ಬೆಂಗಳೂರು, ಜೂನ್ 5: "ಕಿಂಗ್ ಆಫ್ ರೋಮ್ಯಾನ್ಸ್" ಎಂದೇ ಅಭಿಮಾನಿಗಳಿಂದ ಆರಾಧಿಸಲ್ಪಡುವ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ತಮ್ಮ ನಟನಾ ಕೌಶಲ್ಯ, ಮೋಡಿಯಿಂದ 30 ವರ್ಷಗಳಿಗೂ ಹೆಚ್ಚು ಕಾಲ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಒಂದೆಡೆ SRK ಅವರು ತಮ್ಮ ಅಮೋಘ ನಟನಾ ಕೌಶಲ್ಯದಿಂದ ಅಭಿಮಾನಿಗಳನ್ನು ಮೋಡಿ ಮಾಡಿದ್ರೆ , ಇನ್ನೊಂದೆಡೆ ಸದಾ ಸ್ಟೈಲಿಶ್ ಆಗಿ ಮಿಂಚುವ ಮೂಲಕ ಪ್ಯಾಷನ್ ಪ್ರಿಯರ ಮನ ಗೆದ್ದಿದ್ದಾರೆ.
ಸ್ಟಾರ್ ನಟ ಶಾರುಖ್ ಖಾನ್ ಅವರಿಗೆ ಕೈಗಡಿಯಾರಗಳೆಂದರೆ ವಿಶೇಷ ಕ್ರೇಜ್. ಇವರು ತಮ್ಮ ಕಲೆಕ್ಷನ್ ನಲ್ಲಿ ಅನೇಕ ದುಬಾರಿ ವಾಚ್ಗಳನ್ನು ಹೊಂದಿದ್ದಾರೆ. ಇದರಲ್ಲಿ ಎಲ್ಲರ ಕಣ್ಣುಕುಕ್ಕುವಂತೆ ಮಾಡಿದ್ದು ಇತ್ತೀಚೆಗೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಶಾರುಖ್ ಧರಿಸಿರುವ ವಾಚ್.

ಹೌದು ಕೋಲ್ಕ ತ್ತಾ ನೈಟ್ ರೈಡರ್ಸ್ (ಕೆಕೆಆರ್ ) ನ ಸಹ-ಮಾಲೀಕರಾಗಿರುವ ಶಾರುಕ್ , ಐಪಿಎಲ್ 2024 ರ ಫೈನಲ್ ತಂಡದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಖಾಮುಖಿಯಾದಾಗ ಪಂದ್ಯಾಟ ನೋಡಲು ಆಗಮಿಸಿದ್ದರು. ಕೆಕೆಆರ್ ಭರ್ಜರಿ ಜಯ ಗಳಿಸಿ ಟ್ರೋಫಿ ಎತ್ತಿಕೊಂಡಿತು.
ಈ ಸಂಭ್ರಮಾಚರಣೆಯಲ್ಲಿ ಕಿಂಗ್ ಖಾನ್ ಕೂಡಾ ಭಾಗಿಯಾಗಿರು. ಈ ವೇಳೆ ಶಾರುಖ್ ಅವರ ಕೈಯಲ್ಲಿದ್ದ ವಾಚ್ ಕೂಡಾ ಅವರ ಅಭಿಮಾನಿಗಳ ಗಮನ ಸೆಳೆಯಿತು. ಏಕೆಂದರೆ ಅಂದು ಅವರು ಧರಿಸಿದ್ದ ವಾಚ್ ನ ಬೆಲೆ ಬರೋಬ್ಬರಿ ೪.೯೯ ಕೋಟಿ ರೂಪಾಯಿ.!
'ರಿಚರ್ಡ್ ಮಿಲ್' (Richard Mille) ಕಂಪನಿಯ ಈ ವಾಚ್ ನ ಒಳಗೆ ತಲೆಬುರುಡೆ ವಿನ್ಯಾಸ ಕಾಣಬಹುದಾಗಿದ್ದು, ರಿಚರ್ಡ್ ಮಿಲ್ RM 052 ಟೂರ್ಬಿಲ್ಲನ್ ಸ್ಕ ಲ್ ಟೈಟಾನಿಯಂ 2012 ಇದು ಲಿಮಿಟೆಡ್ ಎಡಿಷನ್ ಆಗಿದ್ದು, ಪ್ರಪಂಚದಾದ್ಯಂತ ತಯಾರಿಸಲಾದ ಕೆಲವೇ ಕೆಲವು ವ್ಯಕ್ತಿಗಳ ಬಳಿ ಮಾತ್ರ ಇದೆ. ಈ ಕಂಪನಿಯೂ ೩೭ ಕೋಟಿ ರೂ. ಮೌಲ್ಯದ ವಾಚ್ ಕೂಡಾ ತಯಾರಿಸಿದೆ.
ರಿಚರ್ಡ್ ಮಿಲ್ ಅವರ ಅಧಿಕೃತ ವೆಬ್ಸೈಟ್ RM 052 ಟೂರ್ಬಿಲ್ಲನ್ ಸ್ಕ ಲ್ ಅನ್ನು "ನೈಜ ಹಾಟ್ ಹಾರ್ಲೋಗೇರಿ" ಎಂದು ವಿವರಿಸುತ್ತದೆ. ಗಡಿಯಾರವು ಗ್ರೇಡ್ 5 ಟೈಟಾನಿಯಂ ಅನ್ನು ಮಾನವ ಕಪಾಲದ ಮಾದರಿಯಲ್ಲಿ ಕೆತ್ತಲಾಗಿದೆ.
ಶಾರುಖ್ ಖಾನ್ ಬಳಿ ಇರುವ ಇತರ ದುಬಾರಿ ವಾಚ್ ಗಳು:
ಪಾಟೆಕ್ ಫಿಲಿಪ್ ನಾಟಿಲಸ್ 5811/1G
ರಿಚರ್ಡ್ ಮಿಲ್ ವಾಚ್ ಅಲ್ಲದೆ ಶಾರುಖ್ ಖಾನ್ ಬಳಿ ಪಾಟೆಕ್ ಫಿಲಿಪ್ ವಾಚ್ 5811/1G ಕೂಡಾ ಇದ್ದು ಇದರ ಮೌಲ್ಯ 1. 22 ಕೋಟಿ. ರೂ. ಆಗಿದೆ. ಕಳೆದ ವರ್ಷ 'ಜವಾನ್' ಪತ್ರಿಕಾಗೋಷ್ಠಿಯಲ್ಲಿ ಈ ವಾಚ್ ಧರಿಸಿ ಸುದ್ದಿಯಾಗಿದ್ದರು.
ಆಡೆಮಾರ್ಸ್ ಬ್ಲೂ ಸೆರಾಮಿಕ್ ರಾಯಲ್ ಓಕ್
ಆಡೆಮಾರ್ಸ್ ಪಿಗುಯೆಟ್ ರಾಯಲ್ ಓಕ್ (Piguet Royal Oak Perpetual Calendar) ವಾಚ್ ಕೂಡಾ ಅವರ ಕಲೆಕ್ಷನ್ ನಲ್ಲಿದ್ದು ಇದರ ಮೌಲ್ಯ ರೂ 1. 2 ಕೋಟಿ ಮೌಲ್ಯ ಆಗಿದೆ.
ರೋಲೆಕ್ಸ್ GMT ಮಾಸ್ಟರ್ II
ಶಾರುಖ್ ಖಾನ್ ಕಳೆದ ವರ್ಷ ತನ್ನ ಮಗಳು ಸುಹಾನಾ ಖಾನ್ ಜೊತೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ರೋಲೆಕ್ಸ್ GMT ಮಾಸ್ಟರ್ II ಧರಿಸಿದ್ದರು. ಈ ವಾಚ್ ತನ್ನ meteorite ಡಯಲ್ ಮತ್ತು ಅಂದವಾದ ಕುಶಲಗಾರಿಕೆ ಹೆಸರುವಾಸಿಯಾಗಿದೆ. ಇದರ ಬೆಲೆ ಸುಮಾರು 51. 23 ಲಕ್ಷಗಳು!
ಆಡೆಮರ್ಸ್ ಪಿಗುಯೆಟ್ 124300
ದುಬೈನಲ್ಲಿ ನಡೆದ ಇಂಟರ್‌ನ್ಯಾಶನಲ್ ಲೀಗ್ ಟಿ20ಯ ಕಿಕ್-ಆಫ್ ಈವೆಂಟ್‌ನಲ್ಲಿ ಎಸ್‌ಆರ್‌ಕೆ ಆಡೆಮಾರ್ಸ್ ಪಿಗೆಟ್ ಕೈಗಡಿಯಾರವನ್ನು ಧರಿಸಿದ್ದರು. ಈ ಕೈಗಡಿಯಾರದ ಬೆಲೆ 4.74 ಕೋಟಿ ಎಂದು ಹೇಳಲಾಗಿದೆ.
ವಾಚ್ ಗಳಂತೆಯೇ ಬಾಲಿವುಡ್ ಐಕಾನ್ ಶಾರುಖ್ ಖಾನ್ ಅವರಿಗೂ ಐಷಾರಾಮಿ ಕಾರುಗಳ ಸಂಗ್ರಹದ ಹವ್ಯಾಸವಿದ್ದು ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್‌ಹೆಡ್ ಕೂಪೆ, ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್, ಬುಗಾಟಿ ವೆಯ್ರಾನ್, ಹ್ಯುಂಡೈ ಕ್ರೆಟಾ ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್ ಎಸ್ 350, ಬಿಎಂಡಬ್ಲ್ಯು ಐ8 ಾವರ ಕಲೆಕ್ಷನ್ ನಲ್ಲಿದೆ.


Click it and Unblock the Notifications