ಫೋರ್ಬ್ಸ್ ನ ಬಹು ನಿರೀಕ್ಷಿತವಾದ ವಿಶ್ವದ 100 ಅತ್ಯಂತ ಪ್ರಭಾವಶಾಲಿ ಮಹಿಳೆ(The World's 100 Most Powerful Women)ಯರ 21 ನೇ ವಾರ್ಷಿಕ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಭಾರತದ ಮೂವರು ಮಹಿಳೆಯರು ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಹೌದು ವಿಶ್ವದ 100 ಅತ್ಯಂತ ಪವರ್ ಫುಲ್ ಮಹಿಳೆಯರ ಪಟ್ಟಿಯಲ್ಲಿ ಮೂವರು ಭಾರತೀಯರಾದ ನಿರ್ಮಲಾ ಸೀತಾರಾಮನ್, ರೋಶ್ನಿ ನಾಡರ್ ಮಲ್ಹೋತ್ರಾ ಮತ್ತು ಕಿರಣ್ ಮಜುಂದಾರ್-ಶಾ ಕಾಣಿಸಿಕೊಂಡಿದ್ದಾರೆ.
ವ್ಯಾಪಾರ, ಮನರಂಜನೆ, ರಾಜಕೀಯ, ಲೋಕೋಪಕಾರ ಮತ್ತು ನೀತಿ ನಿರೂಪಣೆ ಮುಂತಾದ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಬದಲಾವಣೆಗಳನ್ನು ಮಾಡುತ್ತಿರುವ ಅಂಶಗಳನ್ನು ಪರಿಗಣಿಸಿ ಪ್ರಭಾವಿ ಮಹಿಳೆಯ ಶ್ರೇಯಾಂಕ ಪಟ್ಟಿ ತಯಾರಿಸಲಾಗುತ್ತದೆ. ಈ ಪಟ್ಟಿನಲ್ಲಿ ಮೂರು ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಯನ್ನು ತಲುಪಿದ್ದಾರೆ. ಹಾಗಿದ್ರೆ ಇವರ ಸಂಕ್ಷಿಪ್ತ ವಿವರಗಳನ್ನು ನೋಡಿಕೊಂಡು ಬರೋಣ

ನಿರ್ಮಲಾ ಸೀತಾರಾಮನ್ : ವಿಶ್ವದ 28ನೇ ಪವರ್ ಫುಲ್ ಮಹಿಳೆ
ಫೋರ್ಬ್ಸ್ ನ ವಿಶ್ವದ 100 ಅತ್ಯಂತ ಪ್ರಭಾವಶಾಲಿ ಮಹಿಳೆಯ ಲಿಸ್ಟ್ ನಲ್ಲಿ ಭಾರತದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ 28 ನೇ ಸ್ಥಾನವನ್ನು ಅಲಂಕರಿಸಿದ್ದಾರೆ. 65 ವರ್ಷದ ್ ಸೀತಾರಾಮನ್ ಅವರು 2019 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಾಗ ಭಾರತದ ಮೊದಲ ಪೂರ್ಣ ಸಮಯದ ಮಹಿಳಾ ಹಣಕಾಸು ಸಚಿವರಾಗಿ ನೇಮಕಗೊಂಡರು. ಜೂನ್ 2024 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಅವರನ್ನು ವಿತ್ತ ಸಚಿವೆಯಾಗಿ ಮರುನೇಮಕ ಮಾಡಲಾಯಿತು. ಅಂದಿನಿಂದ ೭ ಬಜೆಟ್‌ಗಳನ್ನು ಮಂಡಿಸಿದ ಅನುಭವ ಹೊಂದಿದ್ದಾರೆ. ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆ ದೇಶವಾದ ಭಾರತದ ಸುಮಾರು $4 ಟ್ರಿಲಿಯನ್ ಆರ್ಥಿಕತೆಯನ್ನು ನಿರ್ವಹಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಶ್ರೀಮತಿ ಸೀತಾರಾಮನ್ ಅವರು ಅಗ್ರಿಕಲ್ಚರಲ್ ಇಂಜಿನಿಯರ್ಸ್ ಅಸೋಸಿಯೇಷನ್ (UK) ನ ಅರ್ಥಶಾಸ್ತ್ರಜ್ಞರಿಗೆ ಸಹಾಯಕರಾಗಿ ಹಾಗೂ PWC (ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್) ಮತ್ತು BBC ವರ್ಲ್ಡ್ ಸರ್ವೀಸ್‌ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಹಿರಿಯ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.ಅವರು ಭಾರತದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ರೋಶನಿ ನಾಡರ್ ಮಲ್ಹೋತ್ರಾ (81ನೇ ಸ್ಥಾನ)
ಫೋರ್ಬ್ಸ್‌ನ ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ 81ನೇ ಸ್ಥಾನ ಪಡೆದಿರುವ ರೋಶ್ನಿ ನಾಡರ್ ಮಲ್ಹೋತ್ರಾ ಅವರು ಭಾರತದ ಐಟಿ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ. ರೋಶ್ನಿ ಅವರು ಭಾರತದ ಪ್ರಮುಖ ಐಟಿ ಸೇವಾ ಸಂಸ್ಥೆಗಳಲ್ಲಿ ಒಂದಾದ HCL ಟೆಕ್ನಾಲಜೀಸ್‌ನ ಅಧ್ಯಕ್ಷರಾಗಿದ್ದಾರೆ ಮತ್ತು HCL ಕಾರ್ಪೊರೇಶನ್‌ನ ಸಿಇಒ ಆಗಿದ್ದಾರೆ. 1976 ರಲ್ಲಿ ತನ್ನ ತಂದೆ ಶಿವ ನಾಡಾರ್ ಸ್ಥಾಪಿಸಿದ $12 ಬಿಲಿಯನ್ ಉದ್ಯಮದ ಕಾರ್ಯತಂತ್ರದ ನಿರ್ಧಾರಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ.
ರೋಶ್ನಿ ನಾಡರ್ ಮಲ್ಹೋತ್ರಾ ಅವರು ಒಬ್ಬ ಯಶಸ್ವಿ ಉದ್ಯಮಿಯಾಗಿ ಮಾತ್ರವಲ್ಲದೆ, ಸಮಾಜ ಸೇವಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅವರು ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಯತ್ತ ತಮ್ಮ ಗಮನ ಹರಿಸಿದ್ದಾರೆ.HCL ಟೆಕ್ನಾಲಜೀಸ್‌ನ ಅಧ್ಯಕ್ಷರಾಗಿರುವ ರೋಶ್ನಿ ನಾಡರ್ ಮಲ್ಹೋತ್ರಾ ಅವರು ಶಿವ ನಾಡಾರ್ ಫೌಂಡೇಶನ್‌ನ ಟ್ರಸ್ಟಿಯಾಗಿಯೂ ಇದ್ದಾರೆ. ಇದಲ್ಲದೇ ನೈಸರ್ಗಿಕ ಆವಾಸಸ್ಥಾನಗಳು ಮತ್ತು ಸ್ಥಳೀಯ ಜೈವಿಕ ವೈವಿಧ್ಯತೆಗಳನ್ನು ಸಂರಕ್ಷಿಸಲು ಶ್ರಮಿಸುತ್ತಿರುವ ದಿ ಹ್ಯಾಬಿಟಾಟ್ಸ್ ಟ್ರಸ್ಟ್ ಅನ್ನು ಸಹ ಸ್ಥಾಪಿಸಿದರು. ರೋಶ್ನಿ ಅವರ ವಿದ್ಯಾಭ್ಯಾಸದ ಬಗ್ಗೆ ನೋಡುವುದಾದರೆ ಪತ್ರಿಕೋದ್ಯಮದಲ್ಲಿ ಹಿನ್ನೆಲೆ ಹೊಂದಿರುವುದು ಮಾತ್ರವಲ್ಲದೇ ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪಡೆದಿದ್ದಾರೆ.
ಕಿರಣ್ ಮಜುಂದಾರ್-ಶಾ (82ನೇ ಸ್ಥಾನ)
ಫೋರ್ಬ್ಸ್‌ನ ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ 82ನೇ ಸ್ಥಾನ ಮತ್ತು 2024 ರಲ್ಲಿ ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ 91 ನೇ ಸ್ಥಾನ ಪಡೆದಿರುವ ಕಿರಣ್ ಮಜುಂದಾರ್-ಶಾ ಅವರು ಯಶಸ್ವಿ ಉದ್ಯಮಿ ಮಾತ್ರವಲ್ಲದೆ, ಭಾರತದ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 1978 ರಲ್ಲಿ ಸ್ಥಾಪನೆಯಾದ ಬಯೋಕಾನ್ ಕಂಪನಿಯ ಸಂಸ್ಥಾಪಕ ಮತ್ತು ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಸಣ್ಣ ಗ್ಯಾರೇಜಿನಲ್ಲಿ ಕೇವಲ 10,000 ರೂ ಬಂಡವಾಳದೊಂದಿಗೆ ಬಯೋಕಾನ್ ಸಂಸ್ಥೆಯನ್ನು ಹುಟ್ಟುಹಾಕಿದ್ದ ಶಾ ಅವರ ಸಂಸ್ಥೆಯೂ ಇಂದು ಯುಎಸ್ ಸೇರಿದಂತೆ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಬಯೋಕಾನ್ ಇಂದು ಏಷ್ಯಾದ ಅತಿದೊಡ್ಡ ಇನ್ಸುಲಿನ್ ಉತ್ಪಾದನಾ ಸೌಲಭ್ಯಗಳಲ್ಲಿ ಒಂದನ್ನು ಮಲೇಷ್ಯಾದಲ್ಲಿ ಹೊಂದಿದೆ.
2022ರಲ್ಲಿ, ಬಯೋಕಾನ್ ಬಯೋಲಾಜಿಕ್ಸ್ $3.3 ಬಿಲಿಯನ್‌ಗೆ ವಿಯಾಟ್ರಿಸ್‌ನ ಬಯೋಸಿಮಿಲರ್ಸ್ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡು ತನ್ನ ವ್ಯಾಪಾರವನ್ನು ವಿಸ್ತರಿಸಿಕೊಂಡಿದೆ. ಇದಲ್ಲದೆ, ಬಯೋಕಾನ್-ಬೆಂಬಲಿತ ಬಿಕಾರಾ ಥೆರಪ್ಯೂಟಿಕ್ಸ್‌ನ IPO ಸೆಪ್ಟೆಂಬರ್ 2024 ರಲ್ಲಿ ನಾಸ್ಡಾಕ್‌ನಲ್ಲಿ $362 ಮಿಲಿಯನ್ ಗಳಿಸಿದ್ದು, ಕಿರಣ್ ಮಜುಂದಾರ್-ಶಾ ಅವರ ದೂರದೃಷ್ಟಿಯನ್ನು ಸಾಬೀತುಪಡಿಸಿದೆ .2019 ರಲ್ಲಿ, ಅವರು ಮತ್ತು ಅವರ ದಿವಂಗತ ಪತಿ ಜಾನ್ ಶಾ, ಕ್ಯಾನ್ಸರ್ ಸಂಶೋಧನೆಯನ್ನು ಮುನ್ನಡೆಸಲು ಗ್ಲ್ಯಾಸ್ಗೋ ವಿಶ್ವವಿದ್ಯಾಲಯಕ್ಕೆ $ 7.5 ಮಿಲಿಯನ್ ದೇಣಿಗೆ ನೀಡಿ ಸಮಾಜ ಸೇವೆಯತ್ತಲೂ ಮುಂದೆ ಬಂದಿದ್ದಾರೆ.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications