ಟಿದ್ದು, ಮುಂದಿನ ವರ್ಷ 8.50 ಕೋಟಿ ಆದಾಯದ ಕಂಪನಿಯಾಯಿತು. 2018ರಲ್ಲಿ ಕಂಪನಿಯ ಆದಾಯ 48 ಕೋಟಿ ರೂ. ಬೆಳೆದು ನಿಂತಿತು. 2019-2020 ರ ಆರ್ಥಿಕ ವರ್ಷದಲ್ಲಿ 100 ಕೋಟಿ ರೂ.ಗಿಂತಲೂ ಹೆಚ್ಚಿನ ಆದಾಯವನ್ನು ಗಳಿಸಿತು.
2021 ರ ಅಂತ್ಯದ ವೇಳೆಗೆ, ಯಾವುದೇ ರೀತಿಯ ಬಾಹ್ಯ ಹಣಕಾಸಿ ಬೆಂಬಲವಿಲ್ಲದೇ 200 ಕೋಟಿಗೂ ಹೆಚ್ಚು ಆದಾಯವನ್ನು "ಆಕ್ಸ್" ಸಂಸ್ಥೆ ಗಳಿಸಿದೆ ಎಂದು ನಿಧಿ ಅವರ ಇಂಡಿಯನ್ ರಿಟೇಲರ್‌ನ ಹಳೆಯ ಸಂದರ್ಶನದಲ್ಲಿ ತಿಳಿಸಿದ್ದರು.
ಕೊರೊನಾ ಸಾಂಕ್ರಾಮಿಕವು ಅವರ ಕಂಪನಿಗೂ ಹೊಡೆತ ನೀಡಿತು. ಉತ್ಪಾದನೆಯನ್ನು ಸ್ಥಗಿತಗೊಳಿಸಿದರೂ ಅವರು ತಮ್ಮ ಸಿಬ್ಬಂದಿಗಳಿಗೆ ವೇತನವನ್ನು ನೀಡಲು ಬಯಸಿದ್ದರು. ಇದಕ್ಕಾಗಿ ಅವರು ಮಾಸ್ಕ್ ಮತ್ತು ಪಿಪಿಇ ಕಿಟ್‌ಗಳನ್ನು ತಯಾರಿಸಲು ಪ್ರಾರಂಭಿಸಿದರು. ಮಾತ್ರವಲ್ಲದೇ ಅವರ ಬಳಿ ಸಾಕಷ್ಟು ಉಳಿಕೆಯಾದ ಬಟ್ಟೆಗಳ ಸಂಗ್ರಹವಿದ್ದುದರಿಂದ ಅದರಲ್ಲಿಯೇ ಕಿಡ್ಸ್ ವೇರ್ ತಯಾರಿ ಪ್ರಾರಂಭಿಸಿದರು. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಕಂಪನಿಯು 2023-2024ರಲ್ಲಿ ರೂ 500 ಕೋಟಿ ಆದಾಯವನ್ನು ಗಳಿಸಲು ಯೋಜನೆ ಹಾಕಿಕೊಂಡಿದೆ ಎಂದು ಅವರು ಹೇಳಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications