ನವದೆಹಲಿ, ಮಾರ್ಚ್ 10: "ಟೆಕ್ನಿಕಲ್ ಗುರೂಜಿ" ಎಂದೇ ಖ್ಯಾತರಾದ ಗೌರವ್ ಚೌಧರಿ ಸಿರಿವಂತ ಭಾರತೀಯ ಟೆಕ್ ಯೂಟ್ಯೂಬರ್ ಆಗಿದ್ದಾರೆ. ಇವರ ವಿಡಿಯೋಗಳನ್ನು ಗಮನಿಸುವುದಾದರೆ ಜಗತ್ತಿನಾದ್ಯಂತ ಹೆಚ್ಚು ವೀಕ್ಷಿಸಿದ ತಾಂತ್ರಿಕ ಯೂಟ್ಯೂಬರ್‌ಗಳಲ್ಲಿ ಒಬ್ಬರಾಗಿದ್ದಾರೆ. "ಟೆಕ್ನಿಕಲ್ ಗುರೂಜಿ" ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಮುನ್ನಡೆಸುತ್ತಿರುವ ಅವರು ಸುಮಾರು 23.5 ಮಿಲಿಯನ್ ಗೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ಮಾ.08ರ ಶುಕ್ರವಾರ ಮೊಟ್ಟಮೊದಲ ರಾಷ್ಟ್ರೀಯ ಕ್ರಿಯೇಟರ್ಸ್ ಪ್ರಶಸ್ತಿ(National Creators Award)ಯನ್ನು ದೆಹಲಿಯ ಭಾರತ ಮಂಟಪದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರದಾನ ಮಾಡಿದ್ದು, ಇದರಲ್ಲಿ ಗೌರವ್ ಚೌಧರಿ ಅವರಿಗೆ ಟೆಕ್ ವಿಭಾಗದಲ್ಲಿ ಅತ್ಯುತ್ತಮ ಕ್ರಿಯೇಟರ್ ಪ್ರಶಸ್ತಿ(Best Creator in Tech Category) award)ಯನ್ನು ನೀಡಲಾಯಿತು. ಅತಿರಂಜಿತ ಜೀವನಶೈಲಿಗೆ ಹೆಸರುವಾಸಿಯಾಗಿರುವ ಗೌರವ್ ಚೌಧರಿ ಅವರ ನಿವ್ವಳ ಮೌಲ್ಯ 360 ಕೋಟಿ ರೂ. ಆಗಿದೆ.

ಗೌರವ್ ಚೌಧರಿ ಯಾನೆ ಟೆಕ್ನಿಕಲ್ ಗುರೂಜಿ 1991 ರಲ್ಲಿ ರಾಜಸ್ಥಾನದ ಅಜ್ಮೀರ್‌ನಲ್ಲಿ ಜನಿಸಿದ್ದು, ಕೇಂದ್ರೀಯ ವಿದ್ಯಾಲಯದಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದರು. ಆ ಬಳಿಕ ತಮ್ಮ 16 ನೇ ವಯಸ್ಸಿನಲ್ಲಿ ಕೋಡಿಂಗ್ ಕಲಿಕೆ ಆರಂಭಿಸಿದರು. ಕೋಡಿಂಗ್ ನಲ್ಲಿ ತಮಗಿದ್ದ ಅನುವ್ಹವದಿಂದಾಗಿ, ಅವರು ತಮ್ಮ ಡಿಜಿಟಲ್ ಸಾಮ್ರಾಜ್ಯವನ್ನು ಸ್ಥಾಪಿಸಿದರು.ಇವ್ರು BITS ಪಿಲಾನಿಯ ದುಬೈ ಕ್ಯಾಂಪಸ್‌ನಲ್ಲಿ ಮೈಕ್ರೋಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಗೌರವ್ ಅವರು, ಯೂಟ್ಯೂಬ್‌ನಿಂದ ಭಾರಿ ಮೊತ್ತವನ್ನು ಗಳಿಸುವುದು ಮಾತ್ರವಲ್ಲದೇ, ದುಬೈನಲ್ಲಿ ವ್ಯಾಪಾರವನ್ನೂ ನಡೆಸುತ್ತಿದ್ದಾರೆ. ದುಬೈನಲ್ಲಿ ಸುಮಾರು 60 ಕೋಟಿ ಮೌಲ್ಯದ ಮನೆಯಲ್ಲಿ ವಾಸವಾಗಿದ್ದಾರೆ.
ಗೌರವ್ ಅವರು 2012 ರಲ್ಲಿ ಯೂಟ್ಯೂಬ್ ಚಾನೆಲ್ ತೆರೆಯಲು ಯೋಚಿಸಿದ್ರೂ, ಅವರು " ಟೆಕ್ನಿಕಲ್ ಗುರೂಜಿ" ಎಂಬ ಚಾನಲ್ ಅನ್ನು ಪ್ರಾರಂಭಿಸಲು ಅವರಿಗೆ ಸುಮಾರು 3 ಮೂರು ವರ್ಷಗಳೇ ಬೇಕಾಯಿತು. 2017 ರ ಹೊತ್ತಿಗೆ, ಅವರು ಚಾನೆಲ್ 10 ಮಿಲಿಯನ್ ಫಾಲೋವರ್ಸ್ ಗಳಿಸುವಲ್ಲಿ ಯಶಸ್ವಿಯಾಯಿತು.. ಸಂಕೀರ್ಣವಾದ ವಿಷಯಗಳನ್ನು ಸುಲಭವಾದ ಸರಳ ಭಾಷೆಯಲ್ಲಿ ರಸವತ್ತಾಗಿ ವಿವರಿಸುವುದರಲ್ಲಿ ಅವರು ಹೆಸರುವಾಸಿಯಾಗಿದ್ದಾರೆ.
ಅವರ ಸಂಗ್ರಹದಲ್ಲಿಒಟ್ಟು 11 ಕಾರುಗಳಿವೆ. ಈ ಪೈಕಿ ನೀಲಿ ಬಣ್ಣದ ರೋಲ್ಸ್ ರಾಯ್ಸ್ ಘೋಸ್ಟ್ ಇದರ ಮಾರುಕಟ್ಟೆ ಮೌಲ್ಯ ರೂ 8 ಕೋಟಿ ಆಗಿದೆ. ಇನ್ನು 4.75 ಕೋಟಿ ರೂ ಮೌಲ್ಯದ McLaren GT ಕಾರನ್ನು ಅವರ ಸಹೋದರ ಉಡುಗೊರೆಯಾಗಿ ನೀಡಿದ್ದರು.
ಇದಲ್ಲದೆ 2.10 ಕೋಟಿ ರೂ. ಮೌಲ್ಯದ ರೇಂಜ್ ರೋವರ್ ವೋಗ್ , 1.90 ಕೋಟಿ ರೂ. ಮೌಲ್ಯದ Porsche Panamera GTS ಕಾರ್ , 1.89 ಕೋಟಿಯ Porsche Panamera, 1.72 ಕೋಟಿಯ ಮರ್ಸಿಡಿಸ್ ಬೆಂಜ್, 1.42 ಕೋಟಿಯ BMW 750Li ಪ್ರೀಮಿಯಂ ಸೆಡಾನ್, 81.70 ಲಕ್ಷ ರೂ.ಗಳ ಮರ್ಸಿಡಿಸ್ ಬೆಂಜ್ 500ML, 68 ಲಕ್ಷ ರೂ.ಗಳ ಆಡಿ ಎ6 ಕಾರ್, 15.54 ಲಕ್ಷ ಬೆಲೆಯ ಮಹೀಂದ್ರ ಥಾರ್ನ ಟಾಪ್ ಮಾಡೆಲ್ ಹೊಂದಿದ್ದಾರೆ.


Click it and Unblock the Notifications