ಪಾಕಿಸ್ತಾನ ನಿಜಕ್ಕೂ ಭಾರತದ ಪ್ರತೀಕಾರಕ್ಕೆ ತತ್ತರಿಸಿ ಹೋದಂತೆ ಕಾಣುತ್ತಿದೆ. ಆಪರೇಷನ್ ಸಿಂದೂರ್ ಶಕ್ತಿ ತೋರಿಸಿದ ಭಾರತ, ಈಗ ಮತ್ತೊಂದು ಬಿಸಿ ಮುಟ್ಟಿಸಿದೆ. ನಿಜಕ್ಕೂ ಇಂದು ಪಾಕಿಸ್ತಾನದ ಪಾಲಿಗೆ ಎಂದಿನಂತಿದ್ದ ಶನಿವಾರವಾಗಿರಲಿಲ್ಲ. ಶನಿವಾರ ಬೆಳಗ್ಗೆ ಏಳುವಾಗಲೇ ಭಾರತದ ದಾಳಿಯ ಬಿಸಿ ನೋಡಿದೆ. ಕಳೆದ ಬಾರಿ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿದ್ದ ಭಾರತೀಯ ಸೇನೆ, ಈಗ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಬಳಿ ಸ್ಪೋಟ ಮಾಡಿದೆ. ಇದು ಪಾಕಿಸ್ತಾನಕ್ಕೆ ಮತ್ತೊಂದು ಭೀತಿ ಹುಟ್ಟಿಸಿದೆ. ಕಣ್ಣು ಮುಚ್ಚಿ ನಿದ್ರೆ ಮಾಡಲೂ ಹೆದರುವಂತೆ ಮಾಡಿದೆ.

ಹೌದು, ಪಾಕಿಸ್ತಾನ ನಡೆಸಿದ 300ಕ್ಕೂ ಡ್ರೋನ್‌ಗಳ ದಾಳಿ ಭಾರತ ಸರಿಯಾದ ಪ್ರತೀಕಾರ ತೀರಿಸಿಕೊಂಡಿದೆ. ನೀವು ಒಂದು ಏಟು ಹೊಡೆದರೆ ನಾವು ಮೂರು ಏಟು ಹೊಡೆದೇ ತೀರುತ್ತೇವೆಂದು ತೋರಿಸಿದೆ. , ಪಾಕಿಸ್ತಾನದ ಪ್ರಮುಖ ವಾಯುನೆಲೆಗಳಲ್ಲಿ ಭಾರೀ ಸ್ಫೋಟಗಳು ಸಂಭವಿಸಿದವು. ಪರಿಣಾಮವಾಗಿ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ನಾಗರಿಕ ಮತ್ತು ವಾಣಿಜ್ಯ ವಿಮಾನ ಸಂಚಾರಕ್ಕಾಗಿ ಬಂದ್ ಮಾಡಿದೆ.
ಇನ್ನು ಇಸ್ಲಾಮಾಬಾದ್‌ನಿಂದ 10 ಕಿ.ಮೀ ದೂರದಲ್ಲಿರುವ ನೂರ್ ಖಾನೆ ವಾಯುನೆಲೆ, ರಾವಲ್ಪಿಂಡಿಯಲ್ಲಿರುವ ಪ್ರಮುಖ ಮಿಲಿಟರಿ ಕೇಂದ್ರ, ಭಾರಿ ಸ್ಫೋಟದಿಂದ ಬೆಂಕಿಗೆ ಆಹುತಿಯಾಗಿದೆ. ಪಾಕಿಸ್ತಾನದ ಸೇನೆಯು ನೂರ್ ಖಾನ್ ವಾಯುನೆಲೆ ಜೊತೆಗೆ, ಚಕ್ವಾಲ್ ಜಿಲ್ಲೆಯ ಮುರಿಯದ್ ವಾಯುನೆಲೆ ಮತ್ತು ಜಾಂಗ್ ಜಿಲ್ಲೆಯ ರಫೀಕಿ ವಾಯುನೆಲೆಗಳ ಮೇಲೆ ಸಹ ದಾಳಿ ನಡೆದಿರುವುದಾಗಿ ದೃಢಪಡಿಸಿದೆ.
ಇದಕ್ಕೂ ಮುನ್ನ ಭಾರತದಲ್ಲಿ ಶ್ರೀನಗರದಲ್ಲಿ ಸಹ ಬೆಳ್ಳಂ ಬೆಳಗ್ಗೆ ಸ್ಫೋಟಗಳ ಶಬ್ದ ಕೇಳಿಬಂದಿವೆ. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತೀವ್ರವಾಗಿ ಹೆಚ್ಚಾಗಿದೆ. ನೂರ್ ಖಾನ್ ವಾಯುನೆಲೆ ಲಾಜಿಸ್ಟಿಕ್ ಮತ್ತು ವಿಐಪಿ ಸಾರಿಗೆ ಕಾರ್ಯಾಚರಣೆಗಳಿಗೆ ಪ್ರಮುಖ ಕೇಂದ್ರವಾಗಿದ್ದು, ಪಾಕಿಸ್ತಾನದ ಅತ್ಯಂತ ಸೂಕ್ಷ್ಮ ಸೈನಿಕ ಘಟಕಗಳಲ್ಲಿ ಒಂದಾಗಿದೆ. ಪಂಜಾಬ್‌ನ ಶೋರ್ಕೋಟ್‌ನಲ್ಲಿರುವ ರಫೀಕಿ ವಾಯುನೆಲೆಯು ಜೆಎಫ್-17, ಮಿರಾಜ್ 5 ಫೈಟರ್ ಜೆಟ್‌ಗಳು ಮತ್ತು ಅಲೋಯೆಟ್ III ಹೆಲಿಕಾಪ್ಟರ್‌ಗಳನ್ನು ಹೊಂದಿರುವ ಪ್ರಮುಖ ಯುದ್ಧ ವಿಮಾನ ನೆಲೆಗಳಲ್ಲೊಂದು. ಮುರಿಯದ್ ವಾಯುನೆಲೆಯು ಪಾಕಿಸ್ತಾನದ ಡ್ರೋನ್ ಯುದ್ಧದ ಕಮಾಂಡ್ ಸೆಂಟರ್ ಆಗಿ ಪರಿಗಣಿಸಲಾಗಿದೆ. ಇದರಲ್ಲಿ ಶಹಪರ್ I, ಬುರ್ರಾಕ್ ಮತ್ತು ಟರ್ಕಿಶ್ ಬೇರಕ್ತಾರ್ ಡ್ರೋನ್‌ಗಳನ್ನೊಳಗೊಂಡ ಉನ್ನತ ತಂತ್ರಜ್ಞಾನ ಡ್ರೋನ್‌ಗಳ ಫ್ಲೀಟ್ ಇದ್ದು, ಇತ್ತೀಚೆಗೆ ಅಕಿನ್ಸಿ-ಎಲ್ ಯುದ್ಧ ಡ್ರೋನ್ ಕೂಡ ನಿಯೋಜಿಸಲಾಗಿದೆ.
ಈ ಬೆಳವಣಿಗೆಗಳ ನಡುವೆ, ಪಾಕಿಸ್ತಾನ ಇಂದು ತನ್ನ ವಾಯುಪ್ರದೇಶವನ್ನು ಸಂಪೂರ್ಣ ಬಂದ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಡ್ರೋನ್ ದಾಳಿಯಿಂದಾಗಿ ನಾಗರಿಕ ವಿಮಾನಗಳು ಅಪಾಯಕ್ಕೆ ಒಳಗಾಗುತ್ತಿವೆ ಎಂಬ ಆತಂಕದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರವನ್ನು ಪಾಕಿಸ್ತಾನ ವಾಯುಪಡೆಗೆ ನೋಟಮ್ (NOTAM) ಮೂಲಕ ತುರ್ತಾಗಿ ತಿಳಿಸಲಾಗಿದೆ.
ಭಾರತೀಯ ಸೇನೆಯ ಪ್ರಕಾರ, ಪಾಕಿಸ್ತಾನವು ಲೇಹ್‌ನಿಂದ ಸರ್ ಕ್ರೀಕ್‌ವರೆಗೆ 26 ತಾಣಗಳಲ್ಲಿ ತನ್ನ ಡ್ರೋನ್‌ಗಳನ್ನು ನಿಯೋಜಿಸಿದ್ದು, ಬಹುತೇಕ ಗುರಿಯಾಗಿದ್ದವು ಮಿಲಿಟರಿ ನೆಲೆಗಳು ಮತ್ತು ನಾಗರಿಕ ವಿಮಾನಯಾನ ಸೌಲಭ್ಯಗಳು. ಭಾರತವು ಈ ದಾಳಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದಾಗ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚಿದಂತಾಯಿತು. ಭಾರತವು ಪಾಕಿಸ್ತಾನ ವಿರುದ್ಧ ಕಠಿಣವಾಗಿ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನವು ನಾಗರಿಕ ವಿಮಾನಗಳನ್ನು ಗುರಿಯಾಗಿಸುತ್ತಿದೆ ಎಂಬ ಆರೋಪವನ್ನೂ ಮಾಡಿದೆ. ಸೇನೆಯ ಕರ್ನಲ್ ಸೋಫಿಯಾ ಖುರೇಷಿ, ಐಎಎಫ್‌ನ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ಚಲನವಲನಗಳನ್ನು ಗಂಭೀರವಾಗಿ ವಿಮರ್ಶಿಸಿದರು.
ಈ ಬೆಳವಣಿಗೆಗಳು ಅಂತರರಾಷ್ಟ್ರೀಯ ಸಮುದಾಯದಲ್ಲಿಯೂ ಆತಂಕ ಉಂಟುಮಾಡಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ತೆ ಒತ್ತಡದ ವಾತಾವರಣ ಉಂಟಾಗಿದೆ. ಮುಂದಿನ ಕೆಲ ದಿನಗಳು ಈ ಪ್ರದೇಶದ ಭದ್ರತಾ ಪರಿಸ್ಥಿತಿಗೆ ಪ್ರಮುಖವಾಗಲಿವೆ.


Click it and Unblock the Notifications